ಶಿವಮೊಗ್ಗ: ಜನಾರ್ಧನ ರೆಡ್ಡಿಗೆ ಯಾವಾಗ ಏನು ಮಾತನಾಡಬೇಕು ಎಂಬ ಸಂಸ್ಕೃತಿಯೂ ಇಲ್ಲ, ಮನುಷ್ಯತ್ವವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ಯಾರಾದರೂ ಅಂತಹ ಮಾತುಗಳನ್ನು ಆಡುತ್ತಾರಾ, ಸಾರ್ವಜನಿಕ ಜೀವನದಲ್ಲಿ ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿದ್ದರಾಮಯ್ಯ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದರು: ಜನಾರ್ಧನ ರೆಡ್ಡಿ ಆರೋಪ
ಅಷ್ಟಕ್ಕೂ ನಾನೇನೂ ಜನಾರ್ಧನ್ ರೆಡ್ಡಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿಲ್ಲ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ರಿಪಬ್ಲಿಕ್ ಆಫ್ ಬಳ್ಳಾರಿ ವರದಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಜನಾರ್ಧನ್ ರೆಡ್ಡಿ ಮಗಳ ಮದುವೆ ಹೇಗೆ ಮಾಡಿದ್ರು? ದುಡ್ಡು ಎಲ್ಲಿಂದ ಬಂತು? ಅವರೇನು ರಾಜಮನೆತನದಿಂದ ಬಂದವ್ರಾ? 40 ವರ್ಷಗಳಿಂದ ಮೈಸೂರಿನಲ್ಲಿ ನನಗೆ ಒಂದು ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ' ಎಂದು ಕಿಡಿ ಕಾರಿದರು.
ಬಹಿರಂಗ ಚರ್ಚೆಗೆ ಸಿದ್ಧ; ಸ್ಥಳ, ದಿನಾಂಕ ತಿಳಿಸಲಿ: ರೆಡ್ಡಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು
ಮುಂದುವರೆದು ಮಾತನಾಡಿದ ಅವರು, ಜನಾರ್ಧನ ರೆಡ್ಡಿಗೆ ಸಂಸ್ಕೃತಿಯೂ ಇಲ್ಲ, ಮನುಷ್ಯತ್ವವೂ ಇಲ್ಲ, ನನ್ನ ಮಗನ ಸಾವಿನ ವಿಚಾರ ಮಾತನಾಡಿದ್ದಾರೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸರಿ, ಆದರೆ ಕುಟುಂಬದ ವಿಚಾರ ಮಾತನಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.