Vijaya Vittala Temple: ವಿಶ್ವಪ್ರಸಿದ್ಧ ಪಾರಂಪರಿಕ ತಾಣ ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದು ಅಚ್ಚರಿ ಮತ್ತು ಸಂತಸದ ಸುದ್ದಿ. ದಶಕಗಳಿಂದ ಸ್ಥಗಿತಗೊಂಡಿದ್ದ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿರುವ ಸಪ್ತಸ್ವರ ಮಂಟಪದ ಕಂಬಗಳಿಂದ ಹೊರಬರುವ ಸಂಗೀತ ಕೇಳಲು ಕಂಬವನ್ನು ಕೈಯಿಂದ ಬಾರಿಸಬೇಕಾಗಿಲ್ಲ. ಬದಲಿಗೆ ಅಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು...
ಹಂಪಿಯು ಒಂದು ವಿಶೇಷ ಪಾರಂಪರಿಕ ತಾಣವಾಗಿದ್ದು, ಅಲ್ಲಿನ ಸ್ಮಾರಕಗಳ ವೀಕ್ಷಣೆಗೆಂದೇ ಪ್ರತಿದಿನ ದೇಶ-ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಹಂಪಿಯ ವಿಜಯ ವಿಠ್ಠಲ ದೇವಾಲಯವಂತೂ ಆಕರ್ಷಣೆಯ ಕೇಂದ್ರ ಬಿಂದು. ಕಲ್ಲಿನರಥ, ಸಪ್ತಸ್ವರ ಮಂಟಪ ಸೇರಿದಂತೆ ಹಲವಾರು ವಿಶೇಷತೆಯನ್ನು ಹೊಂದಿರುವ ವಿಠ್ಠಲ ದೇವಾಲಯವು ಪ್ರಸಿದ್ಧ ತಾಣವಾಗಿದೆ. ಅಲ್ಲಿನ ವಿಶೇಷ ಸಪ್ತಸ್ವರ ಮಂಟಪದಿಂದ ಹೊರಹೊಮ್ಮುವ ಸಂಗೀತ ಕೇಳುವ ಅವಕಾಶವಿಲ್ಲದೆ ಬೇಸರಗೊಂಡಿದ್ದ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ಸಂತಸದ ಸುದ್ದಿ ನೀಡಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಹೆಸರು ಅಂತಿಮ
ಅದೇನಪ್ಪಾ ಅಂದ್ರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಪ್ತಸ್ವರ ಮಂಟಪದಿಂದ ಹೊರಬರುವ ಸಂಗೀತ ಕೇಳಬಹುದಾದ ನೂತನ ಪ್ರಯೋಗ ಮಾಡಿದೆ. ಇದು ಸಕ್ಸಸ್ ಆಗಿದ್ದು, ಪ್ರವಾಸಿಗರು ಇದೀಗ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೇ ಕಂಬಗಳಿಂದ ಹೊರಹೊಮ್ಮುವ ಸಂಗೀತವನ್ನು ಆಲಿಸಬಹುದು. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿಯೇ ನಿರ್ಮಾಣವಾಗಿದೆ. ಈ ಸಂಗೀತ ಮಂಟಪದಲ್ಲಿ ಸಪ್ತಸ್ವರ ಹೊರಡಿಸುವ 42 ಕಂಬಗಳಿವೆ. ವಿಶಿಷ್ಟ ಕಲ್ಲುಗಳಿಂದ ನಿರ್ಮಾಣಗೊಂಡ ಕಂಬಗಳಲ್ಲಿ ಸಂಗೀತವನ್ನು ಆಲಿಸುವುದು ಒಂದು ಅದ್ಬುತ ಅನುಭೂತಿಯಾಗಿದೆ.
Experience the music of Hampi's Vijaya Vitthala temple!
QR codes at the Sangeet Mandapam now let visitors listen to the iconic stone pillar tunes without risking damage. Currently available for 10 pillars, with plans to expand to all 46 - @ASIGoI 🔥👏#Hampi #Ballari #Bellary pic.twitter.com/PnoYh9uo1o
— Ballari Tweetz (@TweetzBallari) November 26, 2024
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ದೃಷ್ಟಿಯಿಂದ ಕಂಬಗಳನ್ನು ಕೈಯಿಂದ ಬಾರಿಸಿ ಸಂಗೀತ ಆಲಿಸುವುದನ್ನು ದಶಕಗಳ ಹಿಂದೆಯೇ ನಿರ್ಬಂಧಿಸಲಾಗಿತ್ತು. ಆದರೆ ದೂರದಿಂದ ಬಂದಂತಹ ಪ್ರವಾಸಿಗರು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಕಂಬಗಳನ್ನು ಬಾರಿಸಿ ಸಂಗೀತವನ್ನು ಆಲಿಸುತ್ತಿದ್ದರು. ಹೀಗಾಗಿ ಇದಕ್ಕೆ ಒಂದು ಪರಿಹಾರ ನೀಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು QR ಕೋಡ್ ಅಳವಡಿಸಿದೆ. ಇದರ ಮೂಲಕ ಸ್ಕ್ಯಾನ್ ಮಾಡಿದ ಜನರಿಗೆ ಲಿಂಕ್ವೊಂದು ತೆರೆದುಕೊಳ್ಳುತ್ತದೆ. ಆ ಲಿಂಕ್ ಮೇಲೆ ಒತ್ತಿದರೆ 26 ಸೆಕೆಂಡುಗಳ ಸ, ರಿ, ಗ, ಮ, ಪ ಎಂಬ ಸ್ವರಗಳ ಸಂಗೀತ ಹೊರಹೊಮ್ಮುತ್ತದೆ. ಇದಕ್ಕೆ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
(ಬರೆದವರು: ವಿನುತಾ ಪ್ರಕಾಶ್, Zee Kannada News)
ಇದನ್ನೂ ಓದಿ: ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.