ಇನ್ಫೋಸಿಸ್ ಫೌಂಡೇಷನ್'ನಿಂದ ಮೆಟ್ರೋ ಕಾಮಗಾರಿಗೆ 200 ಕೋಟಿ ರೂ.!

ರಾಜ್ಯ ರಾಜಧಾನಿಯಲ್ಲಿ ಮೆಟ್ರೋ ಕಾಮಗಾರಿಗಳಿಗೆ ಸುಮಾರು 200 ಕೋಟಿ ರೂ. ನೀಡಲು ಇನ್ಫೋಸಿಸ್ ಫೌಂಡೇಷನ್ ಮುಂದಾಗಿದೆ.

Last Updated : Jul 7, 2018, 02:08 PM IST
ಇನ್ಫೋಸಿಸ್ ಫೌಂಡೇಷನ್'ನಿಂದ ಮೆಟ್ರೋ ಕಾಮಗಾರಿಗೆ 200 ಕೋಟಿ ರೂ.! title=

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೆಟ್ರೋ ಕಾಮಗಾರಿಗಳಿಗೆ ಸುಮಾರು 200 ಕೋಟಿ ರೂ. ನೀಡಲು ಇನ್ಫೋಸಿಸ್ ಫೌಂಡೇಷನ್ ಮುಂದಾಗಿದೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ದೇಶದಲ್ಲೇ ಪ್ರತಿಷ್ಟಿತ ಕಂಪನಿಗಳಲ್ಲೊಂದಾದ ನಾರಾಯಣಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ. ಈ ಬಾರಿ ಇನ್ಫೋಸಿಸ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ಹಳಿ ಮತ್ತು ಸ್ಟೇಷನ್ ಕಾಮಗಾರಿಗೆ ಸುಮಾರು 200 ಕೋಟಿ ರೂ.‌ ನೀಡಲು ಮುಂದಾಗಿದ್ದು, ಮೆಟ್ರೋ ನಿಲ್ದಾಣ ಅವರೇ ನಿರ್ಮಾಣ ಮಾಡುತ್ತಾರೆ. ಜುಲೈ 19ರಂದು ವಿಧಾನಸೌಧದಲ್ಲಿ ಬಿಎಂಆರ್​ಸಿಎಲ್ ಮತ್ತು ಇನ್ಫೋಸಿಸ್ ಫೌಂಡೇಶನ್ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗುವುದು ಸಿಎಂ ಕುಮಾರಸ್ವಾಮಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸುಧಾಮೂರ್ತಿ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ಫೋಸಿಸ್ ಸಾಕಷ್ಟು ಹೆಸರು ಮಾಡಿದೆ. ಆ ಕ್ಷೇತ್ರದಲ್ಲಿ ಗಳಿಸಿರುವ ಹಣದಲ್ಲಿ ಸಾರ್ವಜನಿಕರಿಗೆ ಒಂದಿಷ್ಟು ಅನುಕೂಲ ಮಾಡಿಕೊಡುವ ಉದ್ದೇಶ ಸಂಸ್ಥೆಗಿದೆ. ಹಾಗಾಗಿ ಈ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

Trending News