1 to 10th Standard Students : ರಾಜ್ಯ ಸರ್ಕಾರದಿಂದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ಜುಲೈ 1 ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠ

Last Updated : Jun 25, 2021, 10:59 AM IST
  • ಜುಲೈ 1 ರಿಂದ ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭ
  • 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ
  • ಜುಲೈ 1 ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠ
1 to 10th Standard Students : ರಾಜ್ಯ ಸರ್ಕಾರದಿಂದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ! title=

ಬೆಂಗಳೂರು : ಜುಲೈ 1 ರಿಂದ ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ.

ಜುಲೈ 1 ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠ(Video Lession)ಗಳು ನಡೆಯಲಿವೆ. ತರಗತಿವಾರು ವೇಳಾಪಟ್ಟಿ ಶಾಲಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು, ಜು. 1 ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಿ, ಫಲಿತಾಂಶ ಆಧರಿಸಿ ಎ,ಬಿ, ಸಿ, ಗ್ರೇಡ್ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಜೂ. 28ರವರೆಗೂ ಭಾರೀ ಮಳೆ..!

1,2, 3 ನೇ ತರಗತಿ ಮಕ್ಕಳಿಗೆ ಭಾನುವಾರ 1,30 ರಿಂದ 12, 1.30 ರಿಂದ 2 ರ ತನಕ ನಲಿಕಲಿ ತರಗತಿ(Nalikali Class) ನಡೆಯಲಿವೆ. 4 ನೇ ತರಗತಿ ಮಕ್ಕಳಿಗೆ ಶನಿವಾರ 10 ರಿಂದ 10.30 ರವರೆಗೆ ಹಾಗೂ 10,30 ರಿಂದ 11 ರ ತನಕ, ಭಾನುವಾರ 10 ರಿಂದ 10.30, 10.30 ರಿಂದ 11 ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ.

ಇದನ್ನೂ ಓದಿ : Karnataka Govt Employees : 'ಸರ್ಕಾರಿ ನೌಕರ'ರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ..!

5 ನೇ ತರಗತಿ ಮಕ್ಕಳಿಗೆ(children's) ಶನಿವಾರ 9 ರಿಂದ 9.30 ರವರೆಗೆ, 9.30 ರಿಂದ 10, ಭಾನುವಾರ 9 ರಿಂದ 9.30 ರಿಂದ 10 ರತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6 ನೇ ತರಗತಿ ಮಕ್ಕಳಿಗೆ ಗುರುವಾರ 10.30 ರಿಂದ 11, 11.30 ರಿಂದ 12, 1.30 ರಿಂದ 2 ರ ತನಕ ಇಂಗ್ಲಿಷ್, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ.

ಇದನ್ನೂ ಓದಿ : Laxman Savadi : ರಾಜ್ಯ ಸರ್ಕಾರದಿಂದ ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್! 

7 ನೇ ತರಗತಿ ವಿದ್ಯಾರ್ಥಿಗಳಿಗೆ(Students) ಗುರುವಾರ 9ರಿಂದ 9.30, 9.30ರಿಂದ 10.00, 10ರಿಂದ 10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30, 9.30ರಿಂದ 10, 10ರಿಂದ 10.30ರ ತನಕ ಇಂಗ್ಲಿಷ್‌, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು ನಡೆಯಲಿವೆ.

ಇದನ್ನೂ ಓದಿ : Property Tax : ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ : ಆಸ್ತಿ ತೆರಿಗೆ ಪಾವತಿ ದಿನಾಂಕ ವಿಸ್ತರಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News