ಶಿಗ್ಗಾವಿ ತಾಲೂಕು ಸವಣೂರಿನ ಸಿಂಪಿಗಲ್ಲಿಯಲ್ಲಿ ಸವಣೂರು -ಕಾರಡಗಿ ಕೇಂದ್ರದ ಬೂತ್ ಮಟ್ಟದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಯಾದಗಿರಿಯಲ್ಲಿ ದಲಿತ ಯುವಕನ ಕೊಲೆಯಾಗಿದೆ. ರಾಜ್ಯದಲ್ಲೇ ಈಗ ಈ ಗತಿ. ಇನ್ನು ದೇಶದಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಏನಾಗಬಹುದು? ಯೋಚಿಸಿ ಎಂದು ಹೇಳಿದರು.
ನೇಹಾಳ ಸ್ಥಿತಿ ನೋಡಿ ತಲೆ ತಿರುಗಿತು: ಹುಬ್ಬಳ್ಳಿಯಲ್ಲಿ ನೇಹಾಳ ಮತಾಂತರಕ್ಕೆ ಯತ್ನಿಸಿದ ಆರೋಪಿ ಫಯಾಜ್, ಆಕೆ ಒಪ್ಪದಿದ್ದಾಗ ಅದೆಷ್ಟು ಕ್ರೂರಿಯಾಗಿ ಹತ್ಯೆಗೈದಿದ್ದಾನೆ ಎಂದರೆ ನೋಡಿದ ನಂಗೇ ತಲೆ ತಿರುಗಿತು ಎಂದು ಹೇಳಿದರು.
ಇದನ್ನು ಓದಿ : For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿ
ಹತ್ಯೆ ಆಕಸ್ಮಿಕವೇ: ಇಂಥ ಕುಕೃತ್ಯವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವೈಯಕ್ತಿಕ ಎಂದರೆ, ಗೃಹ ಸಚಿವ ಪರಮೇಶ್ವರ ಆಕಸ್ಮಿಕ ಎಂದರು. ಇವರಿಗೆ ವೈಯಕ್ತಿಕ-ಆಕಸ್ಮಿಕದ ಅರ್ಥ, ವ್ಯತ್ಯಾಸವೇ ತಿಳಿದಿಲ್ಲ. ಹತ್ಯೆ ಒಂದು ಆಕಸ್ಮಿಕವೇ? ಎಂದು ಹರಿ ಹಾಯ್ದರು.
ಮುಸ್ಲಿಂರು ಹೇಳಿದಂಗೆ ಕೇಳಬೇಕೇ?: ರಾಜ್ಯದಲ್ಲಿ ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಯುತ್ತಿದೆ. ಸರ್ಕಾರವೂ ಅವರ ಪರ ನಿಂತಿದೆ. ಹಾಗಾದರೆ ನಾವು ಮುಸ್ಲಿಂರು ಹೇಳಿದ ಹಾಗೆ ಕೇಳಬೇಕೇ? ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಏನೂ ಮಾಡುವುದಿಲ್ಲ. ಮತಾಂತರ ಮಾಡುವವರನ್ನು ಶಿಕ್ಷಿಸುತ್ತಿಲ್ಲ. ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಎನ್ನುತ್ತಾರೆ. ಆದರೆ, ಜೈ ಶ್ರೀರಾಮ್ ಎಂದವರನ್ನು, ಹನುಮಾನ್ ಚಾಲೀಸ್ ಹಾಕಿದವರ ಮೇಲೆ FIR ದಾಖಲಿಸುತ್ತದೆ ಈ ಸರ್ಕಾರ. ಇಲ್ಲಿ ಹಿಂದೂಗಳಿಗೇ ರಕ್ಷಣೆ, ಬೆಲೆ ಇಲ್ಲದಾಗಿದೆ ಎಂದರು.
ವಿಶ್ವಾಸ ಕಳೆದುಕೊಂಡ ಸರ್ಕಾರ: ನೇಹಾಳ ತಂದೆ, ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರೂ ನ್ಯಾಯಕ್ಕಾಗಿ ಬಿಜೆಪಿ ನನ್ನಲ್ಲಿ ಮೊರೆಯಿಟ್ಟರು. ಮಗಳ ಸಾವಿಗೆ ತಮ್ಮ ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇಲ್ಲ. ನೀವೇ ನ್ಯಾಯ ದಕ್ಕಿಸಿ ಕೊಡಿ ಎಂದು ಬಹಿರಂಗವಾಗಿ ಹೇಳಿದರು. ಕಾಂಗ್ರೆಸ್ ಸರ್ಕಾರ ಅಷ್ಟರ ಮಟ್ಟಿಗೆ ತುಷ್ಟಿಕರಣದಲ್ಲಿ ತೊಡಗಿ ಸ್ವ ಪಕ್ಷದವರ ವಿಶ್ವಾಸವನ್ನೇ ಕಳೆದುಕೊಂಡಿದೆ ಎಂದು ಜೋಶಿ ಹೇಳಿದರು.
ಮೋದಿ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ: ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಮಹತ್ವಪೂರ್ಣ ಅಭಿವೃದ್ಧಿ, ಬದಲಾವಣೆ ಕಂಡಿದೆ ಎಂದು ಸಚಿವ ಜೋಶಿ ಹೇಳಿದರು.
ಇದನ್ನು ಓದಿ : ಗೃಹ ಸಚಿವ ಪರಮೇಶ್ವರ್ ಅವಹೇಳನೆ: ಖೂಬಾ ಕುಮ್ಮಕ್ಕಿನಿಂದ ದಲಿತರಿಗೆ ಅವಮಾನ- ಖಂಡ್ರೆ
ಮತ್ತೆ ಮೋದಿ ಬೆಂಬಲಿಸಿ: ದೇಶದಲ್ಲಿ ಮತ್ತೆ ಮೋದಿ ಅವರನ್ನು ಬೆಂಬಲಿಸಿ. ಸುರಕ್ಷತೆ, ರಕ್ಷಣೆ, ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ನನ್ನನ್ನು 5ನೇ ಬಾರಿ ಆರಿಸಿ ಕಳಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಿ ಎಂದು ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹನುಮಂತ ಗೌಡ ಮುನಿಗೌಡ, ಶಿಗ್ಗಾಂವ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಸುಭಾಷ್ ಗಡಪ್ಪನವರ್, ನಿಕಟಪೂರ್ವ ಮಂಡಲಾಧ್ಯಕ್ಷ ಗಂಗಾಧರ ಬಾಣದ್, ಪ್ರಮುಖರಾದ ಮನಾರಪ್ಪ ತಳಲ್ಲಿ, ಹಾವೇರಿ ಜಿಲ್ಲಾ ಪ್ರಯೋಗ ಕಾರ್ಯದರ್ಶಿ ಮಂಜುನಾಥ್ ಗಾಣಿಗೇರಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ನಿಸ್ಸಿಮಗೌಡರ್, ಶ್ರೀಕಾಂತ್ ದುಂಡಿಗೌಡರ್, ಶಂಕರ್ ಗೌಡ ಪಾಟೀಲ್, ಶೈಲಾ ಮುನಿಗೌಡರ್, ಶಶಿಧರ್ ಎಳಿಗಾರ್, ನಿಂಗಪ್ಪ ಮರಿಗಪ್ಪ ಹಾಗೂ ಸಮಾಜದ ಪ್ರಮುಖರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.