ಲೋಕ ಸಮರದಲ್ಲಿ 22 ಸ್ಥಾನ ಗೆದ್ದರೆ, 24 ಗಂಟೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ

ರಾಜ್ಯದಲ್ಲಿ ಮತ್ತೆ ಸದ್ದು ಮಾಡಲಿದೆಯಾ 'ಆಪರೇಶನ್ ಕಮಲ'

Last Updated : Mar 13, 2019, 10:39 AM IST
ಲೋಕ ಸಮರದಲ್ಲಿ 22 ಸ್ಥಾನ ಗೆದ್ದರೆ, 24 ಗಂಟೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ title=
Pic Courtesy: ANI

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ 24 ಗಂಟೆಗಳೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಯಾರಗಟ್ಟಿ ಗ್ರಾಮದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ "ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ 22 ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲ್ಲಿಸಿದರೆ, 24 ಗಂಟೆಗಳ ಒಳಗೆ ನಾವು ಸರ್ಕಾರ ರಚಿಸುತ್ತೇವೆ" ಎಂದಿದ್ದಾರೆ.

ಬಾಲಕೋಟ್ ನಲ್ಲಿ ನಡೆದ ಏರ್ ಸ್ಟ್ರೈಕ್ ಬಳಿಕ ಈ ವಾಯುದಾಳಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ನೆರವಾಗಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಬಿಎಸ್​ವೈ, ಇದೀಗ ಚುನಾವಣಾ ಆಯೋಗವು (ಇಸಿಐ) 2019 ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಎರಡು ದಿನಗಳಲ್ಲಿ ಈ ರೀತಿ ಹೇಳಿಕೆ ನೀಡಿದ್ದು ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿಂದಲೂ 'ಆಪರೇಶನ್ ಕಮಲ' ಸದ್ದು ಮಾಡುತ್ತಲೇ ಇದೇ. ಇತ್ತೀಚಿಗೆ ಶಾಸಕರಿಗೆ ಗಾಳ ಹಾಕುವ ಸಂಬಂಧ ಜೆಡಿಎಸ್ 'ಆಪರೇಶನ್ ಆಡಿಯೋ'ವನ್ನು ಬಿಡುಗಡೆ ಮಾಡಿತ್ತು. ಈ ಆಡಿಯೋ ಬಗ್ಗೆ ಮೊದಲಿಗೆ ಅದು ತಮ್ಮ ಧ್ವನಿಯಲ್ಲ ಎಂದು ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ನಂತರದಲ್ಲಿ ಕುಮಾರಸ್ವಾಮಿ ತಮಗೆ ಬೇಕಾದ್ದನ್ನು ಮಾತ್ರ ಬಿಡುಗಡೆ ಮಾಡಿದ್ದು ಮಿಕ್ಕ ಆಡಿಯೋವನ್ನು ಕತ್ತರಿಸಿದ್ದಾರೆ(ಕಟ್) ಎಂದಿದ್ದರು.
 

Trending News