ಹುಬ್ಬಳ್ಳಿ : ಇಡೀ ಜಗತ್ತಿಗೇ ಕಂಟಕಪ್ರಾಯವಾಗಿ ಕಾಡುತ್ತಿರುವ ಕರೋನಾವೈರಸ್ ಎಂಬ ಮಹಾಮಾರಿಯಿಂದಾಗಿ ಜಾರಿಗೆ ಬಂದಿದ್ದ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಇಂಡಿಗೋ ಕಂಪನಿಯ ಹುಬ್ಬಳ್ಳಿ - ಅಹ್ಮದಾಬಾದ್ ನಡುವಿನ ವಿಮಾನಯಾನ ಸೇವೆ ಇಂದಿನಿಂದ (ಜನವರಿ 4) ಮತ್ತೆ ಪ್ರಾರಂಭವಾಗಲಿದೆ.
ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹುಬ್ಬಳ್ಳಿ - ಅಹ್ಮದಾಬಾದ್ ನಡುವೆ ಇಂಡಿಗೋ (Indigo) ವಿಮಾನ ಹಾರಾಟ ನಡೆಸಲಿದ್ದು ಇದರಿಂದಾಗಿ ಆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಎರಡೂ ಮಾರ್ಗಗಳಲ್ಲಿ ಸಂಚರಿಸಲಿರುವ ಇಂಡಿಗೋ ವಿಮಾನ :
ಅಹಮದಾಬಾದ್‌ನಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 5.15ಕ್ಕೆ ಹುಬ್ಬಳ್ಳಿ ತಲುಪಲಿರುವ ವಿಮಾನವು ಸಂಜೆ 5.45ಕ್ಕೆ ಹುಬ್ಬಳ್ಳಿ (Hubli)ಯಿಂದ ಹೊರಟು ರಾತ್ರಿ 7.25ಕ್ಕೆ ಅಹಮದಾಬಾದ್ ತಲುಪಲಿದೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಆಡಿ ಬೆಳೆದಿದ್ದ ಭಾರತದ ಶ್ರೇಷ್ಠ ನಿರ್ದೇಶಕ ವಿ.ಶಾಂತಾರಾಂ...!
ಇದಲ್ಲದೆ ಜನವರಿ 11ರಿಂದ ಸ್ಟಾರ್ ಏರ್ ಕಂಪನಿಯ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲಿದೆ. ವಾರದಲ್ಲಿ ನಾಲ್ಕು ದಿನ ಸ್ಟಾರ್ ಏರ್ ಕಂಪನಿಯು ತಿರುಪತಿ (Tirupati), ಬೆಂಗಳೂರಿಗೆ ವಿಮಾನ ಸೇವೆ ಒದಗಿಸುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರದಂದು ಈ ವಿಮಾನ ಸಂಚರಿಸಲಿದೆ.
ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ತಿರುಪತಿಯಿಂದ ಹೊರಡುವ ವಿಮಾನ ಮಧ್ಯಾಹ್ನ 12.30ಕ್ಕೆ ಹುಬ್ಬಳ್ಳಿಗೆ ಬರಲಿದೆ. ಇಲ್ಲಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಲಿದೆ.
ಇದನ್ನೂ ಓದಿ : ನೀವು ಇನ್ನ್ಮುಂದೆ ಹುಬ್ಬಳ್ಳಿಯಿಂದ ವಿದೇಶಕ್ಕೂ ಹಾರಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.