Government Employees: ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ‘KGID Online' ಬಳಕೆ ಹೇಗೆ ಗೊತ್ತಾ?

KGDI ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ.

Last Updated : Mar 20, 2021, 07:20 PM IST
  • ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದಂತ KGID ವ್ಯವಸ್ಥೆ.
  • KGDI ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ.
  • ಕೆಜಿಐಡಿ ಆನ್ ಲೈನ್ ಮೂಲಕ ಹೇಗೆ ಬಳಕೆ ಮಾಡಬೇಕು?
Government Employees: ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ‘KGID Online' ಬಳಕೆ ಹೇಗೆ ಗೊತ್ತಾ? title=

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದಂತ ಕೆಜಿಐಡಿ ವ್ಯವಸ್ಥೆ, ಕೊನೆಗೂ ಆನ್ ಲೈನ್ ಆಗಿದೆ. ಇನ್ಮುಂದೆ ಕೆಜಿಐಡಿ ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಹಾಗಿದ್ದರೇ.. ಕೆಜಿಐಡಿ ಆನ್ ಲೈನ್ ಮೂಲಕ ಹೇಗೆ ಬಳಕೆ ಮಾಡಬೇಕು ಎಂಬುವುದನ್ನ ತಿಳಿಯಿರಿ.

ಕರ್ನಾಟಕ ಸರ್ಕಾರ ವಿಮಾ ಇಲಾಖೆ(KGID) ವ್ಯವಸ್ಥೆ, ಈಗ ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎನ್ನುವಂತ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.

Coronavirus: ಕೊರೋನಾ ಅಬ್ಬರ; ರಾಜ್ಯದಲ್ಲಿ ಮತ್ತೆ 2 ವಾರ 'ಶಾಲಾ-ಕಾಲೇಜುಗಳು' ಬಂದ್..!?

KGID ಖಾತೆಗೆ ಲಾಗಿನ್ ಆಗೋದು ಹೇಗೆ?

https://kgidonline.karnataka.gov.in ಜಾಲತಾಣಕ್ಕೆ ತೆರಳಿದ್ರೇ.. ನಿಮಗೆ ಕರ್ನಾಟಕ ಸರ್ಕಾರ ವಿಮಾ ಇಲಾಖೆಯ ಮುಖ ಪುಟ ತೆರೆದುಕೊಳ್ಳುತ್ತದೆ.

ಇದರಲ್ಲಿ ಕೆಜಿಐಟಿ ಲಾಗಿನ್ ಅನ್ನು ರಾಜ್ಯ ಸರ್ಕಾರಿ ನೌಕರರು ಆಯ್ಕೆ ಮಾಡಿಕೊಳ್ಳಬೇಕು.

ಕೆಜಿಐಡಿ ನಂಬರ್ ಎಂಟರ್ ಮಾಡಬೇಕು.

Belagavi Lok Sabha: ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಹೆಸರು ಫೈನಲ್!

ಆನಂತ್ರ ರಾಜ್ಯ ಸರ್ಕಾರಿ ನೌಕರರು ಕೆಜಿಐಡಿಗೆ ನೊಂದಾವಣೆಗೊಂಡ ಮೊಬೈಲ್ ಸಂಖ್ಯೆ(Mobile Number) ನಮೂದಿಸಬೇಕು.

ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತ ಒಟಿಪಿ ಎಂಟ್ರಿ ಮಾಡಿದ್ರೇ.. ನಿಮ್ಮ ಕೆಜಿಐಡಿ ಖಾತೆಯ ವಿವರ ತೆರೆದುಕೊಳ್ಳಲಿದೆ.

ಹೊಸ ಕೆಜಿಐಡಿ ವಿಮಾದಾರರು ಲಾಗಿನ್(Login) ಆಗೋದು ಹೇಗೆ.?

V Somanna: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ..!

ಹೊಸ ಉದ್ಯೋಗಿಯು ಹೊಸ ವಿಮಾದಾರರ ಲಾಗಿನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಆನಂತ್ರ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ಈ ಬಳಿಕ ಧೃಡೀಕೃತ(Authenticate) ಆಯ್ಕೆಯನ್ನು .

Ramesh Jarkiholi CD Case: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು?

ಹೀಗೆ ದ ನಂತ್ರ, ಅರ್ಜಿದಾರರು ನಮೂದಿಸಿರುವಂತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.

ಇಂತಹ ಓಟಿಪಿ ಮತ್ತು ಕ್ಯಾಪ್ಚಾನ್ ಅನ್ನು ನಮೂದಿಸಿ, ಲಾಗಿನ್ ಆಯ್ಕೆಯನ್ನು ದ್ರೇ.. ನಿಮ್ಮ ವಿಮಾಖಾತೆ( Insurance Account)ಯ ಮಾಹಿತಿ ಪುಟ ತೆರೆದುಕೊಳ್ಳಲಿದೆ.

ಹೀಗೆ ಲಾಗಿನ್ ಆದ ನಂತ್ರ ರಾಜ್ಯ ಸರ್ಕಾರಿ ನೌಕರರು ಮಾಡಬೇಕಾದ ಮತ್ತೊಂದು ಕೆಲಸವೆಂದ್ರೇ.. ನ್ಯೂ ಬ್ಯೂಸಿನೆಸ್ ಟ್ಯಾಬ್ ಅನ್ನು ಆಯ್ಕೆ ಮಾಡಿಕೊಂಡು, ತದನಂತ್ರ Apply for KGID Policy ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ಬಳಿಕ, ನಾನು ಸೂಚನೆಗಳನ್ನು ಓದಿದ್ದೇನೆ ಎಂದು ಒಪ್ಪಿಗೆ ಸೂಚಿಸಿ, Proceed to Application ಆಯ್ಕೆ , ಮುಂದುವರೆಯಿರಿ.

K-Kisan: ರಾಜ್ಯದ ರೈತರು ಕೃಷಿ ಇಲಾಖೆ ಸೌಲಭ್ಯ ಪಡೆಯಲು ಈ ನೋಂದಣಿ ಕಡ್ಡಾಯ

ಇದಾದ ನಂತ್ರ, ಮೊದಲಿಗೆ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ಅಂದ್ರೇ.. ರಾಜ್ಯ ಸರ್ಕಾರಿ ನೌಕರರ ಶಾಶ್ವತ ವಿಳಾಸ ಮತ್ತು ಪಿನ್ ಕೋಡ್ ಅನ್ನು ಮಾತ್ರ ಭರ್ತಿ ಮಾಡಬೇಕು. ಆನಂತ್ರ ವೈವಾಹಿಕ ಸ್ಥಿತಿ ಅನ್ನು ಬದಲಿಸುವುದಿದ್ದರೇ ಬದಲಿಸಬಹುದು. ಇಲ್ಲದೇ ಹಾಗೆಯೇ ನೆಕ್ಟ್ ಆಯ್ಕೆ , ಮುಂದುವರೆಯಿರಿ. 

ಕೆಜಿಐಡಿ ಟ್ಯಾಬ್(KGDI Tab) ನಲ್ಲಿ ಕಡಿತಗೊಳಿಸಬೇಕಾದ ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ ತೋರಿಸುತ್ತದೆ. ಪ್ರೀಮಿಯಂ ಮೊತ್ತವನ್ನು ನಮೂದಿಸಿ. ಒಂದು ವೇಳೆ ನೀವು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಬಯಸಿದ್ರೇ.. ಅಂತಹ ಅರ್ಜಿದಾರರು ತಮ್ಮ ಸಂಬಳದ ಶೇ.50ಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಬಹುದಾಗಿದೆ. ಆನಂತ್ರ ನೆಕ್ಟ್ ಆಯ್ಕೆ , ಮುಂದೆ ಸಾಗಿ..

ಹೊರಗುತ್ತಿಗೆ ಆಧಾರದ ನೇಮಕಾತಿಯಿಂದಾಗಿ ಮೀಸಲಾತಿ ನಿರಾಕರಣೆ- ಎಚ್.ಕೆ.ಪಾಟೀಲ್

ಈಗ ಕುಟುಂಬದ ವಿವರ ಭರ್ತಿಯ ಪುಟದಲ್ಲಿ ಕುಟುಂಬದ ವಿವರ ಆಯ್ಕೆ ಮಾಡಿಕೊಂಡು, ನೌಕರರು ಕುಟುಂಬ(Employees Family)ದ ಸದಸ್ಯರ ಅಂದರೆ ಸಂಬಂಧ, ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಜೀವಂತವೇ ಅಥವಾ ಮರಣ ಸ್ಥಿತಿಯ ವಿವರ ನಮೂದಿಸಿ ನೆಕ್ಟ್ ಮುಂದುವರೆದ್ರೇ ನಂತ್ರದ ಪುಟ ತೆರೆದುಕೊಳ್ಳಲಿದೆ.

ಅರ್ಜಿದಾರರು ಈಗಿನ ಪುಟದಲ್ಲಿ ನಾಮಿನಿ ವಿವರ(Nominee Details)ಗಳನ್ನು ಭರ್ತಿ ಮಾಡಬೇಕಾಗಿರುತ್ತದೆ. ನಾಮ ನಿರ್ದೇಶಿತ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಮತ್ತು ಶೇಕಡಾವಾರು ಹಂಚಿಕೆಯನ್ನು ನಮೂದಿಸಿ. ಇಲ್ಲಿ ಗಮನಿಸಿ, ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು. ಆದ್ರೇ.. ಒಟ್ಟು % ಪಾಲು 100%ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.

ಪೆಟ್ರೋಲ್, ಡೀಸೆಲ್ ದರ ಏರಿಕೆ : ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಟೀಕೆ

ಇದಾದ ಬಳಿಕ ಆನಂತ್ರದ ಪುಟದಲ್ಲಿ ನೀವು ವೈಯಕ್ತಿಕ ವಿವರಗಳನ್ನು, ಡಿಕ್ಲೆರೇಷನ್ ಕಂಡಿಷನ್ ಒಪ್ಪಿ, ಮಾಸಿಕ ಪ್ರೀಮಿಯಂ(Monthly Premium) ಮೊತ್ತ ನಮೂದಿಸಿ, ನೌಕರರು ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೇ.. ನೌಕರರ ಭೌತಿಕ ವಿವರಗಳ ಭರ್ತಿಯ ನಂತ್ರ, ನೌಕರರ ಆರೋಗ್ಯ ಸ್ಥಿತಿಯ ವಿವರ ಭರ್ತಿ ಮಾಡಿ, ವೈದ್ಯರ ವಿವರಗಳಲ್ಲಿ ರಾಜ್ಯ ಪರಿಮಿತಿಯೊಳಗಿನ ವೈದ್ಯರು, ಇತರೆ ರಾಜ್ಯ ವೈದ್ಯರು ಆಯ್ಕೆ ಮಾಡಿಕೊಂಡು ಒಪ್ಪಿಗೆ ಸೂಚಿಸಿದ್ರೇ.. ನಿಮ್ಮ ಕೆಜಿಐಡಿ ಖಾತೆ ಆನ್ ಲೈನ್ ಮೂಲಕ ಸಕ್ರೀಯವಾಗಲಿದೆ.

ಲಸಿಕೆ ಹಾಕಿಸಿಕೊಂಡು ಕರೋನಾ ವಿರುದ್ಧ ಹೋರಾಡಲು ಸಹಕರಿಸುವಂತೆ ಬಿಎಸ್ ವೈ ಮನವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News