ಉರ್ದು ಮಾತನಾಡದಿರುವುದಕ್ಕೆ ಹತ್ಯೆ ಎಂದು ಹೇಳಿ ನಂತರ ಯುಟರ್ನ್ ಹೊಡೆದ ಆರಗ ಜ್ಞಾನೇಂದ್ರ..!

ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಉರ್ದು ಮಾತನಾಡು ಕೇಳಿದ್ದಾರೆ, ಆದರೆ ಅವನು ಉರ್ದು ಮಾತನಾಡದೆ ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದಾನೆ, ಆದ್ದರಿಂದ ಅಮಾನುಷವಾಗಿ ದಲಿತ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಗೃಹ ಸಚಿವ ಆರಗ ಜ್ಞಾನೇಂದ್ರ (Aaraga Jnanendra) ಪೇಚಿಗೆ ಸಿಲುಕಿದ್ದಾರೆ. ಆದರೆ ಇದಾದ ಸ್ವಲ್ಪ ಸಮಯದ ನಂತರ ಅವರು ತಮ್ಮ ಹೇಳಿಕೆಯನ್ನು ತಪ್ಪು ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.

Written by - Prashobh Devanahalli | Last Updated : Apr 6, 2022, 07:43 PM IST
  • ಹತ್ಯೆಯಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಕೆಲವೇ ತಾಸಿನೊಳಗೆ ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ ಎಂದು ವಿವರಿಸಿದರು.
 ಉರ್ದು ಮಾತನಾಡದಿರುವುದಕ್ಕೆ ಹತ್ಯೆ ಎಂದು ಹೇಳಿ ನಂತರ ಯುಟರ್ನ್ ಹೊಡೆದ ಆರಗ ಜ್ಞಾನೇಂದ್ರ..! title=

ಬೆಂಗಳೂರು: ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಉರ್ದು ಮಾತನಾಡು ಕೇಳಿದ್ದಾರೆ, ಆದರೆ ಅವನು ಉರ್ದು ಮಾತನಾಡದೆ ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದಾನೆ, ಆದ್ದರಿಂದ ಅಮಾನುಷವಾಗಿ ದಲಿತ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಗೃಹ ಸಚಿವ ಆರಗ ಜ್ಞಾನೇಂದ್ರ (Aaraga Jnanendra) ಪೇಚಿಗೆ ಸಿಲುಕಿದ್ದಾರೆ. ಆದರೆ ಇದಾದ ಸ್ವಲ್ಪ ಸಮಯದ ನಂತರ ಅವರು ತಮ್ಮ ಹೇಳಿಕೆಯನ್ನು ತಪ್ಪು ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: HD Kumaraswamy: ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ’

ಇದೇ ವೇಳೆ ಅವರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಅರೆಸ್ಟ್ ಮಾಡಿ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ರಸ್ತೆಯಲ್ಲಿ ತಮ್ಮ ಬೈಕ್‌ಗೆ ಬೈಕ್‌ ಟಚ್‌ ಮಾಡಿದ ಎಂಬ ಕಾರಣಕ್ಕೆ ಜಗಳ ನಡೆದಿದೆ.ಈ ವೇಳೆ ದುಷ್ಕರ್ಮಿಗಳು ಯುವಕ ಚಂದ್ರು ಎಂಬಾತನನ್ನು ಹತ್ಯೆ ಮಾಡಿದ್ದಾರೆ.ಹತ್ಯೆಯಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಕೆಲವೇ ತಾಸಿನೊಳಗೆ ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: Aditi Prabhudeva: ಶಾನೆ ಟಾಪ್ ಆಗಿತ್ತು ಅದಿತಿ ಪ್ರಭುದೇವ ಮೊದಲ ಸ್ಟ್ಯಾಂಡಪ್ ಕಾಮಿಡಿ ಶೋ

ಭಕ್ಷಿಗಾರ್ಡನ್‌ ಸಮೀಪದ ಜೈ ಮಾರುತಿ ನಗರದ ನಿವಾಸಿ ಚಂದ್ರು (22) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹೀದ್‌ ಪಾಷ, ಹೊಸಕೋಟೆಯ ಶಾಹೀದ್‌ ಅಲಿಯಾಸ್‌ ಗೂಳಿ ಹಾಗೂ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಕಾಂಗ್ರೆಸ್ ವಿರುದ್ಧ ಟೀಕೆ: 

ಹಿಜಾಬ್ ವಿಚಾರದಿಂದ ಆರಂಭವಾಗಿ ಇಂದು ಬೇರೆ ಬೇರೆ ವಿಚಾರಗಳು ಚರ್ಚೆಯಾಗುತ್ತಿವೆ.ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.ಇನ್ನೊಂದೆಡೆಗೆ ಕಾಂಗ್ರೆಸ್ (Congress) ,ಜೆಡಿಎಸ್ ಅಲ್ಪಸಂಖ್ಯಾತ ಮತಗಳ ಒಲೈಕೆಗೆ ಮುಂದಾಗಿವೆ.ಅವರಿಗೆ ಜನರ ನೆಮ್ಮದಿ ಬೇಡ, ಸತ್ಯ ಹೇಳೋದು ಬೇಡ. ಓಲೈಕೆ ರಾಜಕೀಯದಿಂದ ದೇಶದಲ್ಲಿ ಕಳೆದುಹೋಗ್ತಿದ್ದಾರೆ.ನಮ್ಮ ರಾಜ್ಯದಲ್ಲೂ ಕಳೆದು ಹೋಗ್ತಾರೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News