ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೋಳಿ ಹಂಗಾಮ

ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ.  ವರ್ಷದಲ್ಲಿ ನಡೆಯುವ ಘಟನೆಗಳನ್ನು ರೂಪಕದಲ್ಲಿ ಜನರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುಕೊಳ್ಳುವಲ್ಲಿಯೂ ಮಾದರಿಯಾಗಿದೆ. 

Written by - Yashaswini V | Last Updated : Mar 7, 2023, 11:32 AM IST
  • ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೋಳಿ ಹಂಗಾಮ
  • ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ಹೋಳಿಗೆ ಸಿದ್ಧತೆ
  • ನಗರದಲ್ಲಿಂದು ವಿವಿಧ ಬಗೆಯ ರೂಪಕಗಳ ಮೆರವಣಿಗೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೋಳಿ ಹಂಗಾಮ title=

ಅಂಕೋಲಾ: ಹೋಳಿ ಹಬ್ಬ ಬಂತೆಂದರೆ ಸಾಕು ನಮ್ಮ  ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಬ್ಬ ಕಳೆ ಕಟ್ಟುತ್ತೆ.. ಅದರಲ್ಲೂ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳು ಎಂದು ಕರೆಸಿಕೊಳ್ಳುವ ಹಾಲಕ್ಕಿಗಳ ಸುಗ್ಗಿ ಇನ್ನಷ್ಟು ಮನರಂಜನೆ ಕೊಡುತ್ತೆ... ಇನ್ನು ಈ ಸುಗ್ಗಿ ಸಂದರ್ಭದಲ್ಲಿ ಅಂಕೋಲಾದಲ್ಲಿ ನಡೆಯುವ ಹೋಳಿ ನೋಡುಗರಿಗೆ ರಸದೌತಣ ಉಣಿಸುತ್ತೆ... 

ಹೌದು, ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ ಅಂಕೋಲಾ ತಾಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತಕ್ಕೆ ಬಹು ದೊಡ್ಡ ಇತಿಹಾಸವಿದೆ.  ವರ್ಷದಲ್ಲಿ ನಡೆಯುವ ಘಟನೆಗಳನ್ನು ರೂಪಕದಲ್ಲಿ ಜನರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುಕೊಳ್ಳುವಲ್ಲಿಯೂ ಮಾದರಿಯಾಗಿದೆ. 

ಇದನ್ನೂ ಓದಿ- Holi 2023 : ಬಣ್ಣಗಳಿಂದ ಸ್ಕಿನ್ ಅಲರ್ಜಿ ಭಯವೇ? ಸುರಕ್ಷಿತವಾಗಿರಲು ಇಲ್ಲಿವೆ ಸಿಂಪಲ್‌ ಟಿಪ್ಸ್‌

ಈ ಬಾರಿ ನಡೆದ ಸುಗ್ಗಿ ಸಂಭ್ರಮದಲ್ಲಿ ವಿವಿಧ ಬಗೆಯ ರೂಪಕಗಳು ನಗರದಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಸೇರಿದ್ದ ಸಾವಿರಾರು ಜನರಿಗೆ ಮನರಂಜನೆಯನ್ನು ನೀಡಿತು. ಪ್ರಮುಖವಾಗಿ ಬೆಳಂಬಾರ ಹಾಲಕ್ಕಿ ಸಮುದಾಯದವರು ಹೋಳಿಯ ಪ್ರಯುಕ್ತ ನಗರದಲ್ಲಿ ವೇಷ ಭೂಷಣಗಳನ್ನು ಹಾಕಿಕೊಂಡು ಪ್ರತಿನಿತ್ಯ ಸಮಾಜದಲ್ಲಿನ ಆಗುಹೋಗುಗಳ ಅಣಕು ಪ್ರದರ್ಶನ ಮಾಡುತ್ತಾರೆ. ಈ ಒಂದು ದಿನ ಮಾತ್ರ ಅವರಿಗೆ ಯಾರ ಕುರಿತು ಅಣಕು ಮಾಡಿದರೂ ಯಾವುದೇ ನಿರ್ಬಂಧವು ಇರುವುದಿಲ್ಲ. 

ಸಮಾಜದಲ್ಲಿನ ಅನೇಕ ಘಟನೆಗಳನ್ನು ಇವರು ತಮ್ಮ ಅಣಕು ಪ್ರದರ್ಶನದಲ್ಲಿ ಪ್ರದರ್ಶಿಸುತ್ತಾರೆ. ಅಲ್ಲದೆ ವಿವಿಧ ಬಗೆಯ ರೂಪಕವನ್ನು ಮಾಡಿ ಪಟ್ಟಣದಲ್ಲಿ ನೆರೆದ ಸಾವಿರಾರು ಜನರನ್ನು ರಂಜಿಸುತ್ತಾರೆ. ಇದರ ಜೊತೆಯಲ್ಲಿ ಮರಕಾಲು ವೇಷ, ನಾಡಿನ ಸುಪ್ರಸಿದ್ದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತವಂತು  ಆಕರ್ಷಣೀಯವಾಗಿತ್ತು. ಈ ಸಂದರ್ಭದಲ್ಲಿ ಈ ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರ ಸತೀಶ ಗೌಡ ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸಿದರು. 

ಇದನ್ನೂ ಓದಿ- ಹೋಳಿ ಹಬ್ಬದಂದು ʼಕೆಮಿಕಲ್‌ ಮಿಶ್ರಿತ ಬಣ್ಣʼದಿಂದ ತ್ವಚೆ ರಕ್ಷಣೆ ಹೇಗೆ..! ಇಲ್ಲಿವೇ ನೋಡಿ ಟಿಪ್ಸ್‌

ಈ ಬಾರಿ ಅಣಕು ಪ್ರದರ್ಶನದಲ್ಲಿ ಬಾಹುಬಲಿ ಚಿತ್ರದ ಕಾಲಕೇಯನ ಯುದ್ದ ಸನ್ನಿವೇಶ, ಶಿರಡಿ ಸಾಯಿಬಾಬಾ, ರಾಜಕಾರಣಿಗಳ ರೂಪಕ, ಕಲ್ಲು ಮಾರುವ ಮಹಿಳೆ, ವಿಮಾನದಲ್ಲಿ ಭಾರತಕ್ಕೆ ಬಂದ ವಿದೇಶಿ ಚೀತಾ,  ಶ್ರೀ ಕ್ಷೇತ್ರ ಯಾಣ ಸೇರಿದಂತೆ ಅನೇಕ ರೂಪಕಗಳು ಮನಸೂರೆಗೊಂಡವು. ಇದರ ಒಂದು ಝಲಕ್ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News