Video: ದಸರಾ ಮ್ಯಾರಥಾನ್ ಓಟದಲ್ಲಿ ಮುಗ್ಗರಿಸಿದ ಸಚಿವ ಜಿ.ಟಿ. ದೇವೇಗೌಡ

ವಿಶ್ವವಿಖ್ಯಾತ ದಸರಾ ಮ್ಯಾರಥಾನ್ ಓಟದಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ್ರು ವಯಸ್ಕರ ಮ್ಯಾರಥಾನ್ ವಿಭಾಗದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು.

Last Updated : Oct 15, 2018, 01:21 PM IST
Video: ದಸರಾ ಮ್ಯಾರಥಾನ್ ಓಟದಲ್ಲಿ ಮುಗ್ಗರಿಸಿದ ಸಚಿವ ಜಿ.ಟಿ. ದೇವೇಗೌಡ title=

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ನಿನ್ನೆ ಆಯೋಜಿಸಿದ್ದ ಮ್ಯಾರಥಾನ್​ಗೆ ಚಾಲನೆ ನೀಡಿದ ಮೈಸೂರಿನ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಸ್ಪರ್ಧಿಗಳೊಂದಿಗೆ ವಯಸ್ಕರ ಮ್ಯಾರಥಾನ್ ವಿಭಾಗದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು.

ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹಳ ಹುಮ್ಮಸ್ಸಿನಿಂದ ಪಂಚೆಯಲ್ಲೇ ಓಡುತ್ತಿದ್ದ ದೇವೇಗೌಡರು ಓಡುವ ವೇಳೆ ಮುಗ್ಗಿರಿಸಿ ಬಿದ್ದ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಚಿವ ಜಿಟಿಡಿ ಕೆಳಗೆ ಬಿದ್ದೊಡನೆ ಪಕ್ಕದಲ್ಲಿದ್ದವರು ಅವರನ್ನು ಕೈ ಹಿಡಿದು ಎಬ್ಬಿಸಿದರು. ಸುಧಾರಿಸಿಕೊಂಡ ಬಳಿಕ ಸಚಿವರು ಮತ್ತೆ ಸ್ವಲ್ಪ ದೂರ ನಿಧಾನವಾಗಿ ಓಡಿದ್ದಾರೆ. ಈ ವಯಸ್ಸಿನಲ್ಲಿ ಓಟದ ಸ್ಪರ್ಧೆಯಲ್ಲಿ ಬಿದ್ದ ಬಳಿಕವೂ ಮತ್ತೆ ತಮ್ಮ ಓಟ ಆರಂಭಿಸಿದ ಜಿ.ಟಿ. ದೇವೇಗೌಡರ ಉತ್ಸಾಹ ಎಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು.

Trending News