Dr K Sudhakar: ಆರೋಗ್ಯ ‌ಸಚಿವ ಡಾ. ಕೆ. ಸುಧಾಕರ್‌ಗೆ 'ಹೈಕೋರ್ಟ್ ನೋಟಿಸ್‌'..!

ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್‌ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.

Last Updated : Feb 26, 2021, 03:31 PM IST
  • 1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ ಸಂಬಂಧ ಹೈಕೋರ್ಟ್‌ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ಗೆ ನೋಟಿಸ್‌ ಜಾರಿ
  • ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್‌ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.
  • ಸರಕಾರಿ ವಕೀಲರು, ಆಡಳಿತಾತ್ಮಕ ವಿಷಯದಲ್ಲಿಮುಖ್ಯ ಕಾರ್ಯದರ್ಶಿ ಸರಕಾರವನ್ನು ಪ್ರತಿನಿಧಿಸಲಿದ್ದು,
Dr K Sudhakar: ಆರೋಗ್ಯ ‌ಸಚಿವ ಡಾ. ಕೆ. ಸುಧಾಕರ್‌ಗೆ 'ಹೈಕೋರ್ಟ್ ನೋಟಿಸ್‌'..! title=

ಬೆಂಗಳೂರು: ಬೆಂಗಳೂರು ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ ಸಂಬಂಧ ಹೈಕೋರ್ಟ್‌ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ಗೆ ನೋಟಿಸ್‌ ಜಾರಿ ಮಾಡಿದೆ.

ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್(PIL)‌ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ನೇತೃತ್ವದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು. ಸರಕಾರಿ ವಕೀಲರು, ಆಡಳಿತಾತ್ಮಕ ವಿಷಯದಲ್ಲಿಮುಖ್ಯ ಕಾರ್ಯದರ್ಶಿ ಸರಕಾರವನ್ನು ಪ್ರತಿನಿಧಿಸಲಿದ್ದು, ಈಗಾಗಲೇ ಮುಖ್ಯ ಕಾರ್ಯದರ್ಶಿಯವರು ಪ್ರತಿವಾದಿಗಳಾಗಿದ್ದು, ಅವರಿಗೆ ನೋಟಿಸ್‌ ಜಾರಿಯಾಗಿದೆ ಎಂದರು.

BY Vijendra: ಬಸವಕಲ್ಯಾಣ ಬೈಎಲೆಕ್ಷನ್: ಬಿಜೆಪಿಯಿಂದ ಸಿಎಂ ಪುತ್ರ ವಿಜಯೇಂದ್ರ ಸ್ಪರ್ಧೆ!?

ಆಗ ನ್ಯಾಯಪೀಠ, ''ಸಚಿವರ ಸೂಚನೆ ಮೇರೆಗೆ ಟೆಂಡರ್‌ ರದ್ದುಪಡಿಸಲಾಗಿದೆ. ಸಚಿವ(Dr K Sudhakar)ರನ್ನು ಪ್ರತಿವಾದಿ ಮಾಡಲು ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ವಿಚಾರಣೆ ಮುಂದುವರಿಸಲು ಸಚಿವರ ವಾದ ಕೇಳಬೇಕಾಗುತ್ತದೆ'' ಎಂದ ನ್ಯಾಯಪೀಠ, ಸಚಿವರನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪುರಸ್ಕರಿಸಿತು. ಸಚಿವರ ಪರವಾಗಿ ನೋಟಿಸ್‌ ಸ್ವೀಕರಿಸುವಂತೆ ಅಡ್ವೊಕೇಟ್‌ ಜನರಲ್‌ಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿ ಅಷ್ಟರಲ್ಲಿ ಸಚಿವರು ಆಕ್ಷೇಪಣೆಗಳನ್ನು ಸಲ್ಲಿಸಲಿ ಎಂದು ಹೇಳಿತು.

By Election: 3 ವಿ.ಸಭಾ, 1 ಲೋಕಸಭೆಯ 'ಚುನಾವಣೆಗೆ' ಇಂದೇ ಮಹೂರ್ತ ಫಿಕ್ಸ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News