ಬೆಂಗಳೂರು: ಇತ್ತೀಚೆಗೆ ಕರ್ನಾಟಕದ ಸಿದ್ದರಾಮಯ್ಯ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಡುವೆ ಟ್ವಿಟ್ಟರ್ ಸಮರ ತಾರಕಕ್ಕೇರಿದೆ.ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗಿ ಆದಿತ್ಯನಾಥರ ಗೊರಕ್ಷಣೆ ಮಾತುಗಳಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಗೊರಕ್ಷಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಾ "ನಾನು ದನ ಸಾಕಿದ್ದೇನೆ, ಮೇಯಿಸಿದ್ದೇನೆ,ಸೆಗಣಿ ಬಾಚಿದ್ದೇನೆ. ಗೋರಕ್ಷಣೆ-ಪಾಲನೆ ಬಗ್ಗೆ ಪಾಠ ಮಾಡುವ ಯೋಗಿ ಆದಿತ್ಯನಾಥ್ ದನ ಸಾಕಿದ್ದಾರಾ? ಇವರಿಗೆ ಗೋರಕ್ಷಣೆ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?" ಎಂದು ಸಿದ್ದರಾಮಯ್ಯ ಯೋಗಿ ಆದಿತ್ಯನಾಥರಿಗೆ ಟಾಂಗ್ ನೀಡಿದ್ದಾರೆ.
ನಾನು ದನ ಸಾಕಿದ್ದೇನೆ, ಮೇಯಿಸಿದ್ದೇನೆ,ಸೆಗಣಿ ಬಾಚಿದ್ದೇನೆ. ಗೋರಕ್ಷಣೆ-ಪಾಲನೆ ಬಗ್ಗೆ ಪಾಠ ಮಾಡುವ ಯೋಗಿ ಆದಿತ್ಯನಾಥ್ ದನ ಸಾಕಿದ್ದಾರಾ? ಇವರಿಗೆ ಗೋರಕ್ಷಣೆ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ? pic.twitter.com/ePttwLRVV1
— Siddaramaiah (@siddaramaiah) January 8, 2018
ಇತ್ತೀಚಿಗೆ ಬಿಜೆಪಿ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಗೋವಿನ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು.ಇದಕ್ಕೆ ಸಿದ್ದರಾಮಯ್ಯ ನಮ್ಮಿಂದ ನೀವು ಕಲಿಯುವುದು ಸಾಕಷ್ಟಿದೆ ಎಂದಿದ್ದರು. ಅಲ್ಲದೆ ಇನ್ನು ಮುಂದುವರೆದು ಉತ್ತರಪ್ರದೇಶದಲ್ಲಿ ಹಸುವಿನಿಂದ ಮೃತಪಟ್ಟ ಘಟನೆಗಳ ಬಗ್ಗೆ ವರದಿಯಾದ ಬಗ್ಗೆ ಕೇಳಿದ್ದೇನೆ. ಆದ್ದರಿಂದ ನೀವು ಒಮ್ಮೆಯಾದರು ಇಂದಿರಾ ಕ್ಯಾಂಟೀನ್ ಮತ್ತು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಎಂದು ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಯೋಗಿ ಆದಿತ್ಯನಾಥ ಇಲ್ಲಿನ ಅಧಿಕಾರಿಗಳ ವರ್ಗಾವಣೆ ಮಾತು ಸಾವಿನ ಪ್ರಕರಣಗಳನ್ನು ಪ್ರಸ್ತಾಪಿಸುವುದರ ಮೂಲಕ ತಿರುಗೇಟು ನೀಡಿದ್ದರು.