ಕರ್ನಾಟಕ ರಾಜಕೀಯದಲ್ಲಿ ವಿಶ್ವನಾಥ್ V/s ವಿಶ್ವನಾಥ್.

ಮೂಲೆಗುಂಪು ಆಗುತ್ತಿದ್ದ ಹೆಚ್ ವಿಶ್ವನಾಥ್ ಗೆ ವಿಧಾನಪರಿಷತ್ ಸ್ಥಾನ ಕೊಟ್ಟು ಪಕ್ಷದಲ್ಲಿ ಸ್ಥಾನ ಕೊಟ್ಟವರು ಯಡಿಯೂರಪ್ಪ. ಈಗ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ. ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ ಇಲ್ಲದಿದ್ದರೆ ಪಕ್ಷ ಬಿಟ್ಟು ತೊಲಗಿ  ಎಂದು ಹೇಳಿದ್ದಾರೆ ಎಸ್ ಆರ್ ವಿಶ್ವನಾಥ್. 

Written by - Ranjitha R K | Last Updated : May 6, 2021, 05:47 PM IST
  • ಮಾಜಿ ಸಚಿವ ಹೆಚ್ ವಿಶ್ವನಾಥ್ ಗೆ ಸವಾಲೆಸೆದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್.
  • ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ತೊಲಗಿ ಎಂದ ಎಸ್ ಆರ್ ವಿಶ್ವನಾಥ್
  • ನೀವು ಕರೋನಾ ವೈರಸ್ ಗಿಂತಲೂ ಡೇಂಜರ್ ಎಂದು ಹೇಳಿದ ಯಲಹಂಕ ಶಾಸಕ
ಕರ್ನಾಟಕ ರಾಜಕೀಯದಲ್ಲಿ ವಿಶ್ವನಾಥ್ V/s ವಿಶ್ವನಾಥ್. title=
ಮಾಜಿ ಸಚಿವ ಹೆಚ್ ವಿಶ್ವನಾಥ್ ಗೆ ಸವಾಲೆಸೆದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್. (file photo)

ಬೆಂಗಳೂರು: ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ ಹೆಚ್ ವಿಶ್ವನಾಥ್ (H Vishwanath) ವಿರುದ್ದ ಹರಿಹಾಯ್ದಿದ್ದಾರೆ. ಕರೋನಾ ಸಂಕಷ್ಟ ಕಾಲದಲ್ಲಿ ಹೆಚ್ ವಿಶ್ವನಾಥ್ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ದ್ರೋಹವನ್ನುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ತೊಲಗುವಂತೆ ತಾಕೀತು ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಎಸ್ ಆರ್ ವಿಶ್ವನಾಥ್ (SR Vishwanath), ಮುಖ್ಯಮಂತ್ರಿ ಯಡಿಯೂರಪ್ಪನವರು (BS Yediyurappa) ಕರೋನಾ ಕಾಲದಲ್ಲಿ ಜನರ ಕಷ್ಟಕ್ಕೆ ಅವಿರತವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ವಿಶ್ವನಾಥ್ ಮನೆಯಲ್ಲಿದ್ದುಕೊಂಡು ಮುಖ್ಯಮಂತ್ರಿಯನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವುದು ಹೆಚ್ ವಿಶ್ವನಾಥ್ (H Vishwanath) ಹುಟ್ಟುಗುಣ ಇರಬೇಕು ಎಂದು ಕುಟುಕಿದ್ದಾರೆ. 

ಇದನ್ನೂ ಓದಿ : K Sudhakar : ಕೊರೋನಾ ಕರ್ಫ್ಯೂ ವಿಫಲ, ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ಹೆಚ್ ವಿಶ್ವನಾಥ್ ಗೆ ಸ್ಥಾನಮಾನ ಕೊಟ್ಟಿದ್ದು ಯಡಿಯೂರಪ್ಪ :
ಮೂಲೆಗುಂಪು ಆಗುತ್ತಿದ್ದ ಹೆಚ್ ವಿಶ್ವನಾಥ್ ಗೆ ವಿಧಾನಪರಿಷತ್ ಸ್ಥಾನ ಕೊಟ್ಟು ಪಕ್ಷದಲ್ಲಿ ಸ್ಥಾನ ಕೊಟ್ಟವರು ಯಡಿಯೂರಪ್ಪ. ಈಗ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ. ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ ಇಲ್ಲದಿದ್ದರೆ ಪಕ್ಷ ಬಿಟ್ಟು ತೊಲಗಿ  ಎಂದು ಹೇಳಿದ್ದಾರೆ ಎಸ್ ಆರ್ ವಿಶ್ವನಾಥ್. 

`ನೀವು ಕರೋನಾ ವೈರಸ್ ಗಿಂತಲೂ ಡೇಂಜರ್"
ನಿಮ್ಮ ತಿಕ್ಕಲು ತನ ಪಕ್ಷಕ್ಕೆ ಮುಜುಗರ ತರುತ್ತಿದೆ. ಸಾಧ್ಯವಾದರೆ ನಾಲ್ಕು ಜನಕ್ಕೆ ಒಳ್ಳೆಯದು ಮಾಡಿ. ವಿರೋಧ ಪಕ್ಷದವರೂ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ನೀವು ಕರೋನಾ ವೈರಸ್ ಗಿಂತಲೂ (Coronavirus) ಡೇಂಜರ್. ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಟೀಕೆ ಮಾಡಿ ಎಂದು ಅಬ್ಬರಿಸಿದ್ದಾರೆ ಎಸ್ ಆರ್ ವಿಶ್ವನಾಥ್.

ಇದನ್ನೂ ಓದಿ : Corona Vaccine ವಿಷಯದಲ್ಲೂ ಗುಜರಾತ್-ಕರ್ನಾಟಕ ನಡುವೆ ತಾರತಮ್ಯವೇ? ಎಚ್ ಡಿಕೆ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News