ಗ್ರಾಮವಾಸ್ತವ್ಯ ಕನಿಷ್ಠ ವೆಚ್ಚದ ಕಾರ್ಯಕ್ರಮ: ಸಿಎಂ ಹೆಚ್‌ಡಿಕೆ ಸ್ಪಷ್ಟನೆ

ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಶಾಲೆಯಲ್ಲಿ ನಿದ್ರಿಸಲು ಕನಿಷ್ಠ ಸೌಲಭ್ಯ, ಶಾಲೆಗೆ‌ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದಾಗಿ ಸಿಎಂ ತಿಳಿಸಿದ್ದಾರೆ.

Last Updated : Jun 27, 2019, 07:49 AM IST
ಗ್ರಾಮವಾಸ್ತವ್ಯ ಕನಿಷ್ಠ ವೆಚ್ಚದ ಕಾರ್ಯಕ್ರಮ: ಸಿಎಂ ಹೆಚ್‌ಡಿಕೆ ಸ್ಪಷ್ಟನೆ title=
Representational Image

ಕರೇಗುಡ್ಡ: "ನನ್ನ ಗ್ರಾಮವಾಸ್ತವ್ಯ ಅತ್ಯಂತ ಕನಿಷ್ಠ ವೆಚ್ಚದ ಕಾರ್ಯಕ್ರಮ. ನನ್ನ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಾಗೂ ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲು ನಿಯಮಾವಳಿಗಳಂತೆ ವ್ಯವಸ್ಥೆ ಮಾಡಿರುತ್ತಾರೆ. ಈ ವೆಚ್ಚವನ್ನು ‌ಗ್ರಾಮವಾಸ್ತವ್ಯಕ್ಕೆ ಜೋಡಣೆ ಮಾಡುವುದು ಸರಿಯಲ್ಲ" ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಸ್ಪಷ್ಟೀಕರಣ ನೀಡಿರುವ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಜನತಾದರ್ಶನ ನಡೆಸಲು ಜನರ ಅನುಕೂಲಕ್ಕಾಗಿ ವೇದಿಕೆ, ಆಸನಗಳ ವ್ಯವಸ್ಥೆ ಸೇರಿದಂತೆ ಇನ್ನೀತರ‌ ವ್ಯವಸ್ಥೆ ಮಾಡಲಾಗಿರುತ್ತದೆ. 

ಗ್ರಾಮವಾಸ್ತವ್ಯ ಇಲ್ಲದಿದ್ದರೂ ಶಿಷ್ಟಾಚಾರದ ಪ್ರಕಾರ ಕ್ರಮ ಜರುಗಿಸುತ್ತಾರೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಡೆಸಿಕೊಂಡು ಬಂದಿರುವ ಮತ್ತು ಹಿಂದಿನ ಮುಖ್ಯಮಂತ್ರಿಗಳು ನಡೆಸಿಕೊಂಡು ಬಂದ ಪರಂಪರೆ ಎಂದು ಅವರು ವಿವರಿಸಿದ್ದಾರೆ.

ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಶಾಲೆಯಲ್ಲಿ ನಿದ್ರಿಸಲು ಕನಿಷ್ಠ ಸೌಲಭ್ಯ, ಶಾಲೆಗೆ‌ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದಾಗಿ ಸಿಎಂ ತಿಳಿಸಿದ್ದಾರೆ.
 

Trending News