ಬೆಂಗಳೂರಿನ ಆಸ್ತಿ ತೆರಿಗೆಯಿಂದ ಬರುವ ಆದಾಯದ ಮೇಲೆ ಸರ್ಕಾರದ ಕಣ್ಣು!

ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಅವರ ಗ್ಯಾರೆಂಟಿ ಘೋಷಣೆಗಳೂ ಕೂಡ ಪ್ರಮುಖ ಪಾತ್ರ ವಹಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯೊಡತಿಗೆ 2000 ಸಹಾಯಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ಕರೆಂಟ್, ಅನ್ನಭಾಗ್ಯ ಮತ್ತು ಯುವನಿಧಿ ವರ್ಕ್ ಔಟ್ ಆಗಿದೆ. ಆದ್ರೆ, ಈ ಭರವಸೆಗಳನ್ನೆಲ್ಲಾ ಈಡೇರಿಸಬೇಕು ಅಂದ್ರೆ ರಾಜ್ಯದ ಬೊಕ್ಕಸದ ಮೇಲೆ ತೀವ್ರಹೊರೆ ಬೀಳ್ತಿದ್ದು, ಇದನ್ನು ಸರಿದೂಗಿಸೋಕೆ ಕಾಂಗ್ರೆಸ್ ಬಿಬಿಎಂಪಿ ಮೇಲೆ ಕಣ್ಣು ಹಾಕಿದೆ.

Written by - Bhavya Sunil Bangera | Edited by - Manjunath N | Last Updated : May 31, 2023, 08:47 AM IST
  • ಗ್ಯಾರೆಂಟಿಗಳ ಘೋಷಣೆ ಬೆನ್ನಲ್ಲೇ ಅನುಷ್ಟಾನಕ್ಕೆ ಮಾಸ್ಟರ್ ಪ್ಲಾನ್
  • ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ನೀಡಲು ಅನೇಕ ಸರ್ಕಸ್
  • ಗ್ರಾಪಿಕ್ಸ್ ,, ವಾಣಿಜ್ಯ ಕಟ್ಟಡಗಳಿಗೆ ಶೇ. 15 ರಿಂದ 20 ರಷ್ಟು ತೆರಿಗೆ ಏರಿಕೆ ಸಾಧ್ಯತೆ,,?
ಬೆಂಗಳೂರಿನ ಆಸ್ತಿ ತೆರಿಗೆಯಿಂದ ಬರುವ ಆದಾಯದ ಮೇಲೆ ಸರ್ಕಾರದ ಕಣ್ಣು! title=

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಅವರ ಗ್ಯಾರೆಂಟಿ ಘೋಷಣೆಗಳೂ ಕೂಡ ಪ್ರಮುಖ ಪಾತ್ರ ವಹಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯೊಡತಿಗೆ 2000 ಸಹಾಯಧನ, ಪ್ರತಿ ಮನೆಗೆ 200 ಯೂನಿಟ್ ಉಚಿತ ಕರೆಂಟ್, ಅನ್ನಭಾಗ್ಯ ಮತ್ತು ಯುವನಿಧಿ ವರ್ಕ್ ಔಟ್ ಆಗಿದೆ. ಆದ್ರೆ, ಈ ಭರವಸೆಗಳನ್ನೆಲ್ಲಾ ಈಡೇರಿಸಬೇಕು ಅಂದ್ರೆ ರಾಜ್ಯದ ಬೊಕ್ಕಸದ ಮೇಲೆ ತೀವ್ರಹೊರೆ ಬೀಳ್ತಿದ್ದು, ಇದನ್ನು ಸರಿದೂಗಿಸೋಕೆ ಕಾಂಗ್ರೆಸ್ ಬಿಬಿಎಂಪಿ ಮೇಲೆ ಕಣ್ಣು ಹಾಕಿದೆ.

ಚುನಾವಣೆಗೂ ಮೊದಲು ಭರವಸೆಗಳನ್ನೇನೋ ನೀಡಿದ್ದಾಯ್ತು. ಆದ್ರೆ ಅದರ ಅನುಷ್ಟಾನವೇ ಈಗ ಕಾಂಗ್ರೆಸ್‌ನ ನೂತನ ಸರ್ಕಾರದ ಮುಂದಿರೋ ಅತಿ ದೊಡ್ಡ ಚಾಲೆಂಚ್ ಆಗಿದೆ. ನೀಡಿರೋ ಭರವಸೆಗಳನ್ನು ಈಡೇರಿಸಬೇಕು ಅಂದ್ರೆ ಆರ್ಥಿಕ ಹೊರೆಯಾಗಲಿದ್ದು, ಅದಕ್ಕ ಬೇಕಿರೋ ಹೆಚ್ಚುವರಿ ಹಣವನ್ನು ಬಿಬಿಎಂಪಿಯಿಂದ ರೀರೂಟ್ ಮಾಡಿಕೊಳ್ಳೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ನಗರದಲ್ಲಿ ಆದಾಯ ಹುಟ್ಟಿಸುವಂತ ಅನೇಕ ಇಲಾಖೆಗಳ ಪೈಕಿ ಬಿಬಿಎಂಪಿಯೇ ಮೊದಲನೇ ಸ್ಥಾನದಲ್ಲಿದ್ದು, ಇಲ್ಲಿಂದಲೇ ಹಣ ಹುಟ್ಟಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Karnataka Cabinet: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ

ಭರವಸೆಗಳ ಈಡೇರಿಕೆಗಾಗಿ ಸರ್ಕಾರ ಬಿಬಿಎಂಪಿಯ ಬೊಕ್ಕಸದ ಮೇಲೆ ಕಣ್ಣು ಹಾಕಿರೋದು ಖಾತ್ರಿಯಾಗಿದೆ. ಬೆಂಗಳೂರಿನ ಅಸ್ತಿ ತೆರಿಗೆಯಿಂದ ಬರುವ ಆದಾಯದ ಮೇಲೆ ಕಣ್ಣು ಹಾಕಿದ್ದು, ಆಸ್ತಿ ತೆರಿಗೆ ಏರಿಕೆಗೆ ಪ್ಲಾನ್ ಮಾಡಿರೋದು ಗೊತ್ತಾಗಿದೆ. ತನ್ನ ಭರವಸೆಗಳನ್ನು ಈಡೇರಿಸೋದಕ್ಕಾಗಿ ಸರ್ಕಾರ ಕಟ್ಟಡ ಮಾಲೀಕರಿಗೆ ಶಾಕ್ ನೀಡಲಿದ್ಯಾ ಎಂಬ ಪ್ರಶ್ನೆ ಈಗ ಮೂಡ್ತಿದೆ. ಕಳೆದ 12 ವರ್ಷಗಳಿಂದ ಅಸ್ತಿ ತೆರಿಗೆ ಏರಿಕೆ ಅಗಿಲ್ಲ.ಈಗ ಅಸ್ತಿ ತೆರಿಗೆ ಏರಿಕೆ ಮಾಡೋದಕ್ಕೆ  ಫ್ಲಾನ್

ವಸತಿ ಕಟ್ಟಡಗಳಿಗೆ ಶೇ. 10 ರಿಂದ 15 ತೆರಿಗೆ ಏರಿಕೆ ಸಾಧ್ಯತೆ,,?

ಇನ್ನು, ಪಾಲಿಕೆಯ ಕಾನೂನು ಹಾಗು ನಿಯಮಗಳ ಪ್ರಕಾರ, ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಮೊತ್ತವನ್ನು ಶೇ. 20 ರಿಂದ 25 ಹೆಚ್ಚಿಸಲು ಅವಕಾಶವಿದೆ. ಆದರೆ ಕಳೆದ 12 ವರ್ಷಗಳಿಂದ ಅಸ್ತಿ ತೆರಿಗೆ ಮೊತ್ತ ಹೆಚ್ಚಳವಾಗಿಲ್ಲ. ಇದ್ರಿಂದಾಗಿಯೇ ಬಿಬಿಎಂಪಿಯ ಆಸ್ತಿ ತೆರಿಗೆ ಗುರಿ 3500 - 4000 ಕೋಟಿಗೆ ಮಾತ್ರ ಸೀಮಿತವಾಗಿದೆ. ಆದ್ರೆ ತೆರಿಗೆಯನ್ನು ಕೇವಲ 5 ಪರ್ಸೆಂಟ್ ಹೆಚ್ಚಳ ಮಾಡೋದ್ರಿಂದ ಪಾಲಿಕೆಗೆ ಆದಾಯದ ಪ್ರಮಾಣ ಕೂಡ ಹೆಚ್ಚಾಗಲಿದ್ದು, ಇದನ್ನು ಸರ್ಕಾರ ಬಳಸಿಕೊಳ್ಳಲು ನಿರ್ಧರಿಸಿದೆ. ಪ್ರಸಕ್ತ ಸಾಲಿನಲ್ಲಿ 4100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪಾಲಿಕೆ ವಸತಿ ಕಟ್ಟಡಗಳಿಗೆ ಶೇ. 10 ರಿಂದ 15 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 15 ರಿಂದ 20 ರಷ್ಟು ತೆರಿಗೆ ಏರಿಕೆ ಮಾಡುವ ಸಾಧ್ಯತೆ ಕಂಡುಬರ್ತಿದೆ. ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸೋದಕ್ಕೆ ತೆರಿಗೆದಾರರ ಮೇಲೆ ಹೊರೆ ಹೊರೆಸುವುದು ಸರಿಯಾ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News