ಕಬ್ಬು ಬೆಳೆಗಾರರ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ: ಶ್ರೀಮಂತ ಪಾಟೀಲ್ ಆರೋಪ

Shrimant Patil: ಸದನದಲ್ಲಿ ಕಬ್ಬು ಬೆಳೆಗಾರರ ಕುರಿತು ಒಳ್ಳೆಯ ಚರ್ಚೆಗಳು ನಡೆಯುತ್ತಿವೆ, ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ರಾಜಕೀಯ ಬೆಳೆಯನ್ನು ಬೆಹಿಸಿಕೊಳ್ಳುತ್ತಿದೆ, ಏನಾದರೂ ರೈತರ ಪರವಾಗಿ ಕಾಳಜಿ ಇದ್ದರೆ ಸರ್ಕಾರ ನುಡಿದಂತೆ ನಡೆದು ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸವನ್ನು ತಡೆಯಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Written by - Savita M B | Last Updated : Dec 15, 2023, 01:18 PM IST
  • ಸದನದಲ್ಲಿ ಕಬ್ಬು ಬೆಳೆಗಾರರ ಕುರಿತು ಒಳ್ಳೆಯ ಚರ್ಚೆಗಳು ನಡೆಯುತ್ತಿವೆ
  • ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ರಾಜಕೀಯ ಬೆಳೆಯನ್ನು ಬೆಹಿಸಿಕೊಳ್ಳುತ್ತಿದೆ
  • ಈಗಲೂ ಸಕ್ಕರೆ ಸಚಿವರು ರೈತರ ಪರವಾಗಿ ಕೆಲಸವನ್ನು ಮಾಡಲಿ ಎಂದು ಕಳವಳದ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ: ಶ್ರೀಮಂತ ಪಾಟೀಲ್ ಆರೋಪ  title=

ಚಿಕ್ಕೋಡಿ: ಗುರುವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ್ ಗ್ರಾಮದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮೋಸ ಮಾಡುತ್ತಾರೆಂಬ ಆರೋಪ ಕೇಳಿ ಬರುತ್ತಿದೆ, ಇದು ರೈತರಲ್ಲೂ ಕೂಡ ಸಹಜವಾಗಿ ಕೇಳಿ ಬರುತ್ತದೆ ಆದರೆ ಈ ಭ್ರಷ್ಟಾಚಾರವನ್ನು ತೆಗೆದು ಹಾಕಬೇಕಾದ ಸರ್ಕಾರಗಳು ರೈತರ ಪರವಾಗಿ ನಿಲ್ಲದೆ ಬರೀ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ 2001 ರಿಂದ ನಾನು ಕೆಲವು ಸಕ್ಕರೆ ಕಾರ್ಖಾನೆಗಳು ಯಾವ ರೀತಿ ತೂಕದಲ್ಲಿ ಮೋಸ ಮಾಡುತ್ತಾರೆ ಎಂದು  ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಈಗಲೂ ಸಕ್ಕರೆ ಸಚಿವರು ರೈತರ ಪರವಾಗಿ ಕೆಲಸವನ್ನು ಮಾಡಲಿ ಎಂದು ಕಳವಳದ ವ್ಯಕ್ತಪಡಿಸಿದರು. 

ಇದನ್ನೂ ಓದಿ-ಹೆಚ್ಚಿನ ಅನುದಾನ ನೀಡುವಂತೆ ವಿಪಕ್ಷಗಳ ಪಟ್ಟು

ಹಿಂದೆ ನಡೆದ ಸದನದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳವಡಿಸಲಾಗುವುದೆಂದು ಬರವಸೆ ನೀಡಿದರು, ಕಳೆದ ಏಳು ತಿಂಗಳನಿಂದ ಯಾವುದೇ ಒಂದು ತೂಕದ ಮಷಿನನ್ನು ಸರ್ಕಾರ ವತಿಯಿಂದ ಕಾರ್ಖಾನೆಗಳ ಆವರಣದಲ್ಲಿ ಅಳವಡಿಕೆ ಮಾಡಿಲ್ಲ, ರೈತರ ಪರವಾಗಿದ್ದೇನೆ ಎಂದು ಹೇಳುವ ಸರ್ಕಾರ ಯಾವುದು ರೈತರ ಪರವಾಗಿ ನಿಲ್ಲುತ್ತಿಲ್ಲ, ನಾನು ಒರ್ವ ಸಕ್ಕರೆ ಕಾರ್ಖಾನೆಯ ಮಾಲೀಕನಾಗಿ ಸರ್ಕಾರಕ್ಕೆ ಹೇಳುತ್ತೇನೆ ಸರ್ಕಾರ ವತಿಯಿಂದ ಏನಾದರೂ ನೀವು ತೂಕ ಮಾಪನ ಯಂತ್ರವನ್ನು ಅಳವಡಿಸುವವರಿದ್ದರೆ ಮೊದಲಿಗೆ ನನ್ನ ಕಾರ್ಖಾನೆ ಆವರಣದಲ್ಲಿ ಅಳವಡಿಸಿ ಬಾಯಿ ಮಾತಿಗೆ ಏನಾದರೂ ಹೇಳಿ ರೈತರ ದಾರಿ ತಪ್ಪಿಸಬೇಡಿ, ಕಬ್ಬಿನ ತೂಕದಲ್ಲಿ ಮೋಸ ಮಾಡೋದು ಒಂದು ದೊಡ್ಡ ಜಾಲವವಿದೆ ಏನಾದ್ರೂ ಸರ್ಕಾರ ದಿಟ್ಟ ಕ್ರಮ ಕೈಗೊಂಡರೆ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. 

ಇದನ್ನೂ ಓದಿ-ಬಿಡಿಎ, ಬಿಬಿಎಂಪಿ ಆಸ್ತಿ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ : ಡಿಸಿಎಂ

2001 ರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ರೀತಿಯ ದಾಖಲಾತಿಗಳನ್ನು ನೀಡಿದ್ದೇನೆ, 2018ರಲ್ಲಿ ಅಂದಿನ ಮತ್ತು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಾಖಲೆ ಸಮೇತವಾಗಿ ನಾನು ಅವರಿಗೆ ಮನವರಿಕೆ ಮಾಡಿದ್ದೇನೆ, ಅವರು ಕೂಡ ಒಂದು ಕ್ಷಣ ಚಕಿತವಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದರು ಆದರೆ ಇದುವರೆಗೆ ಆ ಪತ್ರ ಯಾವುದಕ್ಕೂ ಪ್ರಯೋಜನವಾಗಿಲ್ಲ, ಮತ್ತು ರೈತರೂ ಕೂಡ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಕೂಡ ಸಲ್ಲಿಸಿದರು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನವನ್ನು ಕೂಡ ನೀಡಿತ್ತು, ಆದರೆ ಇದುವರೆಗೆ ರೈತರ ಬೆಳೆದ ಕಬ್ಬಿಗೆ ಸರ್ಕಾರಗಳು ನ್ಯಾಯವನ್ನು ನೀಡಿಲ್ಲ, ಆದಷ್ಟು ಬೇಗನೆ ಪ್ರತೀ ಕಾರ್ಖಾನೆಯಲ್ಲಿ ಸರ್ಕಾರದ ವತಿಯಿಂದ ಸುಧಾರಿತ ತೂಕ ಮಾಪನ ಯಂತ್ರವನ್ನು ಆಡಳಿಸಬೇಕು ಅಂದಾಗ ಮಾತ್ರ ತೂಕದಲ್ಲಿ ಮೋಸವನ್ನು ತಡೆಯೋದಕ್ಕೆ ಸಾಧ್ಯ, ಸದ್ಯ ರಾಜಕೀಯ ನಾಯಕರು ಈ ಭಾಗದ ರೈತರ ದಾರಿ ತಪ್ಪಿಸಲು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದನದಲ್ಲಿ ಚರ್ಚೆಗೆ ಮಾತ್ರ ಸೀಮಿತ ಮಾಡಿ ಯಾವುದೇ ಕಾರ್ಯರೂಪಕ್ಕೆ ಬಾರದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ, ರೈತರ ಮೇಲೆ ಕಾಳಜಿ ಇದ್ದರೆ ತುರ್ತಾಗಿ ನೀವು ತೂಕದಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಿರಿ ಎಂದು ಆಗ್ರಹಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News