ರೈತರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದ ಗೋವಿಂದ ಕಾರಜೋಳ

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಹಂತದ ರೈತರಿಗೆ ನೀರು ತಲುಪಬೇಕಾದರೆ ಮೇಲ್ಭಾಗದಲ್ಲಿರುವ ರೈತರ ಸಹಕಾರ ಬಹಳ ಮುಖ್ಯ. ಮೇಲ್ಭಾಗದಲ್ಲಿ ಕೆಲವರು ಪಂಪ್‌ಸೆಟ್‌ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ. ಆ ಸಮಸ್ಯೆಯನ್ನು ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Written by - Prashobh Devanahalli | Edited by - Manjunath N | Last Updated : Sep 21, 2022, 09:31 PM IST
  • ನಮ್ಮ ಕೆಳಗಿನ ರೈತರು ಸಹೋದರರಿದ್ದಂಗೆ, ಅವರಿಗೆ ನೀರು ಬಿಡ್ಬೇಕು ಎನ್ನುವ ಮನಸ್ಥಿತಿ ಇಲ್ಲದ ಕಾರಣ ಕೊನೆ ಹಂತದ ರೈತರಿಗೆ ನೀರು ಮುಟ್ಟುತ್ತಿಲ್ಲ.
  • ಕೆಲವರು ಪಂಪ್‌ಸೆಟ್ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ.
ರೈತರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದ ಗೋವಿಂದ ಕಾರಜೋಳ title=
file photo

ಬೆಂಗಳೂರು: ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಹಂತದ ರೈತರಿಗೆ ನೀರು ತಲುಪಬೇಕಾದರೆ ಮೇಲ್ಭಾಗದಲ್ಲಿರುವ ರೈತರ ಸಹಕಾರ ಬಹಳ ಮುಖ್ಯ. ಮೇಲ್ಭಾಗದಲ್ಲಿ ಕೆಲವರು ಪಂಪ್‌ಸೆಟ್‌ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ. ಆ ಸಮಸ್ಯೆಯನ್ನು ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಧಾನಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 69 ಮೈಲ್‌ನಲ್ಲಿ ಗೇಜ್ ನಿರ್ವಹಣೆ ಕುರಿತು ಗಮನ ಸೆಳೆದ ವೆಂಕಟಪ್ಪ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 69 ರಿಂದ 104ರವರೆಗೂ ರೈತರಿಗೆ ನೀರು ಬರ್ತಾ ಇಲ್ಲ. ಅದಕ್ಕಾಗಿ ಎರಡು ಗೇಜ್ ನಿರ್ವಹಣೆ ಮಾಡಬೇಡಿ. ಸಿಂಗಲ್ ಗೇಜ್ ಮಾಡಿ ಅಂತ ವೆಂಕಟಪ್ಪ ನಾಯಕರು ಕೇಳಿದ್ದಾರೆ. ಕೊನೆ ಹಂತದ ರೈತರಿಗೆ ನೀರು ಮುಟ್ಟಬೇಕಾದ್ರೆ, ಮೇಲ್ಭಾಗದಲ್ಲಿರುವ ರೈತರ ಸಹಕಾರ ಬಹಳ ಮುಖ್ಯ ಎಂದರು.

ನಮ್ಮ ಕೆಳಗಿನ ರೈತರು ಸಹೋದರರಿದ್ದಂಗೆ, ಅವರಿಗೆ ನೀರು ಬಿಡ್ಬೇಕು ಎನ್ನುವ ಮನಸ್ಥಿತಿ ಇಲ್ಲದ ಕಾರಣ ಕೊನೆ ಹಂತದ ರೈತರಿಗೆ ನೀರು ಮುಟ್ಟುತ್ತಿಲ್ಲ. ಕೆಲವರು ಪಂಪ್‌ಸೆಟ್ ಹಾಕಿಕೊಂಡು ತೊಂದರೆ ಕೊಡ್ತಾ ಇದ್ದಾರೆ. ಅದಕ್ಕಾಗಿ ನಾನು ಆ ಸಮಸ್ಯೆ ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿ ಆನ್, ಆಫ್ ಸಿಸ್ಟಮ್ ಮಾಡಿದ್ದೇವೆ. ಅದನ್ನು ಮುಂದುವರೆಸುತ್ತೇವೆ, ಅವರ ಬೇಡಿಕೆಯನ್ನ ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ : BSF Recruitment 2022 : BSF ನಲ್ಲಿ 1312 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ : ಇಲ್ಲದೆ ಸಂಪೂರ್ಣ ಮಾಹಿತಿ

ನನಗೆ ತಪ್ಪು ಮಾಹಿತಿ ಬಂದಿಲ್ಲ, ಸರಿಯಾದ ಮಾಹಿತಿಯೇ ಬಂದಿದೆ. ಮೇಲಿನ ರೈತರ ಸಹಕಾರ ಬಹಳ ಮುಖ್ಯ. ನಾವು ಈಗಾಗಲೇ ಕೆಆರ್‌ಎಸ್‌ನವರಿಂದ ವರದಿ ತರ್ಸಿದ್ದೇವೆ, ಅದರಲ್ಲಿ ಏನು ತಪ್ಪು ಮಾಹಿತಿ ಇಲ್ಲ. ಗಮನ ಸೆಳೆದಿದೀರಾ. ಕೆಆರ್‌ಎಸ್‌ನವರು ಬಂದು ವರದಿ ಕೊಟ್ಟಿದ್ದಾರೆ. ನಿಮಗೆ ನಾನು ಅನುಷ್ಠಾನ ಮಾಡಿಸಿ ಕೊಡ್ತೀನಿ ಅಂತ ಹೇಳಿದ್ದೇನೆ ಎಂದರು.

ಸಿಪೇಜ್‌ ಡ್ರೈನ್‌ ಮಾಡಲು ತೀರ್ಮಾನ

ನಮ್ಮ ಕ್ಷೇತ್ರದಲ್ಲಿರುವ ಯಗಚಿ ಜಲಾಶಯ ಭಾದಿತ ಪ್ರದೇಶ ಎಂದು ಮಾಸವಳ್ಳಿ ಹಾಗೂ ನಾರಾಯಣಪುರ ಎಂಬ ಗ್ರಾಮಗಳಿವೆ. 2008ರಿಂದಲೂ ಪ್ರಯತ್ನ ಪಟ್ಟರೂ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಲಿಂಗೇಶ್‌ ಅವರು ಗಮನ ಸೆಳೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರ ಸಿಪೇಜ್ ಡ್ರೈನ್‌ಗಳನ್ನು ಮಾಡಲು ತೀರ್ಮಾನ ಮಾಡಿದೆ.ಸೈಟ್ ಕಂಡಿಷನ್ ಸರಿ ಇಲ್ಲದಕ್ಕಾಗಿ, ಮಳೆ ಹೆಚ್ಚಾಗಿರುವುದರಿಂದ ಮಾಡಲು ಸಾಧ್ಯವಾಗಿಲ್ಲ. ಖಂಡಿತವಾಗಿಯೂ ಮಾಡಿಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ 63,200 ವರೆಗೆ ವೇತನ

ಇದು ಭಾಷಣ ಮಾಡುವ ಕೆಲಸ ಅಲ್ಲ. ಪಂಚಾಯತ್ ರಾಜ್ ಇಲಾಖೆ ಮತ್ತು ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡ್ತೀನಿ. ಅವರು ವರದಿ ರೆಡಿ ಮಾಡಲಿ. ಶಾಸಕರ ಆಶಯ ಏನು ಅಂದ್ರೆ, ಗ್ರಾಮ ಸ್ಥಳಾಂತರ ಆಗ್ಬೇಕು ಅಂತಾರೆ. ಹಾಗೇ ಮಾಡಲು ಆಗಲ್ಲ. ಪ್ರಾಜೆಕ್ಟ್ ಹಿನ್ನೀರಿನಿಂದ ಮುಳುಗಡೆಯಾಗಿದ್ದರೆ ಸ್ಥಳಾಂತರ ಮಾಡಬಹುದಾಗಿತ್ತು. ಈಗ ಅವರು ಜನರ ವಾಸಕ್ಕೆ ಮಾಡಲು ತೊಂದರೆ ಆಗುತ್ತೆ, ತೇವಾಂಶ ಇದೆ ಅಂದ್ರೆ. ಸಿಪೇಜ್ ಇದೆ ಅಂದ್ರೆ, ಸಿಪೇಜ್ ಡ್ರೈನ್‌ಗಳನ್ನು ಸರಿ ಮಾಡಿಸ ಕೊಡ್ತೀವಿ ಎಂದು ತಿಳಿಸಿದರು.

ಇನ್ನು, ಮಂಗಳೂರು ನಗರ ಹಾಗ ಸುರತ್ಕಲ್ ವ್ಯಾಪ್ತಿಯ ಆಟೋರಿಕ್ಷಾ ಮೀಟರ್ ಗಳ ಪ್ರಮಾಣ ಪತ್ರಗಳನ್ನ ಹಿಂದಿನಂತೆ ಮಂಗಳೂರು ಕಾನೂನು ಮಾಪನ ಶಾಸ್ತ್ರ ಕಚೇರಿಯಲ್ಲಿ ಮುದ್ರಿಸುವ ನಿಟ್ಟಿನಲ್ಲಿ ವೇದವ್ಯಾಸ್‌ ಕಾಮತ್‌ ಅವರು ಗಮನ ಸೆಳೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ನಿಮ್ಮ ಸಮಸ್ಯೆ ಪರಿಹಾರವಾಗಿದೆ. ಹೊರಡಿಸಿರುವ ಆದೇಶವನ್ನ ಹಿಂಪಡೆದಿದ್ದು, ಈ ಹಿಂದಿನಂತೆ ಮಂಗಳೂರಿನಲ್ಲೇ ನಡೆಯುತ್ತದೆ. ಸದಸ್ಯರಿಗೆ ಆತಂಕ ಬೇಡ, ಸರ್ಕಾರ ಸೂಚನೆ ಕೊಟ್ಟಿದೆ. ಈ ಹಿಂದಿನಂತೆ ವ್ಯವಸ್ಥಿತವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News