ಬೆಂಗಳೂರು : ಮದ್ಯ ಖರೀದಿಸಲು ವಯಸ್ಸಿನ ನಿರ್ಬಂಧವನ್ನು ಸಡಿಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಮದ್ಯಪಾನ ಮಾರಾಟಕ್ಕಾಗಿನ ಕಾನೂನುಬದ್ಧ ವಯಸ್ಸನ್ನು ಸಡಿಲಿಸುವ ಸಂಬಂಧ ತಿದ್ದುಪಡಿ ತರಲು ರಾಜ್ಯ ಅಬಕಾರಿ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಿದೆ. ಈ ಮೊದಲು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ಇತ್ತು. ಈಗ ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು) (ತಿದ್ದುಪಡಿ) ನಿಯಮ 2023 ತರಲು ಮುಂದಾಗಿರುವ ಸರ್ಕಾರ ಈ ಸಂಬಂಧ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಅದರಂತೆ ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸಲು ಸರ್ಕಾರ ಸಜ್ಜಾಗಿದೆ.
ಇದನ್ನೂ ಓದಿ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ಈ ತಿದ್ದುಪಡಿ ಕಾನೂನಿನ ಪ್ರಕಾರ ಈ ಮುಂಚೆ ಮದ್ಯ ಕೊಂಡು ಕೊಳ್ಳಲು ಇದ್ದ 21 ವರ್ಷದ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಕೆಯಾಗಲಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆ ನಿಯಮ 10ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸಾರ್ವಜನಿಕರು ಆಕ್ಷೇಪ ಸಲ್ಲಿಸಲು 30 ದಿನಗಳ ಸಮಯಾವಕಾಶ ನೀಡಲಾಗಿದೆ.
2015 ಮುನ್ನ ರಾಜ್ಯದಲ್ಲಿ ಕುಡಿತದ ವಯಸ್ಸು 18 ಇತ್ತು. ಬಳಿಕ ಅದನ್ನು ತಿದ್ದುಪಡಿ ಮಾಡಿ ಕನಿಷ್ಠ ವಯೋಮಿತಿಯನ್ನು 21ಗೆ ಏರಿಸಲಾಗಿತ್ತು. ಕರ್ನಾಟಕ ಅಬಕಾರಿ ಪರವಾನಿಗೆ (ಸಾಮನ್ಯ ಷರತ್ತು) ನಿಯಮ 1967ಗೆ 2015ರಲ್ಲಿ ಕರ್ನಾಟಕ ಅಬಕಾರಿ ಇಲಾಖೆ ತಿದ್ದಪಡಿ ತಂದು ಕುಡಿತದ ವಯಸ್ಸನ್ನು ಕನಿಷ್ಠ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಿತ್ತು. ಅದರ ಪ್ರಕಾರ ಪಬ್, ಬಾರ್ ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ.
ಇದನ್ನೂ ಓದಿ: ವಾರ್ಡ್ ಸಮಸ್ಯೆ ಸಂಬಂಧ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇರ ಬೇಟಿ
ಆದರೂ ಈ ಕಾನೂನಜ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳಲ್ಲೇ ಕನಿಷ್ಠ ವಯಸ್ಸಿನ ಬಗ್ಗೆ ಗೊಂದಲ ಇತ್ತು. ಬೆಂಗಳೂರಿನಲ್ಲಿ ಅನೇಕ ಯುವಕ, ಯುವತಿಯರು ವಯಸ್ಸು 21 ಆಗದಿದ್ದರೂ ಮದ್ಯ ಸೇವನೆ ಮಾಡುತ್ತಿದ್ದರು. ಹಲವು ಪಬ್, ಬಾರ್ ಗಳು ವಯಸ್ಸು 21 ಆಗದಿದ್ದರೂ ಯುವಕ, ಯುವತಿಯರಿಗೆ ಮದ್ಯ ಮಾರಾಟ ಮಾಡುತ್ತಿದ್ದರು. ಅನೇಕರು ಈ ಕುಡಿತದ ವಯಸ್ಸನ್ನು ಸಡಿಲಿಸುವಂತೆ ಒತ್ತಾಯಿಸುತ್ತಿದ್ದರು.
ಇದೀಗ ರಾಜ್ಯ ಅಬಕಾರಿ ಇಲಾಖೆ ಕುಡಿತದ ವಯಸ್ಸನ್ನು 21ರಿಂದ ಮತ್ತೆ ಈ ಮುಂಚಿನಂತೆ 18ಕ್ಕೆ ಇಳಿಸಲು ನಿರ್ಧರಿಸಿದೆ. ಈ ಸಂಬಧ ಕರಡು ನಿಯಮ ರೂಪಿಸಿ ಸಾರ್ವಜನಿಕರು ಆಕ್ಷೇಪ ಸಲ್ಲಿಸಲು ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು) (ತಿದ್ದುಪಡಿ) ನಿಯಮ 2023 ಮೂಲಕ ನಿಯಮ 10ಕ್ಕೆ ತಿದ್ದುಪಡಿ ತಂದು ಕುಡಿತದ ವಯೋಮಿತಿ ಸಡಿಲಿಸಲು ಮುಂದಾಗಿದೆ. ಆಕ್ಷೇಪ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಜ.10ಕ್ಕೆ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: Exclusive : ಸ್ಯಾಂಟ್ರೋ ರವಿ ಬಲೆಗೆ ಬೀಳಲು ಕಾರಣ ರಾಯಚೂರು ಎಸ್ಪಿ!
ಸರ್ಕಾರದ ಈ ಕುಡಿತದ ವಯಸ್ಸು ಸಡಿಲಿಸುವ ತಿದ್ದುಪಡಿಗೆ ಪೋಷಕರಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವರು ವಯಸ್ಸು ಸಡಿಲಿಸುವ ಪರವಾಗಿದ್ದರೆ, ಹಲವರು ಇದರ ವಿರುದ್ಧ ಇದ್ದಾರೆ. ಸದ್ಯ ಸರ್ಕಾರ ಕುಡಿತದ ವಯೋಮಿತಿ ಸಡಿಲಿಕೆಗೆ ಮುಂದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.