ಮಂಡ್ಯ: ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದ್ದು, ಮಂಡ್ಯ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಸಂಬಂಧ ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಆನ್ ಲೈನ್(Online) ನೋಂದಣಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಹಿಲ್ಲೆಯಲ್ಲಿ ಭತ್ತ ಖರೀದಿ ಸಂಬಂಧ ರೈತರು ಆನ್ ಲೈನ್ ಮೂಲಕ ನೋಂದಣಿ ಮಾಡಿಸಲು 30 ಕೇಂದ್ರಗಳನ್ನು ತೆರೆಯಲಾಗಿದೆ. ಹೀಗಾಗಿ ಭತ್ತ ಬೆಳೆದ ರೈತರು ನೋಂದಣಿ ಮಾಡಿಸುವಂತೆ ಹೇಳಿದ್ದಾರೆ.
'ಸಿ.ಪಿ.ಯೋಗೀಶ್ವರ್'ಗೆ ಖುಲಾಯಿಸಿದ ಅದೃಷ್ಠ: ಬಿಎಸ್ ವೈ ಸಂಪುಟಕ್ಕೆ ಎಂಟ್ರಿ ಖಚಿತ!
ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಭತ್ತದ ಇಳುವರಿಯೂ ಚೆನ್ನಾಗಿ ಬಂದಿದೆ. ಸರ್ಕಾರವೂ ಕೂಡ ಬೆಂಬಲ ಬೆಲೆ ನಿಗದಿಪಡಿಸಿದ್ದು, ಜಿಲ್ಲೆಯಲ್ಲಿ ರೈತರು ಆನ್ ಲೈನ್ ಮೂಲಕ ನೋಂದಣಿ ಮಾಡಿಸಲು 30 ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ರೈತರಿಗೆ ದೆಹಲಿ ಪ್ರವೇಶ ನಿರ್ಬಂಧ: ಡಿ. 7 ರಂದು ಸಾವಿರಾರು ರೈತರಿಂದ ವಿಧಾನಸೌಧ ಮುತ್ತಿಗೆ