ಸದ್ಯದಲ್ಲೇ ಪ್ರವಾಸಿ ತಾಣವಾಗಲಿದೆ ಫ್ರೀಡಂ ಪಾರ್ಕ್!

ಬೆಂಗಳೂರಿನ ಫ್ರೀಡಂಪಾರ್ಕ್ ಇತ್ತೀಚಿನ ದಿನಗಳಲ್ಲಿ ಹಲವು ಪ್ರತಿಭಟನೆಗಳಿಗೆ ಪ್ರಮುಖ ಸ್ಥಳವಾಗಿದೆ. ಹಾಗಾಗಿ ಇದನ್ನು ನಗರದ ಪ್ರವಾಸಿ ತಾಣವಾಗಿ ರೂಪಿಸಳು ಉದ್ದೀಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 

Last Updated : Jan 28, 2018, 02:48 PM IST
ಸದ್ಯದಲ್ಲೇ ಪ್ರವಾಸಿ ತಾಣವಾಗಲಿದೆ ಫ್ರೀಡಂ ಪಾರ್ಕ್! title=

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಸ್ಸ್ವಾತಂತ್ರಿ ಉದ್ಯಾನವನವು ಹಲವು ಧರಣಿ, ಪ್ರತಿಭಟನೆ, ಮುಷ್ಕರ, ಸತ್ಯಾಗ್ರಹಗಳಿಗೆ ಹೆಸರಾಗಿದ್ದು, ಇದನ್ನು ಶೀಘ್ರದಲ್ಲಿಯೇ ಪ್ರವಾಸಿ ತಾಣವಾಗಿ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. 

ಈ ಕುರಿತು ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಮೌರ್ಯ ವೃತ್ತದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಹೊರತುಪಡಿಸಿದರೆ, ಫ್ರೀಡಂಪಾರ್ಕ್ ಇತ್ತೀಚಿನ ದಿನಗಳಲ್ಲಿ ಹಲವು ಪ್ರತಿಭಟನೆಗಳಿಗೆ ಪ್ರಮುಖ ಸ್ಥಳವಾಗಿದೆ. ಹಾಗಾಗಿ ಇದನ್ನು ನಗರದ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಇದರ ಮೇಲ್ವಿಚಾರಣೆಯನ್ನು ಬಿಬಿಎಂಪಿ ಗೆ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ. 

ಸ್ವಾತಂತ್ರ್ಯ ಉದ್ಯಾನವನ 
ಬೆಂಗಳೂರಿನಲ್ಲಿರುವ ಸ್ವಾತಂತ್ರ್ಯ ಉದ್ಯಾನವನ(ಫ್ರೀಡಂ ಪಾರ್ಕ್)ವು ಮೊದಲು ಕೇಂದ್ರ ಜೈಲ್ ಆಗಿತ್ತು. ನವೆಂಬರ್ 2008 ರಲ್ಲಿ ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಪ್ರತಿಭಟನೆಗಾಗಿ ಅದರ ಒಂದು ಭಾಗವನ್ನು ನಿಗದಿಪಡಿಸಲಾಗಿದೆ. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಘೋಷಿಸಿದಾಗ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರನ್ನು ಈ ಸ್ಥಳದಲ್ಲಿ ಬಂಧಿಸಲಾಯಿತು. ಲೋಕ ಪಾಲ್ ಮಸೂದೆಯನ್ನು ಜಾರಿಗೆ ತರಲು ಸರ್ಕಾರದ ಕ್ರಮಕ್ಕೆ ಅಣ್ಣಾ ಹಜಾರೆ ಅನಿರ್ದಿಷ್ಟ ಉಪವಾಸವನ್ನು ಬೆಂಬಲಿಸುವ ಇಂಡಿಯಾ ಎಗೆನೆಸ್ಟ್ ಕರಪ್ಷನ್ (ಐಎಸಿ) ಹೋರಾಟವನ್ನೂ ಸಹ ಇಲ್ಲಿ ಆಯೋಜಿಸಲಾಗಿತ್ತು

Trending News