ಬೆಂಗಳೂರು: ಬಿಬಿಎಂಪಿಯ ಉತ್ತರಹಳ್ಳಿ ಪದವಿ ಪೂರ್ವ ಕಾಲೇಜು 2022-23 ನೇ ಸಾಲಿನ ಪ್ರಥಮ ಪಿ.ಯು.ಸಿ. ತರಗತಿಗಳಿಗೆ ಉಚಿತ ಪ್ರವೇಶ ನೀಡಲು ತೀರ್ಮಾನಿಸಿದೆ.
ಉತ್ತರಹಳ್ಳಿ ವಾರ್ಡ್ ಮತ್ತು ಸುತ್ತಮುತ್ತಲಿನ ವಾರ್ಡ್‌ಗಳ ಬಡವರ್ಗದ ಮಕ್ಕಳ ಅನುಕೂಲಕ್ಕಾಗಿ ಈ ಕಾಲೇಜನ್ನು ಆರಂಭಿಸಲಾಗಿದೆ.
ಈ ಪದವಿಪೂರ್ವ ಕಾಲೇಜಿನಲ್ಲಿ (PU College) ಈ ಕೆಳಗಿನ ಸಂಯೋಜನೆಗಳುಳ್ಳ ತರಗತಿಗಳನ್ನು ಪ್ರಾರಂಭಿಸಲಾಗಿದೆ...
1. ಕಲಾ ವಿಭಾಗದಲ್ಲಿ HEPS.
2. ವಾಣಿಜ್ಯ ವಿಭಾಗದಲ್ಲಿ HEBA & CEBA.
3. ವಿಜ್ಞಾನ ವಿಭಾಗದಲ್ಲಿ PCMB & PCMC
ಇದನ್ನೂ ಓದಿ- Fight For Egg: ಮೊಟ್ಟೆ ಹಣಕ್ಕಾಗಿ ಶಿಕ್ಷಕರಿಬ್ಬರ ಬೀದಿ ಜಗಳ!
ಕಾಲೇಜಿನಲ್ಲಿ ಈ ಕೆಳಗಿನ ಸೌಲಭ್ಯಗಳು ಇರಲಿವೆ:
- ದ್ವಿತೀಯ PUC (Second PUC) ವಾರ್ಷಿಕ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 35,000/- ರೂ. -ಪ್ರೋತ್ಸಾಹಧನ ನೀಡಲಾಗುವುದು.
- SC / ST ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆಯಿಂದ ವಿಶೇಷ ವಿದ್ಯಾರ್ಥಿವೇತನ ನೀಡಲಾಗುವುದು.
- ಉಚಿತ ಪಠ್ಯಪುಸ್ತಕಗಳು ಹಾಗೂ ನೋಟ್ ಪುಸ್ತಕಗಳು.
- ಉಚಿತ ಸಮವಸ್ತ್ರ, ಸೈಟರ್, ಟ್ರಾಕ್ ಶೂಟ್ಸ್ ಮತ್ತು ಬ್ಲೇಸರ್.
- ಉಚಿತ ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳು.
- ಉತ್ತಮ ಗ್ರಂಥಾಲಯ, E-Library ಹಾಗೂ ಪ್ರಯೋಗಾಲಯಗಳ ವ್ಯವಸ್ಥೆ ಮತ್ತು ಉಚಿತ ಶೈಕ್ಷಣಿಕ ಪ್ರವಾಸ.
- ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ CET & TALLY ಪರೀಕ್ಷೆಗಳಿಗೆ ವಿಶೇಷ ತರಬೇತಿ
- ನುರಿತ ಉಪನ್ಯಾಸಕರಿಂದ ಬೋಧನೆ
ಇದನ್ನೂ ಓದಿ- ಕುದುರೆಗಾಡಿ ಸ್ಪರ್ಧೆಯಲ್ಲಿ ಅಚಾತುರ್ಯ; ವ್ಯಕ್ತಿಯ ಮೇಲೆರಗಿ ಬಂತು ಕುದುರೆ..! ಇಲ್ಲಿದೆ ವಿಡಿಯೋ
ಕಾಲೇಜಿನಲ್ಲಿರುವ ಇನ್ನಿತರ ಸೌಲಭ್ಯಗಳು:
• ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ CCTV ಅಳವಡಿಸಲಾಗಿದೆ
• ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
• ಪ್ರತಿ ಕೊಠಡಿಗಳಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗಿದೆ
• ಉಚಿತ ಗಣಕಯಂತ್ರ ತರಬೇತಿ
• ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಘಟಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.