ಈಜಲು ಹೋದ ನಾಲ್ವರು ಯುವಕರು ನೀರುಪಾಲು

ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌ 

Written by - Yashaswini V | Last Updated : Apr 14, 2023, 06:58 PM IST
  • ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು.
  • ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌
ಈಜಲು ಹೋದ ನಾಲ್ವರು ಯುವಕರು ನೀರುಪಾಲು title=
Representational Image

ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಸಿರಿಗೇರೆ ಗ್ರಾಮದ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.‌ 

ಇದನ್ನೂ ಓದಿ- ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ದಂಧೆಕೋರರ ಬಂಧನ

ಈ ವೇಳೆ ಒಬ್ಬನನ್ನು ರಕ್ಷಿಸಲು ಹೋಗಿ ಇನ್ನೊಬ್ಬ ಹಿಂಬದಿಯಿಂದ ಮತ್ತೊಬ್ಬ ಹೀಗೆ  ಹೋಗಿ ಐವರು ಮೃತ್ಯುವಿನ ಕುಣಿಕೆಯಲ್ಲಿ ಸಿಲುಕಿದ್ದರು. ಇವರಲ್ಲಿ ಓರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಇದನ್ನೂ ಓದಿ- ಮುಸ್ಲಿಂ ಮೀಸಲಾತಿ ರದ್ದತಿ: ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತ-ಸಿದ್ದು

ಮೃತ ದುರ್ದೈವಿಗಳನ್ನು ಸಂತೋಷ ಈಡೀಗಾ (19), ಅಜಯಬಾಬು ಜೋಕಿ( 19), ಕೃಷ್ಣಾ ಜೋಕಿ (20) ಆನಂದ ವಿಷ್ಣು ಕೋಕರೆ (20)  ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ.  ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News