ಬಾತ್​ರೂಂನಲ್ಲಿ ಜಾರಿ ಬಿದ್ದ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ: ಬಲಗಾಲಿಗೆ ಪೆಟ್ಟು

ಗೌಡರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಬಾತ್​ರೂಂಗೆ ತೆರಳಿದ್ದ ವೇಳೆ ನಡೆದ ಘಟನೆ.

Last Updated : Feb 2, 2019, 12:22 PM IST
ಬಾತ್​ರೂಂನಲ್ಲಿ ಜಾರಿ ಬಿದ್ದ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ: ಬಲಗಾಲಿಗೆ ಪೆಟ್ಟು title=
File Image

ಬೆಂಗಳೂರು: ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಾತ್ ರೂಂ ನಲ್ಲಿ ಜಾರಿ ಬಿದ್ದಿದ್ದು, ಅವರ ಬಲಗಾಲಿಗೆ ಪೆಟ್ಟಾಗಿದೆ. 

ಗೌಡರು ಇಂದು ಬೆಳಿಗ್ಗೆ ತಮ್ಮ ಪದ್ಮನಾಭನಗರ ನಿವಾಸದಲ್ಲಿ ಬಾತ್​ರೂಂಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಬಲಗಾಲಿನ ಮಂಡಿ ಬಳಿ ಕಾಲು ಉಳುಕಿದೆ. ಮೂಳೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

85 ವರ್ಷದ ಗೌಡರ ಕಾಲಿಗೆ ಗಂಭೀರವಾಗಿ ಪೆಟ್ಟಾಗಿರುವುದರಿಂದ ನಡೆಯಲು ಕಷ್ಟವಾಗುತ್ತಿದೆ. ಹಾಗಾಗಿ ಕಾಲಿಗೆ ಭಾರ ಬೀಳದಂತೆ ನೋಡಿಕೊಳ್ಳುವ ಅಗ್ಯವಿದ್ದು, ಅವರಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ.

ಗೌಡರಿಗೆ ಆಸ್ಪತ್ರೆಗೆ ತೆರಳಿ ಎಕ್ಸರೆ ಮಾಡಿಸಲು ವೈದ್ಯರು ಸಲಹೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಗೌಡರು ಆಸ್ಪತೆಗೆ ತೆರಳಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Trending News