ಜಗದೀಶ್ ಶೆಟ್ಟರ್ ಕಾರು ಅಪಘಾತ; ಅಪಾಯದಿಂದ ಪಾರಾದ ಮಾಜಿ ಸಿಎಂ

ಇಂದು ಮಧ್ಯಾಹ್ನ ಹೊಟೇಲ್‌ನಿಂದ ಸುವರ್ಣ ಸೌಧಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Last Updated : Dec 20, 2018, 04:59 PM IST
ಜಗದೀಶ್ ಶೆಟ್ಟರ್ ಕಾರು ಅಪಘಾತ; ಅಪಾಯದಿಂದ ಪಾರಾದ ಮಾಜಿ ಸಿಎಂ  title=
File Image

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್‌ ಶೆಟ್ಟರ್‌ ಅವರ ಕಾರು ನಗರದ ಧರ್ಮನಾಥ ವೃತ್ತದ ಬಳಿ ಮಂಗಳವಾರ ಮಧ್ಯಾಹ್ನ ಅಪಘಾತಕ್ಕೀಡಾಗಿದೆ. ಮಾಜಿ ಸಿಎಂ ಅದೃಷ್ಟವಷಾತ್‌ ಅಪಾಯದಿಂದ ಪಾರಾಗಿದ್ದಾರೆ.

ಇಂದು ಮಧ್ಯಾಹ್ನ ಹೊಟೇಲ್‌ನಿಂದ ಸುವರ್ಣ ಸೌಧಕ್ಕೆ ತೆರಳುತ್ತಿದ್ದ ವೇಳೆ ಜಗದೀಶ್‌ ಶೆಟ್ಟರ್‌ ಅವರ ಕಾರಿಗೆ ಹಿಂಬದಿಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಈ ಅವಘಡ ಸಂಭವಿಸಿದೆ. 

Trending News