ಕೆಂಪಣ್ಣ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ: ಯಾರಿಗಿದೆ ಮಾನ..ಮೊಕದ್ದಮೆ ಹಾಕುವುದಕ್ಕೆ?

40 ಪರ್ಸೆಂಟ್ ಕಮೀಷನ್ ಬಗ್ಗೆ ನೆನ್ನೆ ಕೆಲವು ಗುತ್ತಿಗೆದಾರರು ಆರೋಪ ಮಾಡಿದ್ದಾರೆ, ಯಾವುದಾದರೂ ಸಾಕ್ಷಿ ಇದ್ರೆ ತನಿಖೆ ನಡೆಸ್ತೀವಿ ಅಂತಾರೆ. ತನಿಖೆಗೆ ಕೊಟ್ರೆ ಸಾಕ್ಷಿ ಕೊಡ್ತೀವಿ ಅಂತಾ ಇವರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ   

Written by - Prashobh Devanahalli | Edited by - Yashaswini V | Last Updated : Aug 25, 2022, 06:54 PM IST
  • 40 ಪರ್ಸೆಂಟ್ ಕಮೀಷನ್ ಬಗ್ಗೆ ನೆನ್ನೆ ಕೆಲವು ಗುತ್ತಿಗೆದಾರರು ಆರೋಪ ಮಾಡಿದ್ದಾರೆ
  • ಯಾವುದಾದರೂ ಸಾಕ್ಷಿ ಇದ್ರೆ ತನಿಖೆ ನಡೆಸ್ತೀವಿ ಅಂತಾರೆ.
  • ತನಿಖೆಗೆ ಕೊಟ್ರೆ ಸಾಕ್ಷಿ ಕೊಡ್ತೀವಿ ಅಂತಾ ಇವರು ಹೇಳ್ತಾರೆ.
ಕೆಂಪಣ್ಣ ವಿರುದ್ಧ ಮುನಿರತ್ನ ಮಾನನಷ್ಟ ಮೊಕದ್ದಮೆ: ಯಾರಿಗಿದೆ ಮಾನ..ಮೊಕದ್ದಮೆ ಹಾಕುವುದಕ್ಕೆ? title=
Former CM HD Kumaraswamy

ಬೆಂಗಳೂರು: ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಅವರ ಮೇಲೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಭ್ರಷ್ಟಾಚಾರ ಆರೋಪ ಹಿನ್ನಲೆ ಮಾನ ನಷ್ಟ ಮೊಕದ್ದಮೆ ಹಾಕುವುದಾಗಿ ನಿರ್ಧರಿಸಿರುವುದನ್ನು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಯಾರಿಗಿದೆ ಮಾನ..ಮೊಕದ್ದಮೆ ಹಾಕುವುದಕ್ಕೆ? ಎಂದು ವ್ಯಂಗ್ಯ ಮಾಡಿದರು.

ನಗರದ ಜೆ ಪಿ ಭವನದಲ್ಲಿ ಮಾಧ್ಯಮಗಳಿಗೆ ಮಾತಾನ್ನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಶಾಸಕರಾಗುವುದಕ್ಕೂ ಮೊದಲು ಇವರೇ ಗುತ್ತಿಗೆದಾರರು ಆಗಿದ್ರು. ಆ ಸಂದರ್ಭದಲ್ಲಿ ಒಂದು ಮಗು ಸತ್ತು ಹೋಯಿತು... ಆ ಕೆಲಸ ಮಾಡಿದ್ದು ಇವರೆ ಅಲ್ಲವೇ. ನರೇಂದ್ರ ಮೋದಿ ಇಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್, ಬಿಜೆಪಿ ಯಾರು ಹೊರತಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ- ಮುನಿರತ್ನ ವಿರುದ್ಧ ಅಬ್ಬರಿಸಿದ್ದ ಪ್ರಧಾನಿ ಮೋದಿ ‘ಮೌನವ್ರತ’ ಪಾಲಿಸುತ್ತಿರುವುದೇಕೆ?: ಕಾಂಗ್ರೆಸ್

ಈದ್ಗಾ ಮೈದಾನದ ತೀರ್ಪು; ನ್ಯಾಯಾಲಯದ ತೀರ್ಪನ್ನು ಎಲ್ಲರು ಪಾಲಿಸಬೇಕು :-
ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಉಚ್ಚ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಬೆಂಗಳೂರಿನ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರಕ್ಕೆ ಆಗಾಗ ಇಂತಹ ಘಟನೆಗಳು ಆಗುವ ಮೂಲಕ ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಅನುಕೂಲ. ಇಂತ ವಿಚಾರಗಳನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದರು.

ಇದನ್ನೂ ಓದಿ- DK Shivakumar : ಡಿಕೆಶಿ ಆಪ್ತರಿಗೆ ನೋಟಿಸ್ ; 'ಕಿರುಕುಳ ಕೊಡಕ್ಕೂ ಲಿಮಿಟ್ ಇರಬೇಕು'

40% ಕಮಿಷನ್ ವಿಚಾರ: 
40 ಪರ್ಸೆಂಟ್ ಕಮೀಷನ್ ಬಗ್ಗೆ ನೆನ್ನೆ ಕೆಲವು ಗುತ್ತಿಗೆದಾರರು ಆರೋಪ ಮಾಡಿದ್ದಾರೆ, ಯಾವುದಾದರೂ ಸಾಕ್ಷಿ ಇದ್ರೆ ತನಿಖೆ ನಡೆಸ್ತೀವಿ ಅಂತಾರೆ. ತನಿಖೆಗೆ ಕೊಟ್ರೆ ಸಾಕ್ಷಿ ಕೊಡ್ತೀವಿ ಅಂತಾ ಇವರು ಹೇಳ್ತಾರೆ. ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ , ಇದ್ದ ಕಿಂಗ್ ಪಿನ್, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ರು. ಆದರೂ ಎಲ್ಲ ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಎಷ್ಟು ಕೋಟಿ ಆಫರ್ ಕೊಟ್ಟರು, ಎಲ್ಲರೂ ಇನ್ನೂ ಬದುಕಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News