ಭೀಕರ ರಸ್ತೆ ಅಪಘಾತ; ಐವರು ಸಾವು

ಮಧುಗಿರಿ ಸಮೀಪದ ಕೆರೆಗಳ ಪಾಳ್ಯದ ಬಳಿ ಬುಧವಾರ ಸಂಜೆ ಅಪಘಾತ ನಡೆದಿದೆ.

Last Updated : Jul 4, 2018, 08:14 PM IST
ಭೀಕರ ರಸ್ತೆ ಅಪಘಾತ; ಐವರು ಸಾವು title=

ತುಮಕೂರು: ಕಾರು ಮತ್ತು ಸಿಮೆಂಟ್​ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಸಾವಿಗೀಡಾಗಿರುವ ಘಟನೆ ಮಧುಗಿರಿ ಸಮೀಪದ ಕೆರೆಗಳ ಪಾಳ್ಯದ ಬಳಿ ಬುಧವಾರ ಸಂಜೆ ನಡೆದಿದೆ.

ಪಾವಗಡದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳುವಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಬೆಂಗಳೂರಿನ ಬೈಯಪ್ಪನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 

ಮೃತರನ್ನು ಮರುಳಿ(20), ಮಂಜುನಾಥ್ (24), ದಿನೇಶ್ (24), ರಾಮ್ ಮೋಹನ್(23), ಶಿವಪ್ರಸಾದ್ (25) ಎಂದು ಗುರುತಿಸಲಾಗಿದೆ. ಈ ಸಂಬಂಧ ಮಧುಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Trending News