Fight For Egg: ಮೊಟ್ಟೆ ಹಣಕ್ಕಾಗಿ ಶಿಕ್ಷಕರಿಬ್ಬರ ಬೀದಿ ಜಗಳ!

ಮಕ್ಕಳಿಗೆ ಪಾಠ ಕಲಿಸಬೇಕಾದ ಶಿಕ್ಷಕರು ಮೊಟ್ಟೆ (Egg) ಹಣಕ್ಕಾಗಿ ಬೀದಿ ಜಗಳ ಮಾಡಿಕೊಂಡಿದ್ದಾರೆ. ಮುರ್ಜಾಪೂರ್ ಗ್ರಾಮದ ಶಿಕ್ಷಕ ಶಾಂತಕುಮಾರ್ ಹಾಗೂ ಅದೇ ಶಾಲೆಯ ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿ ಇಬ್ಬರೂ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ ನಡೆಸಿದ್ದಾರೆ.

Written by - Zee Kannada News Desk | Last Updated : Mar 22, 2022, 06:49 AM IST
  • ಶಿಕ್ಷಕರಿಬ್ಬರ ನಡುವೆ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ
  • ಮೊಟ್ಟೆ ಹಣಕ್ಕಾಗಿ ಬಡಿದಾಡಕೊಂಡಿರುವ ಶಿಕ್ಷಕರು
  • ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿ ಹಾಗೂ ಶಿಕ್ಷಕ ಶಾಂತಕುಮಾರ್ ನಡುವೆ ಜಗಳ
Fight For Egg: ಮೊಟ್ಟೆ  ಹಣಕ್ಕಾಗಿ ಶಿಕ್ಷಕರಿಬ್ಬರ ಬೀದಿ ಜಗಳ! title=
Fight For Egg

ಬೀದರ್ :  ಸರಿ-ತಪ್ಪುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿರುವ ಶಿಕ್ಷಕರೇ ಮೊಟ್ಟೆ ಹಣಕ್ಕಾಗಿ ಬಡಿದಾಡಕೊಂಡಿರುವ ಘಟನೆ ಬೀದರ್ ತಾಲೂಕಿನ ಮರ್ಜಾಪೂರ್ ಗ್ರಾಮದಲ್ಲಿ ನಡೆದಿದೆ.

ಶಿಕ್ಷಕರಿಬ್ಬರ ನಡುವೆ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ:
ಹೌದು, ಮಕ್ಕಳಿಗೆ ಪಾಠ ಕಲಿಸಬೇಕಾದ ಶಿಕ್ಷಕರು ಮೊಟ್ಟೆ (Egg) ಹಣಕ್ಕಾಗಿ ಬೀದಿ ಜಗಳ ಮಾಡಿಕೊಂಡಿದ್ದಾರೆ. ಮುರ್ಜಾಪೂರ್ ಗ್ರಾಮದ ಶಿಕ್ಷಕ ಶಾಂತಕುಮಾರ್ ಹಾಗೂ ಅದೇ ಶಾಲೆಯ ಮುಖ್ಯ ಶಿಕ್ಷಕ ಮಡಯ್ಯ ಸ್ವಾಮಿ ಇಬ್ಬರೂ ಮೊಟ್ಟೆ ಹಣಕ್ಕಾಗಿ ಬೀದಿ ಕಾಳಗ ನಡೆಸಿದ್ದಾರೆ.

ಇದನ್ನೂ ಓದಿ- BBMP ಲಾರಿ ಹರಿದು ಬಾಲಕಿ ಸಾವು: 2 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ಭೈರತಿ ಸುರೇಶ್

ಮರ್ಜಾಪೂರ್ ಗ್ರಾಮದ ಶಿಕ್ಷಕ  ಶಾಂತಕುಮಾರ್  ಶಾಲಾ  ಮಕ್ಕಳಿಗಾಗಿ (School Students) ಮೊಟ್ಟೆ ತಂದಿದ್ದಾರೆ. ನಂತರ ಮೊಟ್ಟೆ ಹಣ ನೀಡುವಂತೆ ಮುಖ್ಯ ಗುರುಗಳ ಬಳಿ ಕೇಳಿದ್ದಾರೆ. ಈ ವೇಳೆ ಮೊಟ್ಟೆ ಮುಟ್ಟೊದಿಲ್ಲ ಎಂದು ಮುಖ್ಯ ಶಿಕ್ಷಕ ಮಡಯ್ಯಸ್ವಾಮಿ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರು ಶಿಕ್ಷಕರ ನಡುವ ವಾಗ್ವಾದ ನಡೆದಿದ್ದು ಇಬ್ಬರೂ ಬಡಿದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ- HD Kumaraswamy : ಕಸದ ಲಾರಿಗೆ ಬಾಲಕಿ ಬಲಿ : ಬಿಬಿಎಂಪಿ ವಿರುದ್ಧ ಕಿಡಿಕಾರಿದ ಹೆಚ್'ಡಿಕೆ

ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಬೇಕಿದ್ದ ಶಿಕ್ಷಕರೇ ಬೀದಿಗಿಳಿದು ಈ ರೀತಿ ಕಚ್ಚಾಡಿಕೊಂಡಿರುವ ದೃಶ್ಯವನ್ನು ಅಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಶಿಕ್ಷಕರಿಬ್ಬರ ಜಗಳವನ್ನು ಈ ವಿಡಿಯೋದಲ್ಲಿ ನೋಡಿ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News