ಮಧ್ಯರಾತ್ರಿವರೆಗೂ ಮೆಟ್ರೋ ಅವಧಿ ವಿಸ್ತರಣೆ : ಬಿಎಂಆರ್ ಸಿಎಲ್ ಆದೇಶ

ಏಪ್ರಿಲ್ 15, ಮೇ 4, 12 ಹಾಗೂ 18 ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ಈ ಸಮಯದಲ್ಲಿ ಮೆಟ್ರೋ ಕೂಡಾ ಮಧ್ಯರಾತ್ರಿವರೆಗೆ ಸಂಚಾರ ನಡೆಸಲಿವೆ.   

Written by - Ranjitha R K | Last Updated : Apr 12, 2024, 02:01 PM IST
  • ಐಪಿಎಲ್ ಪ್ರಿಯರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ನೀಡಿದೆ
  • ಮೆಟ್ರೋ ಅವಧಿ ವಿಸ್ತರಣೆ ಮಾಡಿ ಬಿಎಂಆರ್ ಸಿಎಲ್ ಆದೇಶ
  • ಐಪಿಎಲ್ ಮ್ಯಾಚ್ ವೇಳೆ ಮೆಟ್ರೋ ಸಂಚಾರದ ಅವಧಿಯನ್ನು ಮಧ್ಯರಾತ್ರಿವರೆಗೂ ವಿಸ್ತರಣೆ
ಮಧ್ಯರಾತ್ರಿವರೆಗೂ ಮೆಟ್ರೋ ಅವಧಿ ವಿಸ್ತರಣೆ : ಬಿಎಂಆರ್ ಸಿಎಲ್ ಆದೇಶ title=

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ಹಿನ್ನೆಲೆಯಲ್ಲಿ ಮೆಟ್ರೋ ಅವಧಿ ವಿಸ್ತರಣೆ ಮಾಡಿ ಬಿಎಂಆರ್ ಸಿಎಲ್ ಆದೇಶ ಹೊರಡಿಸಿದೆ. ಈ ಮೂಲಕ ಐಪಿಎಲ್ ಮ್ಯಾಚ್  ವೇಳೆ ಮೆಟ್ರೋ ಸಂಚಾರದ ಅವಧಿಯನ್ನು  ಮಧ್ಯರಾತ್ರಿವರೆಗೂ ವಿಸ್ತರಿಸಿದೆ. ಏಪ್ರಿಲ್ 15, ಮೇ 4, 12 ಹಾಗೂ 18 ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ಈ ಸಮಯದಲ್ಲಿ ಮೆಟ್ರೋ ಕೂಡಾ ಮಧ್ಯರಾತ್ರಿವರೆಗೆ ಸಂಚಾರ ನಡೆಸಲಿವೆ. 

ಐಪಿಎಲ್ ಪ್ರಿಯರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯುವ ವೇಳೆ ಮಧ್ಯರಾತ್ರಿ 11.30 ರವರೆಗೆ ಮೆಟ್ರೋ ಸೇವೆ  ವಿಸ್ತರಿಸಲು ನಿರ್ಧರಿಸಿದೆ. ಜೊತೆಗೆ ಮೆಟ್ರೋ ನಿಲ್ದಾಣಗಳಲ್ಲಿ ರಿಟರ್ನ್ ಪೇಪರ್ ಟಿಕೆಟ್ ವಿತರಣೆ ಮಾಡಲಿದೆ. ಪಂದ್ಯದ ವೇಳೆ ಮಧ್ಯಾಹ್ನ 2 ಗಂಟೆಯಿಂದ ಎಲ್ಲಾ ನಿಲ್ದಾಣಗಳಲ್ಲಿ 50 ರುಪಾಯಿ ಪೇಪರ್ ಟಿಕೆಟ್ ಲಭ್ಯವಾಗಲಿದೆ. 

ಇದನ್ನೂ ಓದಿ : ಇಂದು, ನಾಳೆ ಮೈಸೂರು, ಚಾಮರಾಜನಗರದಲ್ಲಿ ಸಿಎಂ ಪ್ರಚಾರ

ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್ ಗೆ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಪಡೆದು ಎಲ್ಲಾ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಗಿದೆ.ಈ ಟಿಕೆಟ್ ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. QR ಕೋಡ್ ಟಿಕೆಟ್‌ಗಳು, ಸ್ಮಾರ್ಟ್  ಕಾರ್ಡ್ ಗಳು ಮತ್ತು NCMC ಕಾರ್ಡ್‌ಗಳನ್ನು ಸಹ ಬಳಸಬಹುದು.

ವಾಟ್ಸ್ ಆಪ್,ನಮ್ಮ ಮೆಟ್ರೋ ಆ್ಯಪ್,ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. 

ಇದನ್ನೂ ಓದಿ : ತಲೆ ಮೇಲೆ ಕಾಂಗ್ರೆಸ್ ಪಕ್ಷದ ಚಿನ್ಹೆ,ಎದೆ ಮೇಲೆ ಖರ್ಗೆ ಟ್ಯಾಟೂ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News