ಬಳ್ಳಾರಿಯಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಆಕೃತಿ ಪ್ರತಿರೂಪಗಳ ಪ್ರದರ್ಶನ..!

ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ ಹಾಗೂ ಮಹಿಳೆಯ ಆಕೃತಿಗಳ ಪ್ರತಿರೂಪಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ ಎಂದು ವಸ್ತು ಸಂಗ್ರಹಾಲಯ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

Written by - Manjunath N | Last Updated : Oct 10, 2024, 05:38 PM IST
  • ಹನ್ನೆರಡು ಲಕ್ಷ ವರ್ಷದ ಹಿಂದಿನ ಶಿಲಾ ಉಪಕರಣಗಳನ್ನು ಈ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ.
  • ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಾಂಪುರ ಎಂಬ ಊರಿನಲ್ಲಿ ಉತ್ಖನನ ಮಾಡಿ ಸಂಗ್ರಹಿಸಿದ್ದರು.
  • ರವಿ ಕೋರಿಶೆಟ್ಟರ್ ಅವರು ವಿದ್ಯಾರ್ಥಿಯಾಗಿ ಈ ಉತ್ಖನನದಲ್ಲಿ ಪಾಲ್ಗೊಂಡಿದ್ದರು.
ಬಳ್ಳಾರಿಯಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಆಕೃತಿ ಪ್ರತಿರೂಪಗಳ ಪ್ರದರ್ಶನ..! title=

ಬಳ್ಳಾರಿ: ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ ಹಾಗೂ ಮಹಿಳೆಯ ಆಕೃತಿಗಳ ಪ್ರತಿರೂಪಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ ಎಂದು ವಸ್ತು ಸಂಗ್ರಹಾಲಯ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಈಗಾಗಲೇ ವಸ್ತು ಸಂಗ್ರಹಾಲಯದಲ್ಲಿರುವ ಪ್ರಾಗೈತಿಹಾಸದ ಪಳಿಯುಳಿಕೆಗಳ  ಅಪಾರ ಸಂಗ್ರಹದ ಜೊತೆಗೆ ಐರೋಪ್ಯ ದೇಶಗಳಲ್ಲಿ ಒಂದಾದ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ  ಹಾಗೂ ಮಹಿಳೆಯ ಆಕೃತಿಗಳ  ಪ್ರತಿರೂಪಗಳು  ಈ ವಸ್ತು ಸಂಗ್ರಹಾಲಯ ಹೊಂದಿದ್ದು ಪ್ರದರ್ಶನಕ್ಕೆ ಇಡಲಾಗಿದೆ. ಸಿಂಹ ಮುಖದ ಮನುಷ್ಯ ಸ್ಟಾಡೆಲ್ಜಿಲ್ ಊರಿನ ಒಂದು ಗುಹೆಯಲ್ಲಿ ಸಿಕ್ಕಿದೆ. ಇದು ಸುಮಾರು 40,000 ವರ್ಷದ ಹಿಂದಿನದೆಂದು ಅಂದಾಜಿಸಲಾಗಿದೆ. ವೀನಸ್ (ಮಾತೃದೇವತೆ) ಡಾಲ್ನಿ ವೇಸ್ಟೊನೈಸ್ ಎಂಬ ಪ್ರದೇಶದಲ್ಲಿ ಸುಮಾರು 31,000 ವರ್ಷಗಳ ಹಿಂದೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.ಇದರಿಂದ ಇಡೀ ಭಾರತದಲ್ಲಿಯೇ ಪ್ರಾಕ್ತನ ಇತಿಹಾಸಕ್ಕೆ ಮೀಸಲಿಟ್ಟಿರುವ ಏಕೈಕ ವಸ್ತು ಸಂಗ್ರಹಾಲಯವೆಂದು ಖ್ಯಾತಿ ಹೊಂದಿದ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ತನ್ನ ಮುಡಿಗೆ ಮತ್ತೊಂದು ಗರಿ ಏರಿಸಿಕೊಂಡಂತಾಗಿದೆ.

ಇದನ್ನೂ ಓದಿ: ಶೂಟಿಂಗ್‌ಗೆ ತೆರಳುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಕಾರು ಅಪಘಾತ..! ಸಂಪೂರ್ಣ ಜಖಂ.. ನಟಿಯ ಆರೋಗ್ಯ ಪರಿಸ್ಥಿತಿ..?

ಕೆಲ ತಿಂಗಳ ಹಿಂದೆ ಆಫ್ರಿಕಾ ದೇಶದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಉಪಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟ  ಬೆನ್ನಲ್ಲೇ ಮತ್ತಷ್ಟು ಆಫ್ರಿಕಾದ ಓಲ್ಡಾನ್ ಹಾಗೂ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸಿಕ್ಕ ವಿವಿಧ ರೀತಿಯ ಕಲ್ಲಿನ ಉಪಕರಣದ 3 ಡಿ ನಮೂನೆಗಳು ಕೂಡ ಸಂಗ್ರಹಿಸಲಾಗಿದೆ. ಈ ಆಕೃತಿಗಳು ಹಾಗೂ ಉಪಕರಣಗಳನ್ನು ನ್ಯೂಯಾರ್ಕಿನ ನಮಿತಾ ಸುಗಂಧಿ ಹಾಗೂ ರವಿ ಕೋರಿಶೆಟ್ಟರ್ ಅವರು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪುಣೆಯ ಡೆಕ್ಕನ್ ಕಾಲೇಜಿನವರು ಹುಣಸಿಗಿಯಲ್ಲಿ ಸಿಕ್ಕ ಹನ್ನೆರಡು ಲಕ್ಷ ವರ್ಷದ ಹಿಂದಿನ ಶಿಲಾ ಉಪಕರಣಗಳನ್ನು ಈ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಈ ಉಪಕರಣಗಳನ್ನು ಡಾ.ಕೆ.ಪದ್ದಯ್ಯ, ಹಿರಿಯ ಸಂಶೋಧಕರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಾಂಪುರ ಎಂಬ ಊರಿನಲ್ಲಿ ಉತ್ಖನನ ಮಾಡಿ ಸಂಗ್ರಹಿಸಿದ್ದರು. ರವಿ ಕೋರಿಶೆಟ್ಟರ್ ಅವರು ವಿದ್ಯಾರ್ಥಿಯಾಗಿ ಈ ಉತ್ಖನನದಲ್ಲಿ ಪಾಲ್ಗೊಂಡಿದ್ದರು.ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ದೊರೆತ ಹದಿನೈದು ಮಾನವನ ತಲೆಬುರುಡೆಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರಾಕ್ತನ ತಜ್ಞರಾದ ಪ್ರೊ.ರವಿ ಕೋರಿಶೆಟ್ಟರ್ ಅವರ ನೇತೃತ್ವದಲ್ಲಿ  ಸ್ಥಾಪಿಸಲಾದ ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಅಪರೂಪದ ಸಂಗ್ರಹವು ಇತಿಹಾಸ ಹಾಗೂ ಪ್ರಾಕ್ತನ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಹಕಾರಿಯಾಗಿದೆ ಮತ್ತು ಶಾಲಾ ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಒಂದು ಆಕರ್ಷಣೆಯಾಗಿದೆ ಎಂದರು.

ಹೊಸದಾಗಿ ಸೇರ್ಪಡೆಯಾದ ಆಕೃತಿಗಳು ಹಾಗೂ ಶೀಲಾ ಉಪಕರಣಗಳ ಮಾದರಿಗಳಿಂದ ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಸಂಗ್ರಹವನ್ನು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಇಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.  ಈಗಾಗಲೇ  ಏಳು ಜನ ದೇಶ ಹಾಗೂ ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News