ಪಂಚರಾಜ್ಯಗಳ ಚುನಾವಣೆ: ಪಂಜಾಬ್ ನಲ್ಲೂ ಸಿದ್ದು-ಕರ್ನಾಟಕದಲ್ಲೂ ಸಿದ್ದು; ಕಾಂಗ್ರೆಸ್ ನಾಶ!: ಶೆಟ್ಟರ್

ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್ ನಲ್ಲಿ ಅಭೂತಪೂರ್ವ ಫಲಿತಾಂಶ ಬಂದಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

Written by - Prashobh Devanahalli | Edited by - Ranjitha R K | Last Updated : Mar 10, 2022, 12:57 PM IST
  • ಪಂಚರಾಜ್ಯ ಚುನಾವಣೆ ಫಲಿತಾಂಶ
  • ಬಹುತೇಕ ಕಡೆ ಬಿಜೆಪಿ ಮುನ್ನಡೆ
  • ಮತದಾರರಿಗೆ ಅಭಿಉನನ್ದನೆ ಸಲ್ಲಿಸಿದ ಶೆಟ್ಟರ್
ಪಂಚರಾಜ್ಯಗಳ ಚುನಾವಣೆ: ಪಂಜಾಬ್ ನಲ್ಲೂ ಸಿದ್ದು-ಕರ್ನಾಟಕದಲ್ಲೂ ಸಿದ್ದು; ಕಾಂಗ್ರೆಸ್ ನಾಶ!: ಶೆಟ್ಟರ್ title=
ಪಂಚರಾಜ್ಯ ಚುನಾವಣೆ ಫಲಿತಾಂಶ

ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ (Five satet election result) ಪ್ರಾಥಮಿಕ ಹಂತದಲ್ಲಿ ಬಹುತೇಕ ಕಡೆ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪಂಜಾಬ್ ನಲ್ಲಿ ಸಿದ್ದು ಹಾಗೂ ರಾಜ್ಯದಲ್ಲಿ ಸಿದ್ದು ಸೇರಿ ಕಾಂಗ್ರೆಸ್ (COngress) ನಾಶ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  (Jagadeesh Shetter) ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್ ನಲ್ಲಿ (Uttarakhand election) ಅಭೂತಪೂರ್ವ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ. ಇದೆ ವೇಳೆ ಅವರು 4 ರಾಜ್ಯಗಳ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಫಲಿತಾಂಶ ಮುಂದಿನ ಲೋಕ ಸಭಾ ಚುನಾವಣೆಗೆ, ಭಾರತದ ಭವಿಷ್ಯಕ್ಕೆ ಪೂರಕವಾಗಲಿದೆ ಎಂಡು ಶೆಟ್ಟರ್ ಹೇಳಿದ್ದಾರೆ. 

ಇದನ್ನೂ ಓದಿ : Five State Election Results: ಪಂಚರಾಜ್ಯಗಳ ಫಲಿತಾಂಶದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ರಾಜ್ಯದಲ್ಲಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ:
ಸಂಘಟಿತ ಪ್ರಯತ್ನವನ್ನ ಇಲ್ಲಿ ನೋಡುತ್ತಿದ್ದೇವೆ. ಬೂತ್ ಮಟ್ಟದ ಕಾರ್ಯಕರ್ತರ ಪಡೆ ಇದೆ. ಕಾಂಗ್ರೆಸ್ ಪಾದಯಾತ್ರೆ (Congress Padayatre) ಹೈಡ್ರಾಮವನ್ನು ಯಾರೂ ನಂಬಲ್ಲ. ಸಿದ್ದರಾಮಯ್ಯ , ಶಿವಕುಮಾರ್ ರಿಂದ (DK Shivakumar) ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ. ಪಂಜಾಬ್ ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲಿ ಒಬ್ಬ ಸಿದ್ದು, ಪಂಜಾಬ್ ಸಿದ್ದುವಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ ಎಂಡು ಹೇಳಿದ್ದಾರೆ. 

ಸಿದ್ದರಾಮಯ್ಯ, ಕುಮಾರಸ್ವಾಮಿ ಫೈಟ್ ಬಗ್ಗೆ ಕುಮಾರಸ್ವಾಮಿ ಉತ್ತರ ಕೊಡ್ತಾರೆ. 100 ವರ್ಷಗಳ ಕಾಂಗ್ರೆಸ್ ಗೆ ನಾಯಕತ್ವ ಕೊರತೆ ಎದುರಾಗಿದೆ. ಒಂದೇ ಕುಟುಂಬದ ಮೇಲೆ ಅವಲಂಬಿತ ಪಕ್ಷ ನಾಶವಾಗಲಿದೆ. BJP ಒಂದೇ ಕುಟುಂಬದಕ್ಕೇ ಸೀಮಿತವಾದ ಪಕ್ಷ ಅಲ್ಲ. ಪ್ರತಿಯೊಂದು ರಾಜ್ಯವೂ ಕಾಂಗ್ರೆಸ್ ಮುಕ್ತ ಆಗಲಿದೆ. ಕರ್ನಾಟಕ ಕೂಡಾ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. 

ಇದನ್ನೂ ಓದಿ : ಈಶಾನ್ಯ ರಾಜ್ಯದ ಬಡ ಮಹಿಳೆಯರೇ ಇವರ ಟಾರ್ಗೆಟ್.. ಮಾಂಸ ದಂಧೆ ನಡೆಸುತ್ತಿದ್ದ ಮೂವರ ಅರೆಸ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News