ಗಾಯದ ಮೇಲೆ ಬರೆ: ಜುಲೈ 1ರಿಂದ ಮತ್ತೆ ವಿದ್ಯುತ್‌ ಬೆಲೆ ಏರಿಕೆ!

ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ. 

Written by - Bhavishya Shetty | Last Updated : Jun 28, 2022, 10:47 AM IST
  • ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಏರಿಕೆ
  • 100 ಯೂನಿಟ್‌ಗಿಂದ ಹೆಚ್ಚು ವಿದ್ಯುತ್‌ ಬಳಸಿದರೆ ಹೆಚ್ಚುವರಿ ಶುಲ್ಕ
  • ದರ ಏರಿಕೆ ಮಾಡಲು ಎಸ್ಕಾ ತೀರ್ಮಾನಿಸಿದೆ
ಗಾಯದ ಮೇಲೆ ಬರೆ: ಜುಲೈ 1ರಿಂದ ಮತ್ತೆ ವಿದ್ಯುತ್‌ ಬೆಲೆ ಏರಿಕೆ!  title=
ESCOM

ಜುಲೈ 1ರಿಂದ ವಿದ್ಯುತ್‌ ದರ ಏರಿಕೆ ಮಾಡಲು ಎಸ್ಕಾಂ ನಿರ್ಧರಿಸಿದ್ದು, ದೇಶದಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಬರೆ ಎಳೆದಂತಾಗಿದೆ. ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಏರಿಕೆ ಮಾಡಲು ಎಸ್ಕಾ ತೀರ್ಮಾನಿಸಿದೆ. ‌

ಇದನ್ನೂ ಓದಿ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆ : IMD ಎಚ್ಚರಿಕೆ

ಪ್ರತಿ ತಿಂಗಳು 100 ಯೂನಿಟ್‌ ಅಥವಾ ಅದಕ್ಕಿಂತ ಹೆಚ್ಚಾಗಿ ವಿದ್ಯುತ್‌ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 19ರಿಂದ 31ರವರೆಗೆ ಪಾವತಿಸಬೇಕಾಗುತ್ತದೆ. ಇನ್ನು ವಿದ್ಯುತ್‌ ಬಿಲ್‌ ಹೆಚ್ಚಳವಾಗಲು ಕಾರಣವೂ ಇದೆ. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣಕ್ಕೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ. 

ಬೆಸ್ಕಾಂ- ರೂ. 55.28
ಮೆಸ್ಕಾಂ- ರೂ. 38.98
ಸೆಸ್ಕಾಂ- ರೂ. 40.47
ಹೆಸ್ಕಾಂ- ರೂ. 49.54
ಗೆಸ್ಕಾಂ- ರೂ. 39.36 

ಇದನ್ನೂ ಓದಿ: Vi ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ

ಕೋವಿಡ್‌ನಿಂದಾಗಿ ಸಮಸ್ಯೆಗಳು ಉಂಟಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಕಾಂ ಕೋರಿದಷ್ಟು ದರ ಏರಿಕೆ ಮಾಡದೆ, ಕೊಂಚ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News