ಇಡಿ ಇಕ್ಕಳಕ್ಕೆ ಸಿಲುಕಿದ ಮಾಜಿ ಸಚಿವ ನಾಗೇಂದ್ರ : ಪ್ರಶ್ನೆ ಮೇಲೆ ಪ್ರಶ್ನೆ.. ವಿಲ ವಿಲ ಅಂತಾ ಒದ್ದಾಡಿದ ಭ್ರಷ್ಟ ಕುಳ

ಜುಲೈ 10 ರಂದು ವಾಲ್ಮೀಕಿ ನಿಗಹ ಹಗರಣ ಸಂಬಂಧ ಬಳ್ಳಾರಿ, ರಾಯಚೂರು, ಬೆಂಗಳೂರು ಸೇರಿದಂತೆ ಒಟ್ಟು 18 ಕಡೆ ಇಡಿ ದಾಳಿ ನಡೆಸಿತ್ತು.. ಅದ್ರಲ್ಲಿ ನ್ಯೂ ಬಿಇಎಲ್ ನಲ್ಲಿರುವ ನಾಗೇಂದ್ರ ಫ್ಲಾಟ್ ಕೂಡ ಒಳಗೊಂಡಿತ್ತು.. ದಾಳಿ ವೇಳೆ ಫ್ಲಾಟ್ ನಲ್ಲಿಯೇ ಇದ್ದ ನಾಗೇಂದ್ರ ಇಡಿ ಬೆವರಿಳಿಸಿತ್ತು.. 

Written by - Krishna N K | Last Updated : Jul 12, 2024, 08:27 PM IST
    • ಎರಡು ಹಗಲು ಎರಡು ರಾತ್ರಿ ನಿರಂತರ ಶೋಧ.
    • ಮನೆಯ ಮೂಲೆ ಮೂಲೆಯಲ್ಲು ಹುಡುಕಾಟ..
    • ಇಂಚಿಂಚು ದಾಖಲೆಗಳ ಪರಿಶೀಲನೆ..
ಇಡಿ ಇಕ್ಕಳಕ್ಕೆ ಸಿಲುಕಿದ ಮಾಜಿ ಸಚಿವ ನಾಗೇಂದ್ರ : ಪ್ರಶ್ನೆ ಮೇಲೆ ಪ್ರಶ್ನೆ.. ವಿಲ ವಿಲ ಅಂತಾ ಒದ್ದಾಡಿದ ಭ್ರಷ್ಟ ಕುಳ title=
b nagendra

ಬೆಂಗಳೂರು : ನಾಗೇಂದ್ರ ಮನೆ ಮೇಲಿನ ದಾಳಿಯನ್ನ ಇಡಿ ಅಧಿಕಾರಿಗಳು ನಿನ್ನೆ ರಾತ್ರಿಯೇ ಮುಕ್ತಾಯಗೊಳಿಸಿದ್ರು. ನಾಗೇಂದ್ರ ಕೂಡ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇವತ್ತು ಬೆಳ್ಳಂಬೆಳಗ್ಗೆ ಮಾಜಿ ಸಚಿವನಿಗೆ ಜಾರಿ ನಿರ್ದೇಶನಾಲಯ ಮತ್ತೆ ಶಾಕ್ ನೀಡಿದೆ. ಫ್ಲಾಟ್ ನಲ್ಲಿದ್ದ ನಾಗೇಂದ್ರನನ್ನ ಇಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸ್ತಿದ್ದಾತೆ. ಇಡಿ ಇಕ್ಕಳದಲ್ಲಿ ಸಿಕ್ಕಾಕ್ಕೊಂಡಿರೊ ಭ್ರಷ್ಟ ಕುಳ ವಿಲ ವಿಲ ಅಂತಾ ಒದ್ದಾಡ್ತಿದ್ದಾರೆ..

ಎರಡು ಹಗಲು ಎರಡು ರಾತ್ರಿ ನಿರಂತರ ಶೋಧ.. ಮನೆಯ ಮೂಲೆ ಮೂಲೆಯಲ್ಲು ಹುಡುಕಾಟ.. ಇಂಚಿಂಚು ದಾಖಲೆಗಳ ಪರಿಶೀಲನೆ.. ವಾಲ್ಮೀಕಿ ನಿಗದಲ್ಲಿ 94 ಕೋಟಿ ಹಣ ನುಂಗಿ ನೀರು ಕುಡಿದಿದ್ದ ಭ್ರಷ್ಟ ಕುಳಗಳಿಗೆ ಇಡಿ ಶಾಕ್ ನೀಡಿದೆ.‌ ಎಸ್ಐಟಿ ಕೈ ನಲ್ಲಿ ಬಚಾವಾಗಿದ್ದವರು ಇಡಿ ಇಕ್ಕಳದಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ.. ಮಾಜಿ ಸಚಿವ ನಾಗೇಂದ್ರನನ್ನ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ಕಚೇರಿಗೆ ಕರೆತಂದು ಪ್ರಶ್ನೆಗಳ ಸುರಿಮಳೆಗೈದಿದೆ..

ಇದನ್ನೂ ಓದಿ:ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.28 ರಷ್ಟು ನೀರಿನ ಕೊರತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಹೌದು.. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ನೀಡಿದ್ದ 187 ಕೋಟಿ ಹಣದಲ್ಲಿ 94 ಕೋಟಿ ಹಣ ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೊಂಡಿತ್ತು.. ಅಧಿಕಾರಿ ಚಂದ್ರಶೇಖರ್ ಸಾವಿನಿಂದ ಹೊರಬಂದ ಈ ಅವ್ಯವಹಾರದಲ್ಲಿ ಮಾಜಿ ಸಚಿವ ನಾಗೇಂದ್ರ ತಲೆದಂಡ ಕೂಡ ಆಗಿತ್ತು.. ಈ ಭ್ರಷ್ಟಾಚಾರದಲ್ಲಿ ವಾಲ್ಮೀಕಿ ನಿಗದ ಅಧಿಕಾರಿ ಸಿಬ್ಬಂದಿಗಳು, ಯೂನಿಯನ್ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಮಧ್ಯವರ್ತಿಗಳ ಪಾತ್ರ ಕೂಡ ಇತ್ತು..ಹಾಗಾಗಿ ಸರ್ಕಾರ ಎಸ್ಐಟಿ ರಚೆನೆ ಮಾಡಿತ್ತು.. ಒಂದು ಕಡೆ ಎಸ್ಐಟಿ ಪ್ರಕರಣದ ತನಿಖೆ ನಡೆಸ್ತಿದ್ದಂತೆ ಸಿಬಿಐ ಕೂಡ ಫೀಲ್ಡಿಗೆ ಇಳಿದಿತ್ತು... ಇಷ್ಟಾಗ್ತಿದ್ದಂತೆ ಇಡಿ ಎಂಟ್ರಿ ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ..

ಜುಲೈ 10 ರಂದು ವಾಲ್ಮೀಕಿ ನಿಗಹ ಹಗರಣ ಸಂಬಂಧ ಬಳ್ಳಾರಿ, ರಾಯಚೂರು, ಬೆಂಗಳೂರು ಸೇರಿದಂತೆ ಒಟ್ಟು 18 ಕಡೆ ಇಡಿ ದಾಳಿ ನಡೆಸಿತ್ತು.. ಅದ್ರಲ್ಲಿ ನ್ಯೂ ಬಿಇಎಲ್ ನಲ್ಲಿರುವ ನಾಗೇಂದ್ರ ಫ್ಲಾಟ್ ಕೂಡ ಒಳಗೊಂಡಿತ್ತು.. ದಾಳಿ ವೇಳೆ ಫ್ಲಾಟ್ ನಲ್ಲಿಯೇ ಇದ್ದ ನಾಗೇಂದ್ರ ಇಡಿ ಬೆವರಿಳಿಸಿತ್ತು.. ನಿನ್ನೆ ರಾತ್ರಿ ದಾಳಿ ಮುಕ್ತಾಯ ಗೊಳಿಸಿ ಇಡಿ ಅಧಿಕಾರಿಗಳು ತೆರಳಿದ್ರು‌‌. ಈ ಮಧ್ಯೆ ಇವತ್ತು ಮುಂಜಾನೆ ನಾಲ್ಕು ಗಂಟೆಗೆ ನಾಗೇಂದ್ರ ನಿವಾಸಕ್ಕೆ ಮತ್ತೆ ಬಂದಿದ್ದ ಇಡಿ ತಂಡ 8.30 ಸುಮಾರಿಗೆ ವಶಕ್ಕೆ ಪಡೆದು ಶಾಂತಿನಗರದ ಇಡಿ ಕಚೇರಿಗೆ ಕರೆತಂದಿದ್ದಾರೆ‌... ಈ ವೇಳೆ ನಂಗೇನು ಗೊತ್ತಿಲ್ಲ ಮನೆಯಿಂದ ಕರೆತಂದಿದ್ದಾರೆ ಅಂತಷ್ಟೇ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ರು.

ಇದನ್ನೂ ಓದಿ:ಕರ್ನಾಟಕದ ನೀರಿನ ವಿಚಾರದಲ್ಲಿ ಎಲ್ಲ ಪಕ್ಷದವರೂ ಒಟ್ಟಾಗಿದ್ದೇವೆ-ಸಿಎಂ ಸಿದ್ದರಾಮಯ್ಯ

ಇತ್ತ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದುಕೊಳ್ತಿದ್ದಂತೆ.. ಬಸವನಗೌಡ ದದ್ದಲ್ ರನ್ನು ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.. ಅದ್ರಂತೆ ಇಡಿ ದದ್ದಲ್ ನಿವಾಸಕ್ಕೆ ತೆರಳಿದ್ರು.. ಈ ವೇಳೆ ದದ್ದಲ್‌ ಮನೆಯಲ್ಲಿ ಇರಲಿಲ್ಲ.. 10.30 ಆಗ್ತಿದ್ದಂತೆ ಸಿಐಡಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿಬಿಟ್ಟಿದ್ರು.. ಸದ್ಯ ಪ್ರಕರಣದ ತನಿಖೆ ನಡೆಸ್ತಿರುವ ಇಡಿ.. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸ್ತಿದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News