ರಸ್ತೆ ಅಪಘಾತ : ಡಿವೈಎಸ್ಪಿ ಬಾಳೇಗೌಡ ಸೇರಿ ಮೂವರ ದುರ್ಮರಣ

ಭೀಕರ ರಸ್ತೆ ಅಪಘಾತದಲ್ಲಿ ಶೂಟೌಟ್ ಸ್ಪೆಷಲಿಸ್ಟ್ ಡಿವೈಎಸ್ಪಿ ಬಾಳೇಗೌಡ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Last Updated : May 10, 2018, 12:37 PM IST
ರಸ್ತೆ ಅಪಘಾತ : ಡಿವೈಎಸ್ಪಿ ಬಾಳೇಗೌಡ ಸೇರಿ ಮೂವರ ದುರ್ಮರಣ title=

ಬಾಗಲಕೋಟೆ: ಇಲ್ಲಿನ ಕೂಡಲ ಸಂಗಮ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶೂಟೌಟ್ ಸ್ಪೆಷಲಿಸ್ಟ್ ಡಿವೈಎಸ್ಪಿ ಬಾಳೇಗೌಡ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. 

ಚುನಾವಣಾ ಕರ್ತವ್ಯದ ಮೇಲೆ ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಲಾರಿ ಮತ್ತು ಪೋಲಿಸ್ ಜೀಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪೋಲಿಸ್ ಜೀಪ್ನಲ್ಲಿದ್ದ ಬೆಂಗಳೂರಿನ ಡಿವೈಎಸ್ಪಿ ಬಾಳೇಗೌಡ(55), ಸಿಪಿಐ ಶಿವಸ್ವಾಮಿ(55), ಪೊಲೀಸ್​ ವಾಹನ ಚಾಲಕ ವೇಣುಗೋಪಾಲ್(25)​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರು, ಕುಣಿಗಲ್‌ನಲ್ಲಿ ವೃತ್ತನೀರಿಕ್ಷಕರಾಗಿ ಕಾರ್ಯ ನಿವರ್ಹಿಸಿದ್ದ ಬಾಳೇಗೌಡ ಅವರಿಗೆ ಇತ್ತೀಚೆಗಷ್ಟೇ ಡಿವೈಎಸ್‌ಪಿ ಆಗಿ ಬಡ್ತಿ ನೀಡಿ ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

Trending News