ಬೆಂಗಳೂರು: ನಾಡಹಬ್ಬ ದಸರಾ ಹಬ್ಬವನ್ನು ವಿವಿಧ ಹೆಸರುಗಳಿಂದ ಆಚರಣೆ ಮಾಡಲಾಗತ್ತೆ. ವಿಜಯದಶಮಿ, ಆಯುಧ ಪೂಜೆ, ಜಂಬೂ ಸವಾರಿ, ಗೊಂಬೆಗಳ ಹಬ್ಬ ಹೀಗೆ ಸಂಭ್ರಮ-ಸಡಗರದಿಂದ ದಸರಾ ಆಚರಿಸಲಾಗುತ್ತದೆ. ಇನ್ನು ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮಾರ್ಕೆಟ್‍ಗೆ ವೆರೈಟಿ ಗೊಂಬೆಗಳು ಕಾಲಿಟ್ಟಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ಥೀಮ್‍ನೋಂದಿಗೆ ಆಲಂಕಾರ ಮಾಡಲು ಜನರು ಮಾರ್ಕೆಟ್‍ಗೆ ಗೊಂಬೆ ಖರೀದಿ ಮಾಡಲು ಸಜ್ಜಾಗಿದ್ದಾರೆ.
ದಸರಾ ಹಬ್ಬವು ಗೊಂಬೆಗಳ ಹಬ್ಬ ಎಂದೇ ಕರೆಸಿಕೊಳ್ಳುತ್ತದೆ. ಇನ್ನು ನವರಾತ್ರಿ ದೇವಿಯ ಹಬ್ಬವಾಗಿರುವುದರಿಂದ ಈ ಹಬ್ಬದಲ್ಲಿ ಮಹಿಳೆಯರೇ ಹೆಚ್ಚು ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಗೊಂಬೆಗಳನ್ನು ಇಡುವವರು ಪ್ರತಿವರ್ಷವೂ ಯಾವುದಾದರೂ ಒಂದು ಥೀಮ್ ಮೇಲೆ ಗೊಂಬೆಗಳನ್ನು ಜೋಡಿಸುತ್ತಾರೆ. ಪಟ್ಟದ ಗೊಂಬೆ ಅತಿ ಪ್ರಮುಖವಾದ ಗೊಂಬೆ, ಇದನ್ನು ಸಾಮಾನ್ಯವಾಗಿ ಮರದಿಂದ ಮಾಡಲಾಗುತ್ತದೆ. ಯಾವುದಾದರೂ ದೇವರ ರೂಪದಲ್ಲಿ ಈ ಗೊಂಬೆಗಳನ್ನು ಇಡಲಾಗುತ್ತದೆ.
ಇದನ್ನೂ ಓದಿ: ಅತ್ತ ದೆಹಲಿಯಲ್ಲಿ ಮೀಟಿಂಗ್.. ಇತ್ತ ರಾಜ್ಯಕ್ಕೆ ಜಲಾತಂಕ..!
ಪಟ್ಟದ ಗೊಂಬೆಗಳಿಗೆ ಉಳಿದ ಗೊಂಬೆಗಳಿಗಿಂತ ಹೆಚ್ಚಿನ ಅಲಂಕಾರ ಮತ್ತು ಪ್ರಾಮುಖ್ಯತೆ ಸಿಗುತ್ತೆ. ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ದರ್ಬಾರ್ ಇದ್ದೇ ಇರುತ್ತದೆ. ಗೊಂಬೆಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಗಳು ನಡೆಯುತ್ತಿವೆ. ಹೀಗೆ ದಸರಾ ಅಂಬಾರಿ.. ಅಷ್ಟ ಲಕ್ಷ್ಮಿಯರು.. ನವ ದುರ್ಗೆಯರು, ಒಂದು ಕಡೆ ಶ್ರೀನಿವಾಸ ಕಲ್ಯಾಣ.. ಮತ್ತೊಂದು ಕಡೆ ಕೃಷ್ಣನ ಜೀವನ ಕಥೆ ಹೇಳುವ ಗೊಂಬೆಗಳ ಸಾಲು ಸಾಲಗಿ ಕೂರಿಸಿ 9 ದಿನಗಳ ಕಾಲ ಗೊಂಬೆಗಳನ್ನು ಪೂಜಿಸಲಾಗುತ್ತದೆ.
ದಸರಾ ಹಬ್ಬವೆಂದರೆ ಗೊಂಬೆಗಳ ಹಬ್ಬ. ಪ್ರತಿ ವರ್ಷವೂ ಎಲ್ಲರೂ ತಮ್ಮ ಮನೆಯಲ್ಲಿ ವಿವಿಧ ಥೀಮ್‍ನಲ್ಲಿ ಗೊಂಬೆಗಳನ್ನು ಅಲಂಕಾರ ಮಾಡುತ್ತಾರೆ. ಈ ಬಾರಿಯೂ ಡಿಫ್ರೆಂಟ್ ಡಿಫ್ರೆಂಟ್ ಗೊಂಬೆಗಳು ಮಾರ್ಕೆಟ್‍ಗೆ ಎಂಟ್ರಿ ಕೊಟ್ಟಿದ್ದು, ಮಹಿಳೆಯರ ಕಣ್ಮನ ಸೆಳೆಯಲು ಕೈ ಬಿಸಿ ಕರೆಯುತ್ತಿವೆ. ಈ ಬಾರಿ ಮಾರುಕಟ್ಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕ್ರಿಕೆಟ್ ಟೀಂ, ಪೊಲೀಸ್, ಶೃಂಗೇರಿ ಶಾರದಾಂಬೆ ವಿಗ್ರಹ, ಕುಂಭ ಕರ್ಣ ಹೀಗೆ ಹಲವಾರು ಗೊಂಬೆಗಳು ಹೊರಹೊಮ್ಮಿ ಬಂದಿವೆ.
ಇದನ್ನೂ ಓದಿ: ಗುಮ್ಮಟ ನಗರಿ ವಿಜಯಪುರದ ಪೋಲಿಸರು ಭರ್ಜರಿ ಕಾರ್ಯಾಚರಣೆ
ಗೊಂಬೆಗಳ ಆಲಂಕಾರಕ್ಕೂ ಅದರದ್ದೇಯಾದ ಪದ್ಧತಿ ಇದೆ. ಹೆಣ್ಣು ಬೊಂಬೆಗಳಿಗೆ ಉಡಿಸುವ ಸೀರೆ, ತೊಡಿಸುವ ಆಭರಣಗಳನ್ನ ನೋಡಲು ಸುಂದರವಾಗಿರುತ್ತದೆ. ಜಂಬೂ ಸವಾರಿಯ ದೃಶ್ಯ, ಹಳ್ಳಿ ದೃಶ್ಯ, ಮದುವೆ ಮತ್ತು ಹಲವು ಬಗೆಯ ಗೊಂಬೆಗಳನ್ನು ಕೂರಿಸಲಾಗುತ್ತದೆ. ಸುಮಾರು 9 ಸಾಲುಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತದೆ. 9 ದಿನಗಳ ಕಾಲ ಈ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಗೊಂಬೆಗಳ ಪ್ರದರ್ಶನ ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಮಯದಲ್ಲಿ ನಡೆಯುವ ಒಂದು ಭಾಗ. ಒಟ್ನಲ್ಲಿ ಮಾರುಕೆಟ್ಟನಲ್ಲಿ ಈ ಬಾರಿ ಸಹ ವೆರೈಟಿ ದಸರಾ ಗೊಂಬೆಗಳು ಬಂದಿವೆ ಮತ್ತು ಈ ಗೊಂಬೆಗಳಿಗೆ ಸಿಕಾಪಟ್ಟೆ ಬೇಡಿಕೆಯಿದೆ. ಹೀಗೆ ಗೊಂಬೆಗಳನ್ನು ಖರೀದಿಸಿ ದಸರಾ ಹಬ್ಬವನ್ನು ಭರ್ಜರಿಯಿಂದ ಆಚರಿಸಲು ಹೆಣ್ಣುಮಕ್ಕಳು ಸಿದ್ಧರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.