ಬೆಂಗಳೂರು: ಮಕ್ಕಳ ಮೇಲಾಗುವ ದೌರ್ಜನ್ಯ ನಿಯಂತ್ರಣಕ್ಕೆಂದೇ ಪೋಸ್ಕೊ ಕಾಯ್ದೆ ತರಲಾಗಿದೆ. ಆದರೆ ಇದರಡಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿಯುತ್ತಿರುವುದು ಆರೋಪಿಗಳಲ್ಲಿ ಭಯ ಕಡಿಮೆಯಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಜಿಲ್ಲೆಗಳಲ್ಲಿ ಪೋಸ್ಕೊ ಪ್ರಕರಣ ನಿರ್ವಹಿಸುವ ವಿಶೇಷ ಸರಕಾರಿ ಅಭಿಯೋಜಕರೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ(ಆ.27) ಸಭೆ ನಡೆಸಲಾಯಿತು. ಆ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಜಿ. ಪರಮೇಶ್ವರ, ಪೋಸ್ಕೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಚಾಕಚಕ್ಯತೆಯಿಂದ ಇತ್ಯರ್ಥಗೊಳಿಸಲು ಬೇಕಾದ ತಾಂತ್ರಿಕ ಸಲಹೆಗಳನ್ನು ನೀಡಲು ಎಲ್ಲಾ ಜಿಲ್ಲಾ ವಕೀಲರಿಗೆ ಹಿರಿಯ ವಕೀಲರಿಂದ ತರಬೇತಿ ಕೊಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
I suggested our district prosecutors meet with and learn from senior judges and lawyers on POSCO so that they can fight these cases effectively and ensure speedy delivery of justice.
— Dr. G Parameshwara (@DrParameshwara) August 27, 2018
ಪೋಸ್ಕೊ ಕಾಯಿದೆ ಬಗೆಹರಿಸುವಲ್ಲಿ ಜಿಲ್ಲಾ ವಕೀಲರು ಎಡವುತ್ತಿದ್ದಾರೆ. ಹೀಗಾಗಿ ಹಿರಿಯ ವಕೀಲರು ಹಾಗೂ ನ್ಯಾಯಾಧೀಶರ ಸಮ್ಮುಖದಲ್ಲಿ ತರಬೇತಿ ಕೊಡಿಸುವುದು ಸೂಕ್ತ ಎಂದರು.
Cases of crimes against children should be disposed quickly to bring about deterrence. I met with our district prosecutors, police officials & home department officials to emphasize the need to fight increasing crimes against children. pic.twitter.com/KRERPYElHa
— Dr. G Parameshwara (@DrParameshwara) August 27, 2018
ಮಕ್ಕಳ ಮೇಲಾಗುವ ದೌರ್ಜನ್ಯ ನಿಯಂತ್ರಣಕ್ಕೆಂದೇ ಪೋಸ್ಕೊ ಕಾಯ್ದೆ ತರಲಾಗಿದೆ. ಆದರೆ ಇದರಡಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿಯುತ್ತಿರುವುದು ಆರೋಪಿಗಳಲ್ಲಿ ಭಯ ಕಡಿಮೆಯಾಗಿದೆ. ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರಕರಣಗಳು ಯಾವ ಕಾರಣಕ್ಕೆ ತಡವಾಗುತ್ತಿದೆ? ಪೊಲೀಸ್ ಇಲಾಖೆಯಿಂದ ಸಾಕ್ಷಾಧಾರ ಕಲೆಹಾಕುವಲ್ಲಿ ತಡವಾಗುತ್ತಿದೆಯೇ? ಈ ಬಗ್ಗೆ ನನ್ನ ಗಮನಕ್ಕೆ ತನ್ನಿ. ಸಣ್ಣ ಕಾರಣಕ್ಕೆ ಪ್ರಕರಣವನ್ನು ಬಾಕಿ ಇಡಬಾರದು. ಪೊಲೀಸ್ ಅಧಿಕಾರಿಗಳ ಸಹಕಾರವಿಲ್ಲದಿದ್ದರೆ ಡಿಜಿ ಅವರ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಈಗ ಬಾಕಿ ಇರುವ ಪ್ರಕರಣಗಳ ಕಾರಣಗಳನ್ನು 15 ದಿನದೊಳಗೆ ಮರುಪರಿಶೀಲನೆ ಮಾಡಿ, ಬಾಕಿ ಪ್ರಕರಣ ಕೈಗೆತ್ತಿಕೊಳ್ಳಿ ಎಂದು ಪರಮೇಶ್ವರ ಸೂಚಿಸಿದರು. ಈ ಸಂದರ್ಭದಲ್ಲಿ ಡಿಜಿ ನೀಲಮಣಿ ರಾಜುಉಪಸ್ಥಿತರಿದ್ದರು.