ಸ್ವಯಂ ಉದ್ಯೋಗ ಆರಂಭಿಸಬೇಕೇ? ಹಾಗಾದಲ್ಲಿ ತಡಮಾಡದೆ ಇಲ್ಲಿ ಸಲ್ಲಿಸಿ ಅರ್ಜಿ

ಗ್ರಾಮೀಣ ಭಾಗದ ಜನರು ಸ್ವಯಂ ಉದ್ಯೋಗಕ್ಕಾಗಿ 2020-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿ ಸಾಲ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

Last Updated : Jun 12, 2020, 04:00 PM IST
ಸ್ವಯಂ ಉದ್ಯೋಗ ಆರಂಭಿಸಬೇಕೇ? ಹಾಗಾದಲ್ಲಿ ತಡಮಾಡದೆ ಇಲ್ಲಿ ಸಲ್ಲಿಸಿ ಅರ್ಜಿ  title=

ಬೆಂಗಳೂರು : ಗ್ರಾಮೀಣ ಭಾಗದ ಜನರು ಸ್ವಯಂ ಉದ್ಯೋಗಕ್ಕಾಗಿ 2020-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿ ಸಾಲ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಗ್ರಾಮೀಣ ಪ್ರದೇಶಗಳಲ್ಲಿ ಕಿರು ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಈ ಯೋಜನೆ ಅಡಿ ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ, ಯುವತಿಯರ ಸ್ವಯಂ ಉದ್ಯೋಗ ಸೇವಾ ಚಟುವಟಿಕೆಗಳಿಗೆ ಗರಿಷ್ಠ ರೂ. 10.00 ಲಕ್ಷ ಹಾಗೂ ಇತರೇ ಕೈಗಾರಿಕೆಗಳಿಗೆ ರೂ. 25.00 ಲಕ್ಷ ಯೋಜನಾ ವೆಚ್ಚಕ್ಕೆ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕಗಳ ಮೂಲಕ ಸಾಲ ಮಂಜೂರಾತಿ ಪಡೆದು ಸಾಮಾನ್ಯ ವರ್ಗಕ್ಕೆ ಸಹಾಯಧನ ಶೇ 25 ರಷ್ಟು ಮಾತ್ರ ಹಾಗೂ ವಿಶೇಷ ವರ್ಗದ (ಪ. ಜಾತಿ / ಪ. ಪಂಗಡ / ಹಿಂದುಳಿದ ವರ್ಗ / ಅಲ್ಪಸಂಖ್ಯಾತರು / ಮಾಜಿ ಸೈನಿಕರು / ಅಂಗವಿಕಲರು ಮಹಿಳೆ) ಫಲಾನುಭವಿಗಳಿಗೆ ಸಹಾಯಧನ ಶೇ 35 ರಷ್ಟು ಪಡೆಯಲು ಅವಕಾಶವಿರುತ್ತದೆ. ಸಾಮಾನ್ಯ ವರ್ಗಕ್ಕೆ ಸ್ವಂತ ಬಂಡವಾಳ ಶೇ 10 ವಿಶೇಷ ವರ್ಗಕ್ಕೆ ಶೇ 05 ರಷ್ಟು ಹೂಡಬೇಕಾಗಿರುತ್ತದೆ. 

ಅರ್ಹ ಫಲಾನುಭವಿಗಳು, ನಿಷೇಧಿತ ಚಟುವಟಿಕೆಗಳು ಹೊರತುಪಡಿಸಿ ಹೊಸದಾಗಿ ಪ್ರಾರಂಭಿಸುವ ಕಿರು ಕೈಗಾರಿಕೆ ಮತ್ತು ಸೇವಾ ಚಟುವಟಿಕೆಗೆ ಮಾತ್ರ ಅವಕಾಶವಿರುತ್ತದೆ. ಆನ್‍ಲೈನ್ ಮೂಲಕ (ವೆಬ್‍ಸೈಟ್ – www.kviconline.co.in / PMEGP e Portal (Agence – KVIB) ಅರ್ಜಿ ಸಲ್ಲಿಸಬಹುದು.ಹಾಗೂ ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯೊಂದಿಗೆ ಭಾವಚಿತ್ರ,ಯೋಜನಾ ವರದಿ, ವಯಸ್ಸಿನ ದಾಖಲಾತಿ, ವಿದ್ಯಾರ್ಹತೆ ಹಾಗೂ ಉದ್ಯಮಶೀಲತಾ ತರಬೇತಿ ಪಡೆದಿದ್ದಲ್ಲಿ ದಾಖಲಾತಿಗಳನ್ನು ಸಲ್ಲಿಸಬೇಕು. ವಿಷ ವರ್ಗಕ್ಕೆ ಸೇರಿದವರು ಜಾತಿ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರ, ಮಾಜಿ ಸೈನಿಕ ಪ್ರಮಾಣ ಪತ್ರ, ಯೋಜನೆಯ ನಿಯಮದಂತೆ ಇತರೇ ನಿಗದಿತ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಈ ಕಚೇರಿಗೆ ಸಲ್ಲಿಸುವುದು. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಕೊಠಡಿ ಸಂಖ್ಯೆ: 224, ಜಿಲ್ಲಾ ಆಡಳಿತ ಭವನ, ಗದಗ ಇವರನ್ನು ಸಂಪರ್ಕಿಸಬಹುದಾಗಿದೆ. (ಮೊಬೈಲ್ ನಂಬರ : 9480825626 ಮತ್ತು ದೂರವಾಣಿ _ (08372) 220505 ).

Trending News