ಪ್ರಶಾಂತ್ ಸಂಬರಗಿಗೆ ಸಾಮಾಜಿಕ ಮಾಧ್ಯಮದ ಮೂಲಕ ತಿರುಗೇಟು ನೀಡಿದ ಡಿ.ಕೆ. ರವಿ ಪತ್ನಿ ಕುಸುಮಾ

ಪ್ರಶಾಂತ್ ಸಂಬರಗಿಗೆ ತಕ್ಕ ಉತ್ತರ ನೀಡಿರುವುದಕ್ಕೆ ಮೆಚ್ಚುಗೆಯ ಕಾಮೆಂಟ್ಸ್ ಗಳು ಬಂದಿವೆ. ಹಾಗೆಯೇ ಪ್ರಶಾಂತ್ ಸಂಬರಗಿಯ ಪ್ರಚಾರ ಪ್ರಿಯತೆ ಬಗ್ಗೆ, ಕೀಳು ಅಭಿರುಚಿ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಕುಸುಮಾ ಅವರು ಪ್ರಶಾಂತ ಸಂಬರಗಿಗೆ ಫೇಸ್ ಬುಕ್ ನಲ್ಲಿ ಬರೆದಿರುವುದು ಹೀಗಿದೆ...

Last Updated : Oct 6, 2020, 09:28 AM IST
  • ಪ್ರಚಾರ ಪಡೆಯಲು ಸಂಬಂಧವಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವ ಪ್ರಶಾಂತ್ ಸಂಬರಗಿ
  • ಡಿ.ಕೆ. ರವಿ (DK Ravi) ಮಡದಿ ಕುಸುಮಾ ಬಗ್ಗೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
  • ಪ್ರಶಾಂತ್ ಸಂಬರಗಿಗೆ ತಕ್ಕ ಉತ್ತರ ನೀಡಿರುವುದಕ್ಕೆ ಮೆಚ್ಚುಗೆಯ ಕಾಮೆಂಟ್ಸ್ ಗಳು ಬಂದಿವೆ. ಹಾಗೆಯೇ ಪ್ರಶಾಂತ್ ಸಂಬರಗಿಯ ಪ್ರಚಾರ ಪ್ರಿಯತೆ ಬಗ್ಗೆ, ಕೀಳು ಅಭಿರುಚಿ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಪ್ರಶಾಂತ್ ಸಂಬರಗಿಗೆ ಸಾಮಾಜಿಕ ಮಾಧ್ಯಮದ ಮೂಲಕ ತಿರುಗೇಟು ನೀಡಿದ ಡಿ.ಕೆ. ರವಿ ಪತ್ನಿ ಕುಸುಮಾ  title=
Image courtesy: Facebook@kusumaforRRnagar

ಬೆಂಗಳೂರು: ಪ್ರಚಾರ ಪಡೆಯಲು ಸಂಬಂಧವಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವ ಪ್ರಶಾಂತ್ ಸಂಬರಗಿ ಈಗ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ (D K Ravi) ಮಡದಿ ಕುಸುಮಾ ಬಗ್ಗೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ಕುಸಮಾ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ಬಿಜೆಪಿಗೆ ಸೇರಿರುವ ಪ್ರಶಾಂತ್ ಸಂಬರಗಿ (Prashanth sambaragi) ಪರೋಕ್ಷವಾಗಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಡ್ರಗ್ಸ್ ಧಂಧೆಯ ವಿಚಾರವಾಗಿ ಶಾಸಕ ಜಮೀರ್ ಅಹಮದ್ ಅವರ ಹೆಸರು ಪ್ರಸ್ತಾಪಿಸಿದ್ದರು. ಈಗ ಕಾಂಗ್ರೆಸ್ ಸೇರಿರುವ ಡಿ.ಕೆ. ರವಿ ಮಡದಿ ಕುಸುಮಾ (Kusuma) ಬಗ್ಗೆ  ಫೇಸ್ ಬುಕ್ (Facebook) ಟೀಕೆ ಮಾಡಿದ್ದರು. ಈಗ ಪ್ರಶಾಂತ್ ಸಂಬರಗಿಗೆ ಫೇಸ್ ಬುಕ್ ಮೂಲಕವೇ ಕುಸುಮಾ ತಿರುಗೇಟು ನೀಡಿದ್ದಾರೆ.

ಪ್ರಶಾಂತ್ ಸಂಬರಗಿಗೆ ತಕ್ಕ ಉತ್ತರ ನೀಡಿರುವುದಕ್ಕೆ ಮೆಚ್ಚುಗೆಯ ಕಾಮೆಂಟ್ಸ್ ಗಳು ಬಂದಿವೆ. ಹಾಗೆಯೇ ಪ್ರಶಾಂತ್ ಸಂಬರಗಿಯ ಪ್ರಚಾರ ಪ್ರಿಯತೆ ಬಗ್ಗೆ, ಕೀಳು ಅಭಿರುಚಿ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಕುಸುಮಾ ಅವರು ಪ್ರಶಾಂತ ಸಂಬರಗಿಗೆ ಫೇಸ್ ಬುಕ್ ನಲ್ಲಿ ಬರೆದಿರುವುದು ಹೀಗಿದೆ...

ಸಹೋದರ ಪ್ರಶಾಂತ್ ಸಂಬರಗಿ ಅವರಿಗೆ,
ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವಸಮೂಹಕ್ಕೆ ಡ್ರಗ್ಸ್ ವಿರುದ್ದವಾಗಿ ಜಾಗ್ರತೆ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು.

ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ (Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ.

ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ, ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?
ಹೆಣ್ಣು‌ ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೆ?
ಬೇರೆಯವರ ಮನೆಯ ಹೆಣ್ಣುಮಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ?
ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ದಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ.
ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ.
 

Trending News