Congress MLAs: ನಾಯಕರ ವಿರುದ್ಧವೇ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು: ಭಿನ್ನಮತ ಶಮನವೇ ದೊಡ್ಡ ಸವಾಲು

ಇತ್ತೀಚಿಗೆ ಕೆಪಿಸಿಸಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅರ್ಜಿ ಅವಕಾಶ ಮುಕ್ತಗೊಳಿಸಿತ್ತು. ಈ ಕಾರಣ ಹಾಲಿ ಹಾಗೂ ಮಾಜಿ ಶಾಸಕರು, ಆಕಾಂಕ್ಷಿಗಳ ವಿರುದ್ಧ ಕ್ಷೇತ್ರದಲ್ಲಿ ಪೈಪೋಟಿ ನಡೆಸುವಂತಾಗಿದೆ. ಇದಲ್ಲದೆ ಕೆಪಿಸಿಸಿ ಪ್ರತಿ ಕ್ಷೇತ್ರದಿಂದ 1 ರಿಂದ 3 ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲು ಸೂಚಿಸಲಾಗಿದೆ.

Written by - Prashobh Devanahalli | Edited by - Bhavishya Shetty | Last Updated : Dec 22, 2022, 11:09 AM IST
    • ಇತ್ತೀಚಿಗೆ ಕೆಪಿಸಿಸಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅರ್ಜಿ ಅವಕಾಶ ಮುಕ್ತಗೊಳಿಸಿತ್ತು
    • ಹಾಲಿ ಹಾಗೂ ಮಾಜಿ ಶಾಸಕರು, ಆಕಾಂಕ್ಷಿಗಳ ವಿರುದ್ಧ ಕ್ಷೇತ್ರದಲ್ಲಿ ಪೈಪೋಟಿ ನಡೆಸುವಂತಾಗಿದೆ
    • ಕೆಪಿಸಿಸಿ ಪ್ರತಿ ಕ್ಷೇತ್ರದಿಂದ 1 ರಿಂದ 3 ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲು ಸೂಚಿಸಲಾಗಿದೆ
Congress MLAs: ನಾಯಕರ ವಿರುದ್ಧವೇ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು: ಭಿನ್ನಮತ ಶಮನವೇ ದೊಡ್ಡ ಸವಾಲು title=
Congress

Congress MLAs: ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಕೈ ಶಾಸಕರ ಅಸಮಾಧಾನ ಹೆಚ್ಚಾಗಿದ್ದು, ಇದನ್ನ ಯಾವ ರೀತಿ ಸರಿಪಡಿಸಬೇಕು ಎಂಬುದು ಕೆಪಿಸಿಸಿ ನಾಯಕರಿಗೆ ದೊಡ್ಡ ಸವಾಲಾಗಿದೆ 

ಇತ್ತೀಚಿಗೆ ಕೆಪಿಸಿಸಿ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅರ್ಜಿ ಅವಕಾಶ ಮುಕ್ತಗೊಳಿಸಿತ್ತು. ಈ ಕಾರಣ ಹಾಲಿ ಹಾಗೂ ಮಾಜಿ ಶಾಸಕರು, ಆಕಾಂಕ್ಷಿಗಳ ವಿರುದ್ಧ ಕ್ಷೇತ್ರದಲ್ಲಿ ಪೈಪೋಟಿ ನಡೆಸುವಂತಾಗಿದೆ. ಇದಲ್ಲದೆ ಕೆಪಿಸಿಸಿ ಪ್ರತಿ ಕ್ಷೇತ್ರದಿಂದ 1 ರಿಂದ 3 ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ನಿವೇಶನ ಕೊಡದ ಬಿಲ್ಡರ್ರಿಂದ 5 ಲಕ್ಷ ಪರಿಹಾರ ಮತ್ತು ದಂಡ ಕೊಡಲು ಗ್ರಾಹಕರ ಆಯೋಗದ ಆದೇಶ

ಸರಿಸುಮಾರು ಎಲ್ಲಾ ಕ್ಷೇತ್ರಗಳಲ್ಲಿ  ತಲಾ ಐದು- ಹತ್ತು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಶಾಸಕರು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಜೊತೆ ಪೈಪೋಟಿ ನಡೆಸುವಂತಾಗಿದೆ. ಹಾಲಿ ಶಾಸಕರಾಗಿದ್ರು ಟಿಕೆಟಿಗಾಗಿ ಪೈಪೋಟಿ ನಡೆಸಬೇಕಿದೆ. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ.

ನಾವೇ ಅಭ್ಯರ್ಥಿಗಳು ಎಂಬಂತೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೆಲವು ಕಡೆ ಹಾಲಿ ಶಾಸಕರ ಬದಲಿಗೆ ತನಗೇ ಮತ ಹಾಕಿ ಎನ್ನುತ್ತಿದ್ದಾರೆ. ಇದರಿಂದ ನಮಗೆ ಮುಜುಗರವಾಗಿದೆ ಅಂತ ಅಸಮಾಧಾನವನ್ನು ಕಾಂಗ್ರೆಸ್ ‌ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಗೆ ತಲೆ ನೋವು ತಂದ ಅರ್ಜಿಗೆ ಐದು ಸಾವಿರ ಆಫರ್:

ಕಾಂಗ್ರೆಸ್ ಪಕ್ಷದಿಂದ ಮುಂಬರುವ 2023ರ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡುವ ಆಕಾಂಕ್ಷಿಗಳಿಗೆ ₹5000 ಅರ್ಜಿ ಆಫರ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಲೆ ನೋವು ತಂದಿದೆ.

ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಆಸಕ್ತಿ ಇರುವವರು. ಅರ್ಜಿ ಹಾಕಬಹುದು ಹಾಗೂ ಅರ್ಜಿಗೆ ₹ 5000 ಜೊತೆಗೆ ₹2 ಲಕ್ಷ ಬಾಂಡ್ ನೀಡಬೇಕು ಎಂದು ಹೇಳಿದ್ದರು. ಅನೇಕ ಟಿಕೆಟ್ ಆಕಾಂಕ್ಷಿಗಳು ಹಣ ನೀಡಿ ಅರ್ಜಿ ಸಲ್ಲಿಸಿದರು. ಆದರೆ ಈಗ ಕೈ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಕೆಲ ಆಕಾಂಕ್ಷಿಗಳ ನಡೆ ಬಗ್ಗೆ ಗರಂ ಆಗಿರುವುದು ಬಹಿರಂಗವಾಗಿದೆ. ಹೀಗಾಗಿ ಎಲ್ಲಾ ಆಕಾಂಕ್ಷಿಗಳಿಗೆ ಸುತ್ತೋಲೆ ನೀಡಿದ್ದಾರೆ ಡಿಕೆ ಶಿವಕುಮಾರ್.

ಇದನ್ನೂ ಓದಿ: "ತಾಕತ್ತಿದ್ದರೆ ಭೂತಾನ್‌ ಅಡಿಕೆ ಆಮದನ್ನು ವಿರೋಧಿಸುವ ಧೈರ್ಯ ತೋರಲಿ": ಬ್ರಿಜೇಶ್‌ ಕಾಳಪ್ಪ 

ಕೆಪಿಸಿಸಿ ಕಚೇರಿಗೆ ಬಂದ ದೂರುಗಳ ಪ್ರಕಾರ ಅಂತಿಮಗೊಳಿಸುವುದಕ್ಕೂ ಮೊದಲೇ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದಕ್ಕೆ ಅನೇಕ ಕ್ಷೇತ್ರ ಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೆಲವೊಂದು ಖಡಕ್ ಸೂಚನೆ ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News