ಉಕ್ರೇನ್ ನಲ್ಲಿ ಬೇರೆ ದೇಶದವರಿಗೆ ಪ್ರಾಶಸ್ತ್ಯ, ಭಾರತೀಯರಿಗೆ ತಾರತಮ್ಯ: ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಉಕ್ರೇನ್ ನಲ್ಲಿ ಭಾರತೀಯರಿಗೆ ತಾರತಮ್ಯ ಎಸಗಲಾಗುತ್ತಿದ್ದು ರಕ್ಷಣಾ ಕಾರ್ಯಕ್ಕೆ ಇದು ತೊಡಕಾಗಿದೆ ಎಂದು ತಾಯ್ನಾಡಿಗೆ ಇಂದು ಮರಳಿದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಮೆಡಿಕಲ್ ವಿದ್ಯಾರ್ಥಿನಿ ಕಾವ್ಯಾ ಹೇಳಿದರು.

Written by - Zee Kannada News Desk | Last Updated : Mar 6, 2022, 08:51 PM IST
  • ಇದೇ ವೇಳೆ, 1000 ಅಧಿಕ ಮಂದಿ ಯುದ್ಧಗ್ರಸ್ಥ ಕೀವ್ (Ukraine) ನಲ್ಲೇ ಸಿಲುಕಿರುವ ಭಾರತೀಯರನ್ನು ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು ಈಗಾಗಲೇ 4 ವರ್ಷ ಅಲ್ಲೇ ಓದಿರುವುದರಿಂದ ಯುದ್ಧದ ನಂತರ ಅಲ್ಲೇ ವಿದ್ಯಾಭ್ಯಾಸ ಮುಂದುವರೆಸುವುದಾಗಿ ತಿಳಿಸಿದರು.
ಉಕ್ರೇನ್ ನಲ್ಲಿ ಬೇರೆ ದೇಶದವರಿಗೆ ಪ್ರಾಶಸ್ತ್ಯ, ಭಾರತೀಯರಿಗೆ ತಾರತಮ್ಯ: ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿ title=

ಚಾಮರಾಜನಗರ: ಉಕ್ರೇನ್ ನಲ್ಲಿ ಭಾರತೀಯರಿಗೆ ತಾರತಮ್ಯ ಎಸಗಲಾಗುತ್ತಿದ್ದು ರಕ್ಷಣಾ ಕಾರ್ಯಕ್ಕೆ ಇದು ತೊಡಕಾಗಿದೆ ಎಂದು ತಾಯ್ನಾಡಿಗೆ ಇಂದು ಮರಳಿದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಮೆಡಿಕಲ್ ವಿದ್ಯಾರ್ಥಿನಿ ಕಾವ್ಯಾ ಹೇಳಿದರು.

ಇದನ್ನೂ ಓದಿ: "ಭಾರತದ ಧ್ವಜವೇ ಉಕ್ರೇನ್ ನಲ್ಲಿ ನಮಗೆ ಶ್ರೀರಕ್ಷೆ".. ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಜೀ ಕನ್ನಡ ನ್ಯೂಸ್ ಜೊತೆ ಅವರು ಮಾತನಾಡಿ, ಉಕ್ರೇನ್ (Russia-Ukraine War) ನ್ ಕಾರ್ಕಿವ್ ನಿಂದ ಗಡಿ ಭಾಗಗಳಿಗೆ ತೆರಳಲು ರೈಲಿನಲ್ಲೇ ಹೋಗಬೇಕಿದ್ದು ಭಾರತೀಯರಿಗೆ ಕೊನೆಯ ಅವಕಾಶ ಕೊಡಲಾಗುತ್ತದೆ. ಮೊದಲು ಉಕ್ರೇನಿಯರಿಗೆ ಅವಕಾಶ, ನಂತರ ನೈಜಿರಿಯನ್ಸ್, ಬಳಿಕ ಟಿಬೆಟಿಯನ್ ಅದಾದನಂತರ ಚೈನಿಸ್ ಕೊನೆಗೇ ಭಾರತೀಯರು ಅದರಲ್ಲೂ ಮಹಿಳೆಯರನ್ನು ಮಾತ್ರ ರೈಲಿನಲ್ಲಿ ಹತ್ತಿಸಿಕೊಳ್ಳುತ್ತಿದ್ದರು ಇದರಿಂದಾಗಿ ಸಾವಿರಕ್ಕೂ ಅಧಿಕ ಮಂದಿ ಇನ್ನೂ ಅಲ್ಲೇ ಉಳಿದಿದ್ದಾರೆ ಎಂದು ಅಲ್ಲಿನ ವಾಸ್ತವತೆ ಬಿಚ್ಚಿಟ್ಟರು.

ಇದನ್ನೂ ಓದಿ: ಉಕ್ರೇನ್‌ನಿಂದ ವಾಪಸಾದ ಧಾರವಾಡದ ವಿದ್ಯಾರ್ಥಿನಿಗೆ ಸಿಎಂ ಬೊಮ್ಮಾಯಿ ಸ್ವಾಗತ

"ನಾವು ಭಾರತದ 7 ಮಂದಿ ಸಹಪಾಠಿಗಳು 9 ದಿನ ಬಂಕರ್ ನಲ್ಲೇ ಉಳಿದುಕೊಂಡಿದ್ದೆವು. ಕರ್ಫ್ಯೂ ತೆಗೆದ ಬಳಿಕವಷ್ಟೇ ಊಟ, ನೀರು ಶೇಖರಿಸಿಟ್ಟಿಕೊಳ್ಳುತ್ತಿದ್ದೆವು.ಬಾಂಬ್ ಸದ್ದು, ಮಿಸೈಲ್ ಹಾರುವುದು ಕಿವಿಗೆ ಅಪ್ಪಳಿಸುತ್ತಿತ್ತು. ಮಾ.2 ರಂದು ಪೊಲಾಂಡ್ ಗಡಿಗೆ ತಲುಪಿದ ನಂತರ ಭಾರತ ರಾಯಭಾರಿ ಕಚೇರಿ ತಮಗೆ ಹೆಚ್ಚು ಸಹಾಯ ಮಾಡಿತು "ಎಂದು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಇದೇ ವೇಳೆ, 1000  ಅಧಿಕ ಮಂದಿ ಯುದ್ಧಗ್ರಸ್ಥ ಕೀವ್ (Ukraine) ನಲ್ಲೇ ಸಿಲುಕಿರುವ ಭಾರತೀಯರನ್ನು ಕರೆಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು ಈಗಾಗಲೇ 4 ವರ್ಷ ಅಲ್ಲೇ ಓದಿರುವುದರಿಂದ ಯುದ್ಧದ ನಂತರ ಅಲ್ಲೇ ವಿದ್ಯಾಭ್ಯಾಸ ಮುಂದುವರೆಸುವುದಾಗಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News