ದೇಶ ಕಂಡ‌ ಅತ್ಯುತ್ತಮ ರಂಗಕರ್ಮಿ ಗಿರೀಶ್ ಕಾರ್ನಾಡ್: ಡಿಸಿಎಂ ಡಾ.ಜಿ. ಪರಮೇಶ್ವರ

ಶ್ರೇಷ್ಠ ವ್ಯಕ್ತಿಯನ್ನ ಕಳೆದುಕೊಂಡು ಸಾಹಿತ್ಯ ಲೋಕ ಬಡವಾಗಿದೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಸಂತಾಪ

Last Updated : Jun 10, 2019, 12:20 PM IST
ದೇಶ ಕಂಡ‌ ಅತ್ಯುತ್ತಮ ರಂಗಕರ್ಮಿ ಗಿರೀಶ್ ಕಾರ್ನಾಡ್: ಡಿಸಿಎಂ ಡಾ.ಜಿ. ಪರಮೇಶ್ವರ title=

ಬೆಂಗಳೂರು: ಕರುನಾಡು ಕನ್ನಡ ಸಾಹಿತಿ, ನಟ, ಕವಿ ಗಿರೀಶ್‌ ಕಾರ್ನಾಡ್‌ ಅವರು ಇಂದು ವಿಧಿವಶರಾಗಿದ್ದು ಅತ್ಯಂತ  ನೋವುಂಟು ಮಾಡಿದೆ. ಶ್ರೇಷ್ಠ ವ್ಯಕ್ತಿಯನ್ನ ಕಳೆದುಕೊಂಡು ಸಾಹಿತ್ಯ ಲೋಕ ಬಡವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ಜಲಸಂಪನ್ಮೂಲ ಇಲಾಖೆಯ ಸಮ್ಮೇಳನ ಸಭೆಯನ್ನು ಮುಂದೂಡಿ, ಕಾರ್ನಾಡ್‌ ಅವರ ನಿಧನಕ್ಕೆ ಮೌನ ಸಂತಾಪ ಆಚರಿಸಿದರು. ಬಳಿಕ ಮಾತನಾಡಿದ ಅವರು,   ಜ್ಞಾನಪೀಠ ಪುರಸ್ಕೃತರಾದ ಕಾರ್ನಾಡ್‌ ನಿಧನದ ಹಿನ್ನೆಲೆಯಲ್ಲಿ ಇಂದು ಸರಕಾರಿ ರಜೆ ಹಾಗೂ ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ಸರ್ಕಾರ ಅವರಿಗೆ ಗೌರವ ಸಮರ್ಪಿಸಿದೆ.

ಕಾರ್ನಾಡ್‌ ಅವರು ಕನ್ನಡಕ್ಕೆ 7 ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಪದ್ಮಶ್ರೀ ಪದ್ಮಭೂಷಣ ಗೌರವ ಸಲ್ಲಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ಸಿಗಲಿ ಎಂದು ಪ್ರಾರ್ಥಿಸುವೆ ಎಂದರು.

Trending News