ಡಿಕೆಶಿ ಪುತ್ರಿ ಐಶ್ವರ್ಯ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್..!

ಡಿ.ಕೆ ಶಿವಕುಮಾರ್ ಪುತ್ರಿ ಮತ್ತು ಉದ್ಯಮಿ, ಕಾಫಿ ಡೇ  ಸಿದ್ಧಾರ್ಥ ಹೆಗಡೆ ಪುತ್ರನ ನಿಶ್ಚಿತಾರ್ಥ

Last Updated : Nov 18, 2020, 01:50 PM IST
  • ಡಿ.ಕೆ ಶಿವಕುಮಾರ್ ಪುತ್ರಿ ಮತ್ತು ಉದ್ಯಮಿ, ಕಾಫಿ ಡೇ ಸಿದ್ಧಾರ್ಥ ಹೆಗಡೆ ಪುತ್ರನ ನಿಶ್ಚಿತಾರ್ಥ
  • ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ
  • . ಡಿ.ಕೆ ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ
ಡಿಕೆಶಿ ಪುತ್ರಿ ಐಶ್ವರ್ಯ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್..! title=

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಮತ್ತು ಉದ್ಯಮಿ, ಕಾಫಿ ಡೇ  ಸಿದ್ಧಾರ್ಥ ಹೆಗಡೆ ಅವರ ಪುತ್ರ ಅಮರ್ಥ್ಯ ಹೆಗಡೆಯ ನಿಶ್ಚಿತಾರ್ಥ ನಾಳೆ ನಡೆಯಲಿದೆ.

ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್‍ವೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಡಿ.ಕೆ ಶಿವಕುಮಾರ್(D.K. Shivakumar) ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಹಾರಾಷ್ಟ್ರ ಡಿಸಿಎಂಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್‍ವೈ!

ಅಮರ್ಥ್ಯ ಅಮೇರಿಕಾದಲ್ಲಿ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಅವರು ಇಂಜಿನಿಯರಿಂಗ್ ಮಾಡಿ, ಡಿಕೆಶಿಗೆ ಸೇರಿದ ಕಾಲೇಜು ನೋಡಿಕೊಳ್ಳುತ್ತಿದ್ದಾರೆ.

BREAKING NEWS: ರಾಜ್ಯದಲ್ಲಿ 'ಹೊಸ ಜಿಲ್ಲೆ' ರಚನೆಗೆ ಸಚಿವ ಸಂಪುಟ ಒಪ್ಪಿಗೆ..!

ಅಮರ್ಥ್ಯ ಕಾಫಿ ಡೇ ಸಿದ್ಧಾರ್ಥ ಅವರ ಹಿರಿಯ ಪುತ್ರನಾಗಿದ್ದು ತಂದೆ ಮೃತಪಟ್ಟ ನಂತರ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ನಡೆಸುತ್ತಿರುವ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ದಾರ್ಥ ಇಬ್ಬರು ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು. ಸಿದ್ಧಾರ್ಥ ಹೆಗಡೆ ಆಘಾತಕಾರಿ ರೀತಿಯಲ್ಲಿ ಸಾವನ್ನಪ್ಪಿದಾಗ ಡಿ.ಕೆ. ಶಿವಕುಮಾರ್ ಕುಟುಂಬ ಸಿದ್ಧಾರ್ಥ ಹೆಗಡೆ ಕುಟುಂಬದ ಜೊತೆಗಿದ್ದು, ಧೈರ್ಯ ತುಂಬಿದ್ದರು.

ಹಂಪಿಯಲ್ಲಿ ತಲೆ ಎತ್ತಲಿದೆ 'ವಿಶ್ವದ ಅತೀ ಎತ್ತರದ ಹನುಮಂತ'ನ ಪ್ರತಿಮೆ!

Trending News