ಮತ್ತೆ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ‌ ಸ್ಥಾನ ಗಳಿಸಿದೆ. 

Last Updated : Aug 20, 2020, 12:47 PM IST
ಮತ್ತೆ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ title=

ನವದೆಹಲಿ: 2016ರಲ್ಲಿ ಆರಂಭವಾದ ಮೊದಲ ಸ್ವಚ್ಛತಾ ಸಮೀಕ್ಷೆಯಲ್ಲಿ ಇಡೀ‌ ದೇಶದಲ್ಲೇ ಸ್ವಚ್ಚತಾ ನಗರ ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ರಾಜ್ಯದ ಸಾಂಸ್ಕೃತಿಕ ನಗರ ಮತ್ತು ಮೂರನೇ ಅತಿದೊಡ್ಡ ನಗರ ಮೈಸೂರಿಗೆ  (Mysore) ಈ ಬಾರಿ 'ಸ್ವಚ್ಛ ನಗರ' (Clean City) ಎಂಬ ಹಿರಿಮೆ ಕೈತಪ್ಪಿದೆ.

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ‌ ಸ್ಥಾನ ಗಳಿಸಿದೆ. ಗುಜರಾತಿನ ಸೂರತ್ ಎರಡನೇ ಸ್ಥಾನ ಪಡೆದುಕೊಂಡಿದೆ. ಮಹಾರಾಷ್ಟ್ರದ ನವೀ ‌ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜನವರಿ 2016ರಲ್ಲಿ 73 ಪ್ರಮುಖ ನಗರಗಳ ನಡುವೆ ಮೊದಲ ಬಾರಿಗೆ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು. ಆಗ ಮೈಸೂರು ಮೊದಲ ಸ್ಥಾನ ಪಡೆದಿತ್ತು. 2017ರಲ್ಲಿ 434 ನಗರಗಳ ನಡುವೆ ಸಮೀಕ್ಷೆ  ನಡೆಸಿತ್ತು. 2018ರಲ್ಲಿ 4,203 ನಗರಗಳೊಂದಿಗೆ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು‌. 2019ರಲ್ಲಿ 4,237 ನಗರಗಳನ್ನು ಒಳಗೊಂಡ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು. ಈ ಮೂರು ವರ್ಷ ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ‌ ಸ್ಥಾನ ಗಳಿಸಿತ್ತು. 2020ರಲ್ಲೂ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಇದು ದೇಶದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿಯಾಗಿದೆ.

2020ರ ಸ್ವಚ್ಚತಾ ಸಮೀಕ್ಷೆಯಲ್ಲಿ 4,242 ನಗರಗಳು, 62 ಕಂಟೋನ್ಮೆಂಟ್ ಮಂಡಳಿಗಳು ಮತ್ತು 92  ಪಟ್ಟಣಗಳ 1.87 ಕೋಟಿ ಜನರು ಭಾಗವಹಿಸಿದ್ದರು. 28 ದಿನಗಳಲ್ಲಿ  ಹೊಸ ಮಾದರಿಯಲ್ಲಿ ನಡೆಸಿರುವ ಇದು ಸಂಪೂರ್ಣವಾದ ಡಿಜಿಟಲ್ ಸಮೀಕ್ಷೆಯಾಗಿದೆ.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ), ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್), ಗೂಗಲ್ ಸೇರಿದಂತೆ ಸ್ವಚ್ಛ ಭಾರತ ಅಭಿಯಾನ – ನಗರ ಪ್ರಯಾಣದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಗಳ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ.

Trending News