New Year 2023: ನ್ಯೂ ಇಯರ್ ಹೆಸರಲ್ಲಿ ಕೋವಿಡ್ ರೂಲ್ಸ್ ಬ್ರೇಕ್, ಹೆಚ್ಚಾಯ್ತು ಟೆನ್ಶನ್!

COVID-19: ಕೊರೊನಾ ಹೊಸ ಅಲೆಯ ಆತಂಕ ಹಿನ್ನಲೆ ಆರೋಗ್ಯ ಇಲಾಖೆಯು ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ ಮಾಡಿದೆ. ಹೈ-ರಿಸ್ಕ್‌ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

Written by - Zee Kannada News Desk | Last Updated : Jan 1, 2023, 09:11 AM IST
  • ಕೊರೊನಾ ಹೊಸ ಅಲೆಯ ಆತಂಕ ಹಿನ್ನಲೆ ಆರೋಗ್ಯ ಇಲಾಖೆಯಿಂದ ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್
  • ಹೈ-ರಿಸ್ಕ್‌ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
  • 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ
New Year 2023: ನ್ಯೂ ಇಯರ್ ಹೆಸರಲ್ಲಿ ಕೋವಿಡ್ ರೂಲ್ಸ್ ಬ್ರೇಕ್, ಹೆಚ್ಚಾಯ್ತು ಟೆನ್ಶನ್! title=
ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ!

ಬೆಂಗಳೂರು: ಹೊಸ ವರ್ಷಾಚರಣೆ ಹೆಸರಲ್ಲಿ ಕೋವಿಡ್-19 ರೂಲ್ಸ್ ಬ್ರೇಕ್ ಮಾಡಿದ್ದು, ಆರೋಗ್ಯ ಇಲಾಖೆಗೆ ಟೆನ್ಶನ್ ಹೆಚ್ಚಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಕೋವಿಡ್ ರೂಲ್ಸ್ ಮಾಯವಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆಗೆ ಕೋವಿಡ್ ಟೆನ್ಶನ್ ಹೆಚ್ಚಾಗಿದೆ.

ಕೊರೊನಾ ಹೊಸ ಅಲೆಯ ಆತಂಕ ಹಿನ್ನಲೆ ಆರೋಗ್ಯ ಇಲಾಖೆಯು ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ ಮಾಡಿದೆ. ಹೈ-ರಿಸ್ಕ್‌ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿ ನಿಗಮದಿಂದ ಮೃತ ಚಾಲಕನ ಕುಟುಂಬಕ್ಕೆ 1 ಕೋಟಿ ನೆರವು!

7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಚೀನಾ, ಹಾಂಕಾಂಗ್, ಜಪಾನ್, ಸೌತ್ ಕೊರಿಯಾ ಸಿಂಗಾಪುರ ಹಾಗೂ ಥೈಲಾಂಡ್ ನಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ.

ಹೈರಿಸ್ಕ್ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ನೆಗೆಟಿವ್‌ ವರದಿ ಬರವವರೆಗೂ ಆರೋಗ್ಯ ಇಲಾಖೆಯು 7 ದಿನಗಳ ಕಾಲ ಮನೆಯಲ್ಲಿಯೇ ಐಸೋಲೇಶನ್ ಕಡ್ಡಾಯಗೊಳಿಸಿದೆ.

ಇದನ್ನೂ ಓದಿ: Happy New Year 2023: ಹುಚ್ಚೆದ್ದು ಕುಣಿದು ಹೊಸ ವರ್ಷವನ್ನು ಸ್ವಾಗತಿಸಿದ ಬೆಂಗಳೂರು ಮಂದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News