ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬೋರ್ಡ್ ಹಾಕಲಿ: ಕಾಂಗ್ರೆಸ್

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬಗ್ಗೆ ಬೋರ್ಡ್ ಹಾಕಿಲಿ ಎಂದು ಟೀಕಿಸಿದೆ.

Written by - Puttaraj K Alur | Last Updated : Oct 30, 2022, 12:00 PM IST
  • ಸಿಎಂ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು.
  • ಲಂಚ ಪಡೆಯಲಾಗುವುದು ಹಾಗೂ ಲಂಚ ನೀಡಲಾಗುವುದು ಎಂಬ ಬೋರ್ಡ್ ಹಾಕಿಕೊಳ್ಳಲಿ!
  • #PayCM ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬೋರ್ಡ್ ಹಾಕಲಿ: ಕಾಂಗ್ರೆಸ್  title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬಗ್ಗೆ ಬೋರ್ಡ್ ಹಾಕಿಲಿ ಎಂದು ಟೀಕಿಸಿದೆ.

#PayCM ಹ್ಯಾಶ್ ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಈ ಹಿಂದೆ "ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ" ಎಂದು ಅಧಿಕಾರಿಗಳು ಬೋರ್ಡ್ ಹಾಕುವ ಅಭಿಯಾನ ಶುರು ಮಾಡಿತ್ತು ಸರ್ಕಾರ. ಸಿಎಂ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು. ಹಾಗೆಯೇ "ಲಂಚ ಪಡೆಯಲಾಗುವುದು, ಹಾಗೂ ಲಂಚ ನೀಡಲಾಗುವುದು" ಎಂಬ ಬೋರ್ಡ್ ಹಾಕಿಕೊಳ್ಳಲಿ!’ ಅಂತಾ ಕುಟುಕಿದೆ.

‘ದೆಹಲಿಯಲ್ಲಿ ಹಣ ಕೊಟ್ಟು ಸಚಿವರಾದವರಿದ್ದಾರೆ, ಸಿಎಂ ಹುದ್ದೆಗೆ 2,500 ಕೋಟಿ ರೂ. ನೀಡಬೇಕು ಅಂತಾ ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ. ಪೋಸ್ಟಿಂಗ್‌ಗೆ 80 ಲಕ್ಷ ರೂ. ಕೊಟ್ಟು ಬರುತ್ತಾರೆ ಅಂತಾ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸಿಎಂ ಕಚೇರಿಯಿಂದ ಕೆಲ ಪತ್ರಕರ್ತರಿಗೆ 'ಸ್ವೀಟ್ ಬಾಕ್ಸ್ ಲಂಚ' ನೀಡಿದೆ. ಈ ಎಲ್ಲಾ ಸಂಗತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಲು ಎಷ್ಟು ಕಮಿಷನ್ ನೀಡಬೇಕು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಕಾರ್ಯಕರ್ತರು ಮಾತನಾಡಿದ್ದನ್ನೇ ನಾನು ಹೇಳಿದ್ದೇನೆ: ಲಂಚದ ವಿಡಿಯೋ ಬಗ್ಗೆ ಎಂಟಿಬಿ ಸ್ಪಷ್ಟನೆ

‘ಆಪರೇಷನ್ ಕಮಲದ ಮೂಲಕ ಹೋದ ಸಚಿವ MTB ನಾಗರಾಜ್ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಿದೆ ಬಿಜೆಪಿ. ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು. 80 ಲಕ್ಷ ರೂ. ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರುವಾಗ ತನಿಖೆಗೆ ನೋಟಿಸ್ ನೀಡದಿರುವುದೇಕೆ? ಸುಮೋಟೋ ಕೇಸ್ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ ಬೊಮ್ಮಾಯಿಯವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಸಚಿವ MTB ನಾಗರಾಜ್ ಅವರು#40PercentSarkaraದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ. ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳನ್ನು ನಡೆದಿರುವುದು ಸ್ಪಷ್ಟಪಡಿಸಿದ್ದಾರೆ. #PayCM ಎಂದಾಕ್ಷಣ ಉರಿದು ಬೀಳುವ ಬೊಮ್ಮಾಯಿಯವರೇ, ಪೋಸ್ಟಿಂಗ್ ಪಡೆಯಲು 70, 80 ಲಕ್ಷ ರೂ. ನೀಡಿದ್ದು ಯಾರಿಗೆ? ಯಾರು ಈ ಡೀಲಿಂಗ್ ಮಾಡುವುದು?’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಪಿಎಸ್‌ಐ ಅಕ್ರಮ ನಡೆದಾಗ, ಬೋರ್ ವೆಲ್ ಅಕ್ರಮ ನಡೆದಾಗ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ ಮತ್ತು ಗಂಗಾ ಕಲ್ಯಾಣ ಹಗರಣ ನಡೆದಾಗ ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ಬಿಜೆಪಿ. ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಇದೂ ಬಯಲಾಗಲಿದೆ. ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ’ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಕಾನ್ಸ್‌ಟೇಬಲ್‌ ಹುದ್ದೆಗೆ ಇಂಗ್ಲಿಷ್, ಹಿಂದಿಯಲ್ಲಿ ಪರೀಕ್ಷೆ: ಕನ್ನಡಿಗರ ಗತಿಯೇನು? ಎಂದು ಎಚ್‌ಡಿಕೆ ಪ್ರಶ್ನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News