ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ‘ಕೈ’ ಪಕ್ಷ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
‘ಸ್ಯಾಂಟ್ರೋ ರವಿಯನ್ನು ಪೊಲೀಸರು ಹುಡುಕುತ್ತಿದ್ದಾರಂತೆ! ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ! ಪೊಲೀಸರು ಆತನನ್ನು ಒಮ್ಮೆ ಗೃಹ ಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ! ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: Breaking News: ಚರಂಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಬಲಿ!
ಸ್ಯಾಂಟ್ರೋ ರವಿಯನ್ನ ಪೊಲೀಸರು ಹುಡುಕುತ್ತಿದ್ದಾರಂತೆ!
ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ!
ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ!
ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ?
— Karnataka Congress (@INCKarnataka) January 9, 2023
‘ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ. ತಮ್ಮ ಮಗನ ಸ್ವೀಟ್ ಬ್ರದರ್ನನ್ನು ರಕ್ಷಿಸುತ್ತಿರುವುದು ಯಾರು ಸಿಎಂ ಬಸವರಾಜ ಬೊಮ್ಮಾಯಿಯವರೇ? ಆತನನ್ನು ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ?’ ಎಂದು ಕಾಂಗ್ರೆಸ್ ಟೀಕಿಸಿದೆ.
‘#BJPvsBJP ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿದೆ. ಕರ್ನಾಟಕದ ಸುಬ್ರಹ್ಮಣ್ಯಸ್ವಾಮಿಯಾದ ಬಸವನಗೌಡ ಪಾಟೀಲ್ ಯತ್ನಾಳ್ ಸಿಡಿ ಬ್ಲಾಕ್ಮೇಲ್ ಮಾಡಿ ಮುರುಗೇಶ್ ನಿರಾಣಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ. ಹಾಗಾದ್ರೆ ಅದು ಯಾರ ಸಿಡಿ? ಸಿಡಿ ಮಾಡಿಕೊಟ್ಟಿದ್ದು ಸ್ಯಾಂಟ್ರೋ ರವಿಯೇ? ನಿರಾಣಿ ಹಣ ಕೊಟ್ಟಿದ್ದು ಯಾರಿಗೆ? ಆ ಹಣದ ಬಗ್ಗೆ ಇಡಿ ತನಿಖೆ ಏಕಿಲ್ಲ? ಇದಕ್ಕೆ ಬಿಜೆಪಿ ಉತ್ತರಿಸಬೇಕಿದೆ’ ಎಂದು ಕಾಂಗ್ರೆಸ್ ಕುಟುಕಿದೆ.
ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ.
ತಮ್ಮ ಮಗನ ಸ್ವೀಟ್ ಬ್ರದರ್ನನ್ನು ರಕ್ಷಿಸುತ್ತಿರುವುದು ಯಾರು @BSBommai ಅವರೇ?
ಆತನನ್ನು ಮುಟ್ಟಿದರೆ 'ಸಿಡಿ ಕ್ರಾಂತಿ' ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ?
— Karnataka Congress (@INCKarnataka) January 9, 2023
ಇದನ್ನೂ ಓದಿ: B Puttaswamy: ರಾಜಕೀಯ ಪ್ರವೇಶಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ; ಕ್ಲಿಯರ್ ಆಯ್ತಂತೆ ಜೆಡಿಎಸ್ ಪಟ್ಟಿ..!
ಬಿಜೆಪಿಯ ನೀತಿಗೆಟ್ಟ ಆಡಳಿತ!
ಸರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ PSI ಆರೋಪಿಗಳಿಗೆ @BJP4Karnataka ಕಾರ್ಯಕರ್ತರಿಂದ ಭವ್ಯ ಸ್ವಾಗತ.
ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು.
ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು.
ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು. pic.twitter.com/Q45ZuWl42O
— Karnataka Congress (@INCKarnataka) January 9, 2023
ಸ’ರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ PSI ಆರೋಪಿಗಳಿಗೆ ಬಿಜೆಪಿ ಕಾರ್ಯಕರ್ತರಿಂದ ಭವ್ಯ ಸ್ವಾಗತ. ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು. ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು. ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು’ ಎಂದು 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣದ ಕಿಂಗ್ಪಿನ್ ದಿವ್ಯಾ ಹಾಗರಗಿ ಫೋಟೋ ಹಂಚಿಕೊಂಡು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.