ಸ್ಯಾಂಟ್ರೋ ರವಿಯಿಂದ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು & ಡೇಟಿಂಗು ಎಲ್ಲವೂ ಬಯಲಾಗಿದೆ: ಕಾಂಗ್ರೆಸ್

ಇದುವರೆಗೂ ಚೀಫ್ ಮಿನಿಸ್ಟರ್, ಚೀಫ್ ಸಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಆಡಳಿತಕ್ಕೆ ಬಂದಮೇಲೆ "ಚೀಫ್ ಬ್ರೋಕರ್" ಎಂಬ ಹೊಸ ಹುದ್ದೆ ಸೃಷ್ಟಿಸಿ, ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Jan 7, 2023, 06:36 PM IST
  • ಸಿಎಂ ಬೊಮ್ಮಾಯಿ ಮುತುವರ್ಜಿಯೊಂದಿಗೆ ಬಿಜೆಪಿ ಸರ್ಕಾರ ಈಗ "ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ" ಆಚರಿಸುತ್ತಿದೆ!
  • 40% ಕಮಿಷನ್ ಕಡ್ಡಾಯದೊಂದಿಗೆ 100% ಹುದ್ದೆಗಳ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್!
  • ಸಂಕ್ರಾಂತಿಗೆ 'ಸಿಡಿ ಕ್ರಾಂತಿ'ಯ ನಿರೀಕ್ಷೆಯನ್ನೂ ಜನರು ಇಟ್ಟುಕೊಳ್ಳಬಹುದು! ಎಂದು ಕಾಂಗ್ರೆಸ್ ಟೀಕೆ
ಸ್ಯಾಂಟ್ರೋ ರವಿಯಿಂದ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು & ಡೇಟಿಂಗು ಎಲ್ಲವೂ ಬಯಲಾಗಿದೆ: ಕಾಂಗ್ರೆಸ್ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಇದೀಗ "ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ" ಆಚರಿಸುತ್ತಿದೆ! ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದೆ.

‘ಸಿಎಂ ಬಸವರಾಜ ಬೊಮ್ಮಾಯಿಯವರ ವಿಶೇಷ ಮುತುವರ್ಜಿಯೊಂದಿಗೆ ಬಿಜೆಪಿ ಸರ್ಕಾರ ಈಗ "ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ" ಆಚರಿಸುತ್ತಿದೆ! 40% ಕಮಿಷನ್ ಕಡ್ಡಾಯದೊಂದಿಗೆ 100% ಹುದ್ದೆಗಳ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್! ಇದರೊಂದಿಗೆ ಸಂಕ್ರಾಂತಿಗೆ 'ಸಿಡಿ ಕ್ರಾಂತಿ'ಯ ನಿರೀಕ್ಷೆಯನ್ನೂ ಜನತೆ ಇಟ್ಟುಕೊಳ್ಳಬಹುದು!’ ಎಂದು ಕುಟುಕಿದೆ.

ಇದನ್ನೂ ಓದಿ: ಉತ್ತಮ ಬೆಂಗಳೂರು ಹಾಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ ಬೊಮ್ಮಾಯಿ

‘ಸರ್ಕಾರದ "ಚೀಫ್ ಬ್ರೋಕರ್" ಸ್ಯಾಂಟ್ರೋ ರವಿಯೊಂದಿಗೆ ಉನ್ನತ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ ಎಲ್ಲರೂ ನೇರಾನೇರ ಸಂಪರ್ಕದಲ್ಲಿದ್ದಾರೆ. ಇಡೀ ಸರ್ಕಾರವೇ ಈತನ ಕೈಯ್ಯೊಳಗಿದೆ. ಆತನೊಂದಿಗೆ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು, ಡೇಟಿಂಗು ಎಲ್ಲವೂ ಬಯಲಾಗಿದೆ! ಈತನನ್ನು ಉನ್ನತ ತನಿಖೆಗೊಳಪಡಿಸಿದರೆ ಇಡೀ ಸರ್ಕಾರವೇ ಜೈಲು ಸೇರುವುದು ನಿಶ್ಚಿತ’ವೆಂದು ಕಾಂಗ್ರೆಸ್ ಕಿಡಿಕಾರಿದೆ.

‘ಇದುವರೆಗೂ ಚೀಫ್ ಮಿನಿಸ್ಟರ್, ಚೀಫ್ ಸಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಆಡಳಿತಕ್ಕೆ ಬಂದಮೇಲೆ "ಚೀಫ್ ಬ್ರೋಕರ್" ಎಂಬ ಹೊಸ ಹುದ್ದೆ ಸೃಷ್ಟಿಸಿ, ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ!! ಸ್ಯಾಂಟ್ರೋ ರವಿ ನನಗೆ ತಿಳಿದೇ ಇಲ್ಲ ಎಂದಿದ್ದ ಎಸ್.ಟಿ.ಸೋಮಶೇಖರ್ ಅಸಲಿತನ ಬಯಲಾಗಿದೆ. ಸಿಎಂ ಬೊಮ್ಮಾಯಿಯವರೂ ಆತ ನನಗೆ ತಿಳಿದೇ ಇಲ್ಲ ಎಂದಿದ್ದಾರೆ, ಅವರ ಅಸಲಿಯತ್ತು ಬಯಲಾದರೆ ಯಾವ ಸಮಜಾಯಿಷಿ ಕೊಡಬಲ್ಲರು? ಸ್ಯಾಂಟ್ರೋ ರವಿಯನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಪ್ರಕರಣ ದಾಖಲಿಸದೆ ಇನ್ಯಾವ ಆಧಾರದಲ್ಲಿ ತನಿಖೆ ಮಾಡುತ್ತಿದ್ದೀರಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ, ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ?: ಎಚ್‍ಡಿಕೆ

‘ಸಚಿವ ಎಸ್.ಟಿ.ಸೋಮಶೇಖರ್ ವರ್ಗಾವಣೆಗೆ ಸಂಬಂಧಿಸಿದಂತೆ ಆತನೊಂದಿಗೆ ಮಾತಾಡಿದ್ದಾರೆ. ಎಲ್ಲಾ ಸಚಿವರೊಂದಿಗೆ ಆತ ನಿಕಟ ಸಂಪರ್ಕದಲ್ಲಿದ್ದಾನೆ. ಸೋಮಶೇಖರ್ ಅವರೇ ನಿಮ್ಮ ರವಿಯ ಈ ಬಂಧ ಬಾಂಬೆಯ ಅನುಬಂಧವೇ?! ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದ ಚೀಫ್ ಬ್ರೋಕರ್ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಸಿಎಂ ಬೊಮ್ಮಾಯಿ ಅವರೇ? ಇದಕ್ಕೇನು ಹೇಳುತ್ತೀರಿ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News