ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?: ಬಿಜೆಪಿ

ಮಹದಾಯಿ ಹೋರಾಟವನ್ನು ಕರ್ನಾಟಕದಲ್ಲಿ ಮಾಡುವುದಕ್ಕಿಂತ ಗೋವಾದತ್ತ ಮುಖಮಾಡಿ ಪಾದ ಬೆಳೆಸಿದರೆ ಮಾತ್ರ ಯಶಸ್ವಿಯಾಗಬಹುದು ಅಂತಾ ಕಾಂಗ್ರೆಸ್ ಗೆ ಬಿಜೆಪಿ ಸಲಹೆ ನೀಡಿದೆ.

Written by - Zee Kannada News Desk | Last Updated : Mar 7, 2022, 02:05 PM IST
  • ಮೇಕೆದಾಟು ರೀತಿ ರಾಜ್ಯದ ಇತರ ಭಾಗಗಳಲ್ಲೂ ಪಾದಯಾತ್ರೆ ನಡೆಸುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದೆ
  • ಮೇಕೆದಾಟು ಹೋರಾಟಕ್ಕೆ ಕಾಂಗ್ರೆಸ್ ಆಯ್ದುಕೊಂಡಿರುವ ವಿಚಾರಗಳೆಲ್ಲವೂ ಅವರೇ ಸೃಷ್ಟಿಸಿದ ಸಮಸ್ಯೆಗಳಾಗಿವೆ
  • ತಾವೇ ಸೃಷ್ಟಿಸಿದ ಸಮಸ್ಯೆಗಳಿಗೆ ಈಗ ಹೋರಾಡುವುದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನು?
ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?: ಬಿಜೆಪಿ title=
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?

ಬೆಂಗಳೂರು: ಮಹದಾಯಿ ಯೋಜನೆ(Mekedatu Project) ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದೆ.

‘ಮೇಕೆದಾಟು ರೀತಿ ರಾಜ್ಯದ ಇತರ ಭಾಗಗಳಲ್ಲೂ ಪಾದಯಾತ್ರೆ(Mekedatu Padayatre) ನಡೆಸುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಆದರೆ ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಆಯ್ದುಕೊಂಡಿರುವ ವಿಚಾರಗಳೆಲ್ಲವೂ ಅವರೇ ಸೃಷ್ಟಿಸಿದ ಸಮಸ್ಯೆಗಳಾಗಿವೆ. ತಾವೇ ಸೃಷ್ಟಿಸಿದ ಸಮಸ್ಯೆಗಳಿಗೆ ಈಗ ಹೋರಾಡುವುದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನು?’ ಅಂತಾ ವ್ಯಂವ್ಯವಾಡಿದೆ.

ಇದನ್ನೂ ಓದಿ: ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್ ಲಿಫ್ಟ್ ಮಾಡಿದ ವಿದ್ಯಾರ್ಥಿಗಳ ಭವಿಷ್ಯವೇನು..?: ಎಚ್​ಡಿಕೆ

‘ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು? ಮಹದಾಯಿ ವಿಚಾರ(Mahadayi Project)ದಲ್ಲಿ ಹೋರಾಟ ನಡೆಸಿದ ರೈತರ ಮೇಲೆ ಸಿದ್ದರಾಮಯ್ಯ ಸರ್ಕಾರ ಲಾಠಿ ಚಾರ್ಜ್ ನಡೆಸಿತು. ಅದೇ ಕಾಂಗ್ರೆಸ್ಸಿಗರು ಈಗ ಮಹದಾಯಿ ನೀರಿಗಾಗಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದೆಲ್ಲ ದೆಹಲಿಯ ನಕಲಿ ಗಾಂಧಿಗಳನ್ನು ಮೆಚ್ಚಿಸುವ ತಂತ್ರ’ ಅಂತಾ ಬಿಜೆಪಿ ಕುಟುಕಿದೆ.

‘ಮಹದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್(Goa Congress) ಘಟಕದ ನಿಲುವಿಗೂ ಕರ್ನಾಟಕ ಕಾಂಗ್ರೆಸ್‌ ಘಟಕದ ನಿಲುವಿಗೂ ವ್ಯತ್ಯಾಸವಿದೆ. ಮಹದಾಯಿ ಹೋರಾಟವನ್ನು ಇಲ್ಲಿ ಮಾಡುವುದಕ್ಕಿಂತ ಗೋವಾದತ್ತ ಮುಖಮಾಡಿ ಪಾದ ಬೆಳೆಸಿದರೆ ಮಾತ್ರ ಯಶಸ್ವಿಯಾಗಬಹುದು. ಆದರೆ ಕಾಂಗ್ರೆಸ್ಸಿಗರಿಗೆ ಬೇಕಿರುವುದು ನೈಜ ವಿಚಾರವಲ್ಲ, ಪ್ರಚಾರ’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Budget Session 2022 : ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ : ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News