Congress : ನಾಳೆಯಿಂದ ಕಾಂಗ್ರೆಸ್ ಪಾದಯಾತ್ರೆ ; ಸರ್ಕಾರ ರಚಿಸಿದ ಚಕ್ರವ್ಯೂಹ ಛೇದಿಸಲು ಕೈ ಸಿದ್ದ? 

ಕೈ ನಾಯಕರ ಲೆಕ್ಕಾಚಾರದ ಪ್ರಕಾರ ಮೇಕೆದಾಟು ಯೋಜನೆ ಒತ್ತಾಯಿಸಿ ಪಾದಯಾತ್ರೆ ಮಾಡುವ ಮೂಲಕ ಅಧಿಕಾರ ಸುಲಭವಾಗಿ ಹಿಡಿಯಬಹುದು ಎಂದು ಪ್ಲಾನ್ ಮಾಡುತ್ತಿದೆ.

Written by - Channabasava A Kashinakunti | Last Updated : Jan 8, 2022, 10:59 AM IST
  • ಕೈ ನಾಯಕರ ಲೆಕ್ಕಾಚಾರದ ಪ್ರಕಾರ ಮೇಕೆದಾಟು ಯೋಜನೆ ಒತ್ತಾಯಿಸಿ ಪಾದಯಾತ್ರೆ
  • ಮೇಕೆದಾಟು ಪಾದಯಾತ್ರೆ ತಡೆಯೋಕೆ ಸರ್ಕಾರದಿಂದ ಟಫ್ ರೂಲ್ಸ್ ಅಸ್ತ್ರ
  • ಪ್ರತಿದಿನ 15 ಕಿಮೀ ಪಾದಯಾತ್ರೆ; 7 ಕಿಮೀ ಮಧ್ಯೆ ವಿಶ್ರಾಂತಿಗೆ ನಡಿಗೆಗೆ ಬ್ರೇಕ್!
Congress : ನಾಳೆಯಿಂದ ಕಾಂಗ್ರೆಸ್ ಪಾದಯಾತ್ರೆ ; ಸರ್ಕಾರ ರಚಿಸಿದ ಚಕ್ರವ್ಯೂಹ ಛೇದಿಸಲು ಕೈ ಸಿದ್ದ?  title=

ಬೆಂಗಳೂರು : ಸರ್ಕಾರ ವೀಕೆಂಡ್ ಕರ್ಫ್ಯು ಜೊತೆಗೆ ಕೋವಿಡ್-19 ತಡೆಗೆ ಕೆಲ ನಿರ್ಬಂಧನೆಗಳನ್ನ ಹೇರಿದ್ದು ಕಾಂಗ್ರೆಸ್ ಪಕ್ಷಕ್ಕೆ ಅದು ಚಕ್ರವ್ಯೂಹದಂತೆ ಕಾಣಿಸುತ್ತಿದೆ. ಕೈ ನಾಯಕರ ಲೆಕ್ಕಾಚಾರದ ಪ್ರಕಾರ ಮೇಕೆದಾಟು ಯೋಜನೆ ಒತ್ತಾಯಿಸಿ ಪಾದಯಾತ್ರೆ ಮಾಡುವ ಮೂಲಕ ಅಧಿಕಾರ ಸುಲಭವಾಗಿ ಹಿಡಿಯಬಹುದು ಎಂದು ಪ್ಲಾನ್ ಮಾಡುತ್ತಿದೆ.

ಮೇಕೆದಾಟು ಪಾದಯಾತ್ರೆ ತಡೆಯೋಕೆ ಸರ್ಕಾರದಿಂದ ಟಫ್ ರೂಲ್ಸ್ ಅಸ್ತ್ರ; ಕಾಂಗ್ರೆಸ್ ಬುಕ್ ಮಾಡಿದ್ದ ಹೊಟೇಲ್ ಬಂದ್ ಮಾಡಿಸಿದ ಸರ್ಕಾರ!:

ಮೇಕೆದಾಟು ಯೋಜನೆ(Mekedatu Project) ಜಾರಿಗೆ ಆಗ್ರಹಿಸಿ ಕಾಂಗ್ರಸ್ ಪಾದಯಾತ್ರೆ ಹಮ್ಮಿಕೊಂಡಿದೆ.ಪಾದಯಾತ್ರೆ ಮೂಲಕ ಜನರ ವಿಶ್ವಾಸಗಳಿಸೋಕೆ ಹೊರಟಿದೆ.ಆದ್ರೆ ಪಾದಯಾತ್ರೆಗೆ ಅವಕಾಶ ಕೊಟ್ರೆ ನಮಗೇ ಲಾಸ್ ಅಂತ ಜೆಡಿಎಸ್,ಬಿಜೆಪಿ ನಾಯಕರು ತಡೆಯೋಕೆ ಹಲವು ಪ್ರಯತ್ನಗಳನ್ನ ಮಾಡ್ತಾನೇ ಇದ್ದಾರೆ..ಆದ್ರೆ ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಕೈ‌ನಾಯಕರು ತಿರುಗೇಟು ನೀಡ್ತಾನೇ ಇದ್ದಾರೆ..ಕೋವಿಡ್ ಹೆಚ್ಚಳವಾಗ್ತಿದೆ ಅಂತ ಸರ್ಕಾರ ಟಫ್ ರೂಲ್ಸ್ ಜಾರಿಮಾಡಿದೆ..ಈ ಮೂಲಕ ಪಾದಯಾತ್ರೆಗೆ ತಡೆಯೊಡ್ಡೋಕೆ ಹೊರಟಿದೆ..ಪಾದಯಾತ್ರೆಗೆ ಬರುವರಿಗೆಂದು ಊಟ, ವಸತಿ ವ್ಯವಸ್ಥೆಗೆಂದು ಕೈ ನಾಯಕರು ಹೊಟೇಲ್, ರೆಸ್ಟೋರೆಂಟ್ ಬುಕ್ ಮಾಡಿದ್ದನ್ನೂ ಕ್ಯಾನ್ಸಲ್ ಮಾಡಿಸಿ, ಹೊಟೇಲ್ ಬಂದ್ ಮಾಡಿಸಿದ್ದಾರೆ. ಈ ಮೂಲಕ ಪಾದಯಾತ್ರೆಯನ್ನ ಅಡ್ಡದಾರಿಯಲ್ಲಿ‌ ತಡೆಯಲು ಪ್ಲಾನ್ ರೂಪಿಸಿದ್ದಾರೆ.

ಇದನ್ನೂ ಓದಿ : 'ಕನಕಪುರದ ಬಂಡೆ ಕದ್ದು ವಿದೇಶಕ್ಕೆ ಸಾಗಿಸಿದ್ದ ಸುಳ್ಳಿನ ಜಾತ್ರೆಯ ಸರದಾರ ತಿಹಾರ್ ಯಾತ್ರೆ ಮಾಡಿದ್ದ'

ಹೊಟೇಲ್ ಬಂದಾದ್ರೇನು? ಬೇರೆ ವ್ಯವಸ್ಥೆ ರೆಡಿ ಎಂದ ಕೈ ನಾಯಕರು!

ಪಾದಯಾತ್ರೆಗೆಂದು ಕಾಂಗ್ರೆಸ್ ನಾಯಕರು(Congress Leaders) ಸಂಗಮ,ಕನಕಪುರ,ರಾಮನಗರ ಎಲ್ಲಾ ಕಡೆಗಳಲ್ಲಿ 15 ದಿನಗಳ ಹಿಂದೆಯೇ ಹೊಟೇಲ್ ಬುಕ್ ಮಾಡಿದ್ರು. ಆದ್ರೆ ಹೊಟೇಲ್ ಇದ್ರೆ ತಾನೇ ವಸತಿ, ಊಟ ಸಿಕ್ಕೋದು, ನೀವು ಪಾದಯಾತ್ರೆ ಮಾಡೋದು ಅಂತ ಸರ್ಕಾರ ಅವನ್ನೇ ಬಂದ್ ಮಾಡಿಸಿದೆ. ಆದ್ರೆ, ನೀವು ಬಂದ್ ಮಾಡಿಸಿದ್ರೇನು ನಾವು ಅದಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಅಂತ ಕೈ ನಾಯಕರು ಪ್ರತಿತಂತ್ರ ಹೆಣೆದಿದ್ದಾರೆ. ಪಾದಯಾತ್ರೆಯುದ್ಧಕ್ಕೂ ಊಟ, ವಸತಿಗಾಗಿ ಹೊಲಗಳಲ್ಲೇ ಟೆಂಟ್ ಹಾಕೋಕೆ ನಿರ್ಧರಿಸಿದೆ..ಬಂದವರು ಮಲಗೋಕೆಂದು 2000 ಬೆಡ್ ಖರೀದಿಸಿದೆ. ಸ್ಥಳೀಯರಿಂದಲೇ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರಿಯುದ್ಧಕ್ಕೂ‌ಆಯಾಸಗೊಂಡವರಿಗೆ ಎಳನೀರು, ಪಾನಕ, ಕೋಸಂಬರಿ ವಿತರಣೆಯನ್ನೂ ಆಯೋಜಿಸಲಾಗಿದೆ. ಮಾರ್ಗದಲ್ಲಿ ಬರುವ ಹಳ್ಳಿಯ ಜನರೇ ಉಪಹಾರ ನೀಡೋಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ.

ಪ್ರತಿದಿನ 15 ಕಿಮೀ ಪಾದಯಾತ್ರೆ; 7 ಕಿಮೀ ಮಧ್ಯೆ ವಿಶ್ರಾಂತಿಗೆ ನಡಿಗೆಗೆ ಬ್ರೇಕ್!

ಮೇಕೆದಾಟು ಬಳಿಯ ಸಂಗಮದಿಂದ ಆರಂಭಿಸಿ 

ದೊಡ್ಡಹಾಲಹಳ್ಳಿ, ಕನಕಪುರ, ಮಾಡಾಳು, ಗಾಣಾಳು, ಲಿಂಗಾರಜಿಪುರ, ರಾಮನಗರ, ಕೆಂಗೇರಿ, ಕೆ.ಆರ್.ಪುರಂ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ(Basavanagudi National College Ground) ಸಮಾಪ್ತಿಯಾಗಲಿದೆ. ಪ್ರತಿದಿನ 15 ಕಿಲೋಮೀಟರ್ ವರೆಗೆ ನಢಿಗೆ ಇರಲಿದೆ. ಮಧ್ಯೆ 7 ಕಿಲೋಮೀಟರ್ ಗೆ ವಿಶ್ರಾಂತಿಗೆಂದು ಪಾದಯಾತ್ರೆಗೆ ಬ್ರೇಕ್ ಇರಲಿದೆ. ರಾತ್ರಿ 15 ಕೀಲೋಮೀಟರ್ ಮುಗಿಯುತ್ತಲೇ ಅವತ್ತಿನ ದಿನದ ಪಾದಯಾತ್ರೆ ಕೊನೆಗೊಳ್ಳಲಿದೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ಟಕ್ಕರ್: ಜ.26ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ

ಒಟ್ನಲ್ಲಿ ಸರ್ಕಾರ ಪಾದಯಾತ್ರೆ(Hike) ತಡೆಯೋಕೆ ಹಲವು ತಂತ್ರಗಳನ್ನ ಮಾಡ್ತಾನೇ ಇದೆ. ಅದಕ್ಕೆ ಪೂರಕವಾಗಿ ಜೆಡಿಎಸ್ ನಾಯಕರು ಬೆಂಬಲ ನೀಡ್ತಿದ್ದಾರೆ. ಆದ್ರೆ ಕೈ ನಾಯಕರು ಮಾತ್ರ ಸರ್ಕಾರ ಹಾಕಿದ ಅಡೆತಡೆಗಳನ್ನ ಭೇಧಿಸಿ ತಮ್ಮದೇ ಕಾರ್ಯತಂತ್ರಗಳನ್ನ‌ಹೆಣೆಯುವ ಮೂಲಕ ಪಾದಯಾತ್ರೆ ಸಕ್ಸಸ್ ಮಾಡೋಕೆ‌ಹೊರಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News