KH Muniyappa : ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ : ಕೆಹೆಚ್ ಮುನಿಯಪ್ಪ ಸ್ಪಷ್ಟನೆ

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಹೆಚ್ ಮುನಿಯಪ್ಪ ಎಂದು ಸ್ಪಷ್ಟನೆ ನೀಡಿದ್ದಾರೆ.

Written by - Channabasava A Kashinakunti | Last Updated : Aug 26, 2022, 05:17 PM IST
  • ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ
  • ಕಾಂಗ್ರೆಸ್ ಹಿರಿಯ ನಾಯಕ ಕೆಹೆಚ್ ಮುನಿಯಪ್ಪ ಎಂದು ಸ್ಪಷ್ಟನೆ
  • ಸುಧಾಕರ್ ತಂದೆ ಜೊತೆಗೆ 40 ವರ್ಷದ ಒಡನಾಟ ಇದೆ
KH Muniyappa : ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ : ಕೆಹೆಚ್ ಮುನಿಯಪ್ಪ ಸ್ಪಷ್ಟನೆ title=

ಬೆಂಗಳೂರು : ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆಹೆಚ್ ಮುನಿಯಪ್ಪ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುನಿಯಪ್ಪ, ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರು ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ.ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಎಲ್ಲವೂ ಊಹಾಪೋಹಗಳು ಅಷ್ಟೇ. ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಗೆ ಎಲ್ಲವೂ ಕೂಡ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಸುರ್ಜೆವಾಲಾ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಸುಧಾಕರ್ ತಂದೆ ಜೊತೆಗೆ 40 ವರ್ಷದ ಒಡನಾಟ ಇದೆ. ಸುಧಾಕರ್ ಜೊತೆಗೂ ಕೂಡ ಒಡನಾಟವಿದೆ, ಅದು ರಾಜಕೀಯ ವಿಚಾರವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : DK Shivakumar : 'ಸೆ.1 ರಂದು ರಾಜ್ಯಕ್ಕೆ ಬರಲಿದೆ ದೆಹಲಿಯಿಂದ ಕಾಂಗ್ರೆಸ್ ಸ್ಪೆಷಲ್ ಟೀಂ' 

ಆದಿಜಾಂಬವ ಮಠದ ಬಗ್ಗೆ ಮಾತನಾಡಿದ ಅವರು, ಆದಿಜಾಂಬವ 2 ಸಾವಿರ ವರ್ಷಗಳ ಇತಿಹಾಸ ಇರುವ ಮಠ ಇದು. ಕಡಪ, ಆಂಧ್ರ, ತಮಿಳುನಾಡಿನಲ್ಲಿ ಮಠಗಳಿವೆ. ಇವತ್ತು ಸಿಎಂ ಭೇಟಿ ಮಾಡಿ ಮನವಿ ಕೊಟ್ಟು ಚಿಕ್ಕಬಳ್ಳಾಪುರ ಕೋಲಾರ ಆವಣಿಯಲ್ಲಿ ಮಠದ ವಿಚಾರಕ್ಕೆ ಭೇಟಿ ಮಾಡಿದ್ದೇವೆ. ಮಠಕ್ಕೆ ಭೂಮಿಯನ್ನೂ ಕೊಡಬೇಕು ಅನುದಾನವನ್ನು ಕೊಡಬೇಕು ಅಂತ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮಠ ಅಭಿವೃದ್ಧಿ ಆಗಬೇಕು ಶೈಕ್ಷಣಿಕ ಸಂಸ್ಥೆ ಮಾಡಬೇಕು ಅಂತ ಸಿಎಂ ಭೇಟಿ ಮಾಡಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ತೀರ ಅವಶ್ಯಕತೆ ಇರೋದ್ರಿಂದ ಮಂತ್ರಿಗಳ ಮೂಲಕ ಭೇಟಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News